ಪ್ಯಾರಿಸ್: ಶುಕ್ರವಾರದ ಮೊದಲ ಸೆಮಿಫೈನಲ್ನಲ್ಲಿ ವಿಶ್ವದ ನಂ.1 ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರನ್ನು 6-3, 5-7, 6-1, 6-1 ಅಂತರದಿಂದ ಮಣಿಸಿದ ನೊವಾಕ್ ಜೊಕೋವಿಕ್ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ್ದಾರೆ. ಅಲ್ಕರಾಜ್ ದ್ವಿತೀಯ ಸೆಟ್ ಗೆದ್ದಾಗ ಈ ಸ್ಪರ್ಧೆ ತೀವ್ರ ಪೈಪೋಟಿ ಕಾಣುವ ಸಾಧ್ಯತೆ ಇತ್ತು. ಆದರೆ ಅನಂತರ ಜೊಕೋ ಮುಂದೆ ಸ್ಪೇನಿಗನ ಆಟ ನಡೆಯಲಿಲ್ಲ.
ಕ್ಯಾಸ್ಪರ್ ರೂಡ್-ಅಲೆಕ್ಸಾಂಡರ್ ಜ್ವೆರೇವ್ ನಡುವೆ ಇನ್ನೊಂದು ಸೆಮಿಫೈನಲ್ ನಡೆಯಲಿದ್ದು, ಇಲ್ಲಿನ ವಿಜೇತರನ್ನು ಜೊಕೋವಿಕ್ ರವಿವಾರದ ಪ್ರಶಸ್ತಿ ಸಮರದಲ್ಲಿ ಎದುರಿಸಲಿದ್ದಾರೆ.
ಇದು ಅಲ್ಕರಾಜ್ ವಿರುದ್ಧ ಆಡಿದ 2ನೇ ಪಂದ್ಯದಲ್ಲಿ ಜೊಕೋವಿಕ್ ಸಾಧಿಸಿದ ಮೊದಲ ಜಯ. ಫೈನಲ್ನಲ್ಲಿ ಗೆದ್ದರೆ 23ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಒಡೆಯನಾಗಲಿದ್ದಾರೆ. ಜೊಕೋ ಈವರೆಗೆ ಕೇವಲ 2 ಸಲ ರೊಲ್ಯಾಂಡ್ ಗ್ಯಾರೋಸ್ ಚಾಂಪಿಯನ್ ಆಗಿದ್ದಾರೆ (2016, 2021).