Advertisement

ಇಂಡಿಯನ್‌ ವೆಲ್ಸ್‌  ಟೆನಿಸ್‌: ಕ್ವಾರ್ಟರ್‌ ಫೈನಲ್‌ಗೆ ನವಾರೊ, ಗಾಫ್

10:29 PM Mar 14, 2024 | Team Udayavani |

ಇಂಡಿಯನ್‌ ವೆಲ್ಸ್‌/ ಕ್ಯಾಲಿಫೋರ್ನಿಯ: “ಬಿಎನ್‌ಪಿ ಪರಿಬಾಸ್‌ ಓಪನ್‌’ ಟೆನಿಸ್‌ ಪಂದ್ಯಾವಳಿಯ ವನಿತಾ ಸಿಂಗಲ್ಸ್‌ನಲ್ಲಿ ಕೊಕೊ ಗಾಫ್, ಎಮ್ಮಾ ನವಾರೊ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಆದರೆ ನೊವಾಕ್‌ ಜೊಕೋವಿಕ್‌ ಅವರನ್ನು ಮಣಿಸಿ ದೊಡ್ಡ ಸುದ್ದಿ ಆಗಿದ್ದ ಲುಕಾ ನಾರ್ಡಿ ಪರಾಭವಗೊಂಡರು.

Advertisement

ಅಮೆರಿಕದ ಎಮ್ಮಾ ನವಾರೊ ದ್ವಿತೀಯ ಶ್ರೇಯಾಂಕದ, ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಖ್ಯಾತಿಯ ಅರಿನಾ ಸಬಲೆಂಕಾ ಅವರಿಗೆ 6-3, 3-6, 6-2 ಅಂತರದ ಸೋಲುಣಿಸಿದರು.

ಕೊಕೊ ಗಾಫ್ ತಮ್ಮ 20ನೇ ಜನ್ಮದಿನದಂದೇ ಎಲೈಸ್‌ ಮರ್ಟೆನ್ಸ್‌ ವಿರುದ್ಧ 6-0, 6-2 ಅಂತರದ ಜಯ ಸಾಧಿಸಿದರು. “ಆಸ್ಟ್ರೇಲಿಯನ್‌ ಓಪನ್‌ ಬಳಿಕ ನಾನು ಆಡಿದ ಅತ್ಯುತ್ತಮ ಪಂದ್ಯ ಇದಾಗಿದೆ’ ಎಂಬುದಾಗಿ ಗಾಫ್ ಹೇಳಿದರು.

ನಾರ್ಡಿ ಪರಾಭವ :

ವಿಶ್ವದ ನಂ.1 ಟೆನಿಸಿಗ ನೊವಾಕ್‌ ಜೊಕೋವಿಕ್‌ ಅವರನ್ನು ಸೋಲಿಸಿ ಟೆನಿಸ್‌ ಜಗತ್ತಿನಲ್ಲಿ ಭಾರೀ ಸಂಚಲನ ಮೂಡಿಸಿದ್ದ ಇಟಲಿಯ ಲುಕಾ ನಾರ್ಡಿ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದರು. ಇವರೆದುರಿನ ಪಂದ್ಯವನ್ನು ಅಮೆರಿಕದ ಟಾಮಿ ಪೌಲ್‌ 6-4, 6-3ರಿಂದ ಗೆದ್ದರು.

Advertisement

4ನೇ ಶ್ರೇಯಾಂಕದ ಡ್ಯಾನಿಲ್‌ ಮೆಡ್ವೆಡೇವ್‌ 6-4, 6-4ರಿಂದ ಗ್ರಿಗರ್‌ ಡಿಮಿಟ್ರೋವ್‌ ಅವರಿಗೆ, ಕ್ಯಾಸ್ಪರ್‌ ರೂಡ್‌ 3-6, 7-6 (3), 6-4 ಅಂತರದಿಂದ ಗೇಲ್‌ ಮಾನ್‌ಫಿಲ್ಸ್‌ ಅವರಿಗೆ ಸೋಲುಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next