Advertisement

Indian Wells Tennis :ನೊವಾಕ್‌ ಜೊಕೋವಿಕ್‌ ಗೆ ಆಘಾತವಿಕ್ಕಿದ ನಾರ್ಡಿ

12:04 AM Mar 13, 2024 | Team Udayavani |

ಇಂಡಿಯನ್‌ ವೆಲ್ಸ್‌ (ಕ್ಯಾಲಿಫೋರ್ನಿಯ): ಐದು ಬಾರಿಯ ಚಾಂಪಿಯನ್‌ ಹಾಗೂ ವಿಶ್ವದ ನಂ.1 ಆಟಗಾರ ನೊವಾಕ್‌ ಜೊಕೋವಿಕ್‌ “ಇಂಡಿಯನ್‌ ವೆಲ್ಸ್‌ ಮಾಸ್ಟರ್’ ಟೆನಿಸ್‌ ಪಂದ್ಯಾವಳಿಯ ದ್ವಿತೀಯ ಸುತ್ತಿನಲ್ಲಿ ಆಘಾತಕಾರಿ ಸೋಲುಂಡು ಹೊರಬಿದ್ದಿದ್ದಾರೆ.

Advertisement

ಇವರನ್ನು ಮಣಿಸಿದವರು 123ನೇ ರ್‍ಯಾಂಕಿಂಗ್‌ನ ಇಟಲಿಯ “ಲಕ್ಕಿ ಲಾಸರ್‌’ ಲುಕಾ ನಾರ್ಡಿ.20 ವರ್ಷದ ಲುಕಾ ನಾರ್ಡಿ 2 ಗಂಟೆ, 20 ನಿಮಿಷಗಳ ದಿಟ್ಟ ಹೋರಾಟ ನಡೆಸಿ ಸರ್ಬಿಯನ್‌ ಟೆನಿಸಿಗನಿಗೆ 6-4, 3-6, 6-3 ಅಂತರದ ಸೋಲುಣಿಸಿದರು. .

ಅದೃಷ್ಟಶಾಲಿ ಟೆನಿಸಿಗ
ಲುಕಾ ನಾರ್ಡಿ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಡೇವಿಡ್‌ ಗೊಫಿನ್‌ ವಿರುದ್ಧ ಸೋತ ಕಾರಣ ಪ್ರಧಾನ ಸುತ್ತಿಗೇರಲು ವಿಫ‌ಲರಾಗಿದ್ದರು. ಆದರೆ ಆರ್ಜೆಂಟೀನಾದ 30ನೇ ರ್‍ಯಾಂಕಿಂಗ್‌ ಆಟಗಾರ ಥಾಮಸ್‌ ಮಾರ್ಟಿನ್‌ ಇಶೆವೆರಿ ಹಿಂದೆ ಸರಿದ ಕಾರಣ ಈ ಸ್ಥಾನ ನಾರ್ಡಿ ಪಾಲಾಯಿತು.

ಲುಕಾ ನಾರ್ಡಿ ಅವರಿಗೆ ಮೊದಲ ಸುತ್ತಿನ ಬೈ ಲಭಿಸಿತ್ತು. 64ರ ಸುತ್ತಿನ ಸ್ಪರ್ಧೆಯಲ್ಲಿ ಚೀನದ ಜಿಂಝೆನ್‌ ಜಾಂಗ್‌ ಅವರನ್ನು 6-3, 3-6, 6-3 ಅಂತರದಿಂದ ಮಣಿಸಿದರು. ಇವರ ಮುಂದಿನ ಸುತ್ತಿನ ಎದುರಾಳಿ ಅಮೆರಿಕದ ಟಾಮಿ ಪೌಲ್‌.

Advertisement

Udayavani is now on Telegram. Click here to join our channel and stay updated with the latest news.

Next