Advertisement

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

10:41 PM Apr 25, 2024 | Team Udayavani |

ಚೆನ್ನೈ: ಹದಿಹರೆಯದ ಚೆಸ್‌ ತಾರೆ ಡಿ. ಗುಕೇಶ್‌ ಮತ್ತು ಹಾಲಿ ಚಾಂಪಿಯನ್‌ ಚೀನದ ಡಿಂಗ್‌ ಲಿರೆನ್‌ ನಡುವೆ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಬಹುನಿರೀಕ್ಷಿತ  ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಸ್ಪರ್ಧೆಯ ಆತಿಥ್ಯ ಹಕ್ಕನ್ನು ಪಡೆಯಲು ಭಾರತ ಬಿಡ್‌ ಸಲ್ಲಿಸಲಿದೆ ಎಂದು ನೂತನವಾಗಿ ಆಯ್ಕೆಯಾದ ಅಖೀಲ ಭಾರತ ಚೆಸ್‌ ಫೆಡರೇಶನ್‌ (ಎಐಸಿಎಫ್) ನ ಕಾರ್ಯದರ್ಶಿ ದೇವ್‌ ಪಟೇಲ್‌ ಹೇಳಿದ್ದಾರೆ.

Advertisement

17ನ ಹರೆಯದ ಗುಕೇಶ್‌ ಕಳೆದ ಸೋಮವಾರ ಟೊರೊಂಟೋದಲ್ಲಿ ನಡೆದ ಕ್ಯಾಂಡಿಡೇಟ್ಸ್‌ ಚೆಸ್‌ ಕೂಟದ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವ ಪ್ರಶಸ್ತಿಗಾಗಿ ಸವಾಲು ನೀಡಲಿರುವ ಅತೀ ಕಿರಿಯ ಆಟಗಾರ ಎಂದೆನಿಸಿಕೊಂಡರು. ವರ್ಷಾಂತ್ಯದಲ್ಲಿ ವಿಶ್ವ ಚೆಸ್‌ ಸ್ಫರ್ಧೆಯ ದಿನಾಂಕ ಮತ್ತು ತಾಣ ಇನ್ನಷ್ಟೇ ನಿರ್ಧಾರ ವಾಗಬೇಕಾಗಿದೆ.

ಫಿಡೆ ಜತೆ ನಡೆಸಲು ನಾವು ಮುಕ್ತರಾಗಿದ್ದೇವೆ. ವಿಶ್ವ ಚೆಸ್‌ ಸ್ಫರ್ಧೆಯಲು ಭಾರತದಲ್ಲಿ ನಡೆಯುವುದು ಅತ್ಯು ತ್ತಮ ಸ್ಥಳ ಎಂದು ಗುಜರಾತ್‌ ಚೆಸ್‌ ಅಸೋಸಿ ಯೇಶನ್‌ನ ಅಧ್ಯಕ್ಷರೂ ಆಗಿರುವ ಪಟೇಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next