Advertisement

ವ್ಯಾಕ್ಸಿನೇಟ್ ಕರ್ನಾಟಕ ಅಭಿಯಾನದಡಿ ಮತ್ತೆ 3 ವಿಜೇತರ ಹೆಸರು ಪ್ರಕಟಿಸಿದ ಡಿ.ಕೆ.ಶಿವಕುಮಾರ್

07:19 PM Jun 21, 2021 | Team Udayavani |

ಬೆಂಗಳೂರು :  ಕೋವಿಡ್ ಲಸಿಕೆ‌ ಪಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಮಕ್ಕಳನ್ನು ಕೇಂದ್ರೀಕರಿಸಿ ಆರಂಭಿಸಿರುವ ವ್ಯಾಕ್ಸಿನೇಟ್ ಕರ್ನಾಟಕ ಅಬಿಯಾನದಡಿ ಮತ್ತೆ ಮೂವರು ವಿಜೇತರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರ ಪ್ರಕಟಿಸಿದ್ದಾರೆ.

Advertisement

ಬೆಂಗಳೂರಿನ ಅಕ್ಷಿತ್ ಕುಮಾರ್ ಮತ್ತು ಎಂ.ಶ್ರೇಯಾ ಹಾಗೂ ಕೊಡಗು ಜಿಲ್ಲೆಯ ಆರ್ಲಿನ್ ಫರ್ನಾಂಡೀಸ್ ಅವರು ಸ್ಪರ್ಧೆಯ ವಿಜೇತರು.

ಕೋವಿಡ್ ವ್ಯಾಕ್ಸಿನ್ ಪಡೆಯುವಂತೆ ವಯಸ್ಕರನ್ನು ಪ್ರೇರೇಪಿಸುವಲ್ಲಿ ಈ ಮಕ್ಕಳು ಉತ್ತಮ ವಿಡಿಯೋಗಳನ್ನು ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಪ್ರಶಂಸಿಸಿದ್ದಾರೆ.

ಅಭಿಯಾನ ಆರಂಭದ ಮೊದಲ ದಿನವೇ 5 ಸಾವಿರಕ್ಕೂ ಅಧಿಕ ಪ್ರವೇಶಗಳು ಬಂದಿದ್ದವು. 2ನೇ ದಿನ ಈ ಸಂಖ್ಯೆ ದುಪ್ಪಟ್ಟಾಗಿದೆ.
ವಿನೂತನವಾದ ಈ ವಿಡಿಯೋ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ರಾಜ್ಯದ 17 ವರ್ಷದೊಳಗಿನ ಎಲ್ಲ 95 ಲಕ್ಷ ಮಕ್ಕಳಿಗೂ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ :ಬ್ರಿಮ್ಸ್ ಮೂಲ ಸೌಕರ್ಯಕ್ಕೆ ರೂ.10 ಕೋಟಿ ಹೆಚ್ಚುವರಿ ಅನುದಾನ : ಸಚಿವ ಪ್ರಭು ಚವ್ಹಾಣ್

Advertisement

ಉತ್ತಮವಾದ 100 ವಿಡಿಯೋಗಳಿಗೆ ತಲಾ ಒಂದು ಆ್ಯಂಡ್ರಾಯ್ಡ್ ಟ್ಯಾಬ್ಲೆಟ್ ಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ವಯಸ್ಕರನ್ನು ಪ್ರೇರೇಪಿಸುವ 2 ನಿಮಿಷಗಳ ವಿಡಿಯೋ ಮಾಡಬೇಕು. ಈ ವಿಡಿಯೋ ಗಳನ್ನು #vaccinatekarnataka ಹ್ಯಾಸ್ ಟ್ಯಾಗ್ ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಜತೆಗೆ, www.vaccinatekarnataka.in ಗೆ ಕಳಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next