Advertisement

ಮಿಶ್ರ ಡಬಲ್ಸ್ ಗೆದ್ದ ದಿವಿಜ್‌ ಶರಣ್‌ ದಂಪತಿ!

03:35 PM Jul 04, 2021 | Team Udayavani |

ಲಂಡನ್: ವಿಂಬಲ್ಡನ್‌ ಮಿಶ್ರ ಡಬಲ್ಸ್‌ ವಿಸ್ಮಯವೊಂದಕ್ಕೆ ಸಾಕ್ಷಿಯಾಗಿದೆ. ಭಾರತದ ದಿವಿಜ್‌ ಶರಣ್‌ ಮತ್ತು ಅವರ ಬ್ರಿಟನ್‌ ಪತ್ನಿ ಸಮಂತಾ ಮರ್ರೆ 7 ವರ್ಷ ಕಾದ ಬಳಿಕ ವಿಂಬಲ್ಡನ್‌ನಲ್ಲಿ ಜತೆಯಾಗಿ ಆಡುವ ಅವಕಾಶ ಪಡೆದು ಮೊದಲ ಸುತ್ತು ದಾಟಿದ್ದಾರೆ.

Advertisement

ಶರಣ್‌-ಸಮಂತಾ ಸೇರಿಕೊಂಡು ಏರಿಯಲ್‌ ಬೆಹರ್‌ (ಉರುಗ್ವೆ) ಕಜಾಕ್‌ಸ್ಥಾನದ ಗಲಿನಾ ವೊಸ್ಕೊಬೊಯೇವಾ ಜೋಡಿಯನ್ನು 6-3, 5-7, 6-4 ಅಂತರದಿಂದ ಮಣಿಸಿದರು. “ಬಾಲ್‌ ಗರ್ಲ್’ ಗಾಯಾಳಾದ ಕಾರಣ ಪಂದ್ಯ ಬಹಳಷ್ಟು ಹೊತ್ತು ಸ್ಥಗಿತಗೊಂಡಿತ್ತು.

2014ರಲ್ಲೇ ವಿಂಬಲ್ಡನ್‌ ಮಿಶ್ರ ಡಬಲ್ಸ್‌ ಆಡಲು ಸಜ್ಜಾಗಿದ್ದರು. ಆದರೆ ಸಮಂತಾಗೆ ಅರ್ಹತೆ ಲಭಿಸಲಿಲ್ಲ. ಹೀಗಾಗಿ ದಿವಿಜ್‌ ಬೇರೆ ಜತೆಗಾರ್ತಿಯೊಂದಿಗೆ ಮಿಕ್ಸೆಡ್‌ ಡಬಲ್ಸ್‌ ಆಡತೊಡಗಿದರು. ಈಗ ಪತ್ನಿಯೊಂದಿಗೆ ಆಡುವ ಆಸೆ ಈಡೇರಿದೆ.

8 ವರ್ಷಗಳ ಹಿಂದೆಯೇ ಇವರಿಬ್ಬರ ವಿವಾಹ ಮ್ಯಾಂಚೆಸ್ಟರ್‌ನಲ್ಲಿ ಏರ್ಪಟ್ಟಿತ್ತು. ಬಳಿಕ 2019ರಲ್ಲಿ ಭಾರತದಲ್ಲೂ ಇಲ್ಲಿನ ಸಂಪ್ರದಾಯದಂತೆ ವಿವಾಹ ಶಾಸ್ತ್ರ ನೆರವೇರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next