ರಾಮನಗರ : ‘ಅಣ್ಣ ತಮ್ಮಂದಿರು ಕನಕಪುರಕ್ಕೆ ಸೀಮಿತವಲ್ಲ, ರಾಮನಗರಕ್ಕೆಅನ್ಯಾಯ ಮಾಡಿದರೆ ಅವರು ಅನುಭವಿಸುತ್ತಾರೆ’ ಎಂದು ಮಾಜಿ ಸಚಿವ, ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಬುಧವಾರ ಕಿಡಿ ಕಾರಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇರು ರಾಮನಗರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರಿಸುತ್ತಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ‘ರಾಜೀವ್ ಗಾಂಧಿ ಆರೋಗ್ಯ ವಿವಿ ಅವಿಭಾಜ್ಯ ಅಂಗವಾಗಿದ್ದು ಮೆಡಿಕಲ್ ಕಾಲೇಜು ಕ್ಯಾಂಪಸ್ ಒಳಗೆ ಇರಬೇಕು.ಡಿಸಿಎಂ, ಸಿಎಂ, ಸಂಸದರು ಯಾವ ಉದ್ದೇಶದಿಂದ ವರ್ಗಾವಣೆ ಮಾಡಿದ್ದಾರೋ ಗೊತ್ತಿಲ್ಲ.ಪ್ರತಿಭಟನೆ ಬಳಿಕ ತೀರ್ಮಾನಕ್ಕೆ ಬರುತ್ತದೆ ಅಂತ ಗೊತ್ತಿದೆ.ಸಿಎಂ ಸಿದ್ದರಾಮಯ್ಯ ಅವರು ಡಿಕೆಶಿ ಧಮಕಿಗೆ ಬಗ್ಗಬಾರದು” ಎಂದರು.
”ಶಿವಕುಮಾರ್ ಸ್ವಂತ ಮೆಡಿಕಲ್ ಕಾಲೇಜು ಮಾಡಬಹುದಿತ್ತು.ಅವರದು ಹತ್ತಾರು ಸಂಸ್ಥೆ ಇದೆ.ದಯಾನಂದ ಸಾಗರ್ ಕನಕಪುರ ರಸ್ತೆಯಲ್ಲಿ ಇದೆ. ಅವರಿಗೆ ಶಕ್ತಿ ಇದೆ ಹೊಸದಾಗಿ ಮಾಡಲಿ.ಕನಕಪುರದಿಂದ ಚಿಕ್ಕಬಳ್ಳಾಪುರ ಕ್ಕೆ ಹೋಗಿಲ್ಲ.ಅಣ್ಣ, ತಮ್ಮ ಬುದ್ದಿವಂತರಿದ್ದೀರಿ, ಯೋಚನೆ ಮಾಡಿ,ನಾನೂ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ” ಎಂದರು.
”ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ನೂರಕ್ಕೆ ನೂರು ಗೆಲ್ತೀವಿ. ಬಿಜೆಪಿ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದು ನನ್ನ ವೈಯಕ್ತಿಕ ಮನವಿ. ಪ್ರಧಾನಿ ಯಾಗಿ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರಬೇಕು. ರಾಜ್ಯದಲ್ಲಿ ಬಿಜೆಪಿ 20 ಸ್ಥಾನ ಗೆಲ್ಲಬೇಕು.ಎಚ್ ಡಿಕೆ ಮತ್ತು ನಾನು ರಾಜಕೀಯವಾಗಿ ವಿರೋಧವಾಗೇ ಇದ್ದೆವು.ಯಾವುದೇ ಒಳ ಒಪ್ಪಂದ ಮಾಡಿಕೊಂಡಿರಲಿಲ್ಲ” ಎಂದರು.
”ಕಾವೇರಿ ವಿಚಾರದಲ್ಲಿಡಿ.ಕೆ.ಶಿವಕುಮಾರ್ ಅವರಿಗೆ ಬದ್ದತೆ ಇಲ್ಲ.ಐಎನ್ ಡಿಐಎ ಮಿತ್ರಪಕ್ಷ ಡಿಎಂಕೆಯ ಸ್ಟಾಲಿನ್ ನಡುವೆ ವ್ಯಾಪಾರ ವ್ಯವಹಾರ ಸಂಬಂಧ ಇದೆ. ಬೆಂಗಳೂರಿಗೆ ಕುಡಿಯುವ ಸಮಸ್ಯೆ ಅವರಿಗೆ ಬೇಕಿಲ್ಲ.ಡಿ.ಕೆ.ಶಿವಕುಮಾರ್ ಅವರಿಂದ ಈ ರಾಜ್ಯದ ಜನ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ” ಎಂದು ಕಿಡಿ ಕಾರಿದರು.