Advertisement
ಸಮಾರಂಭವನ್ನು ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿÅà ಇದರ ಕಾರ್ಯಾಧ್ಯಕ್ಷ, ಭಾರತ್ ಬ್ಯಾಂಕ್ ಇದರ ನಿರ್ದೇಶಕ ಎನ್. ಟಿ. ಪೂಜಾರಿ ಇವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಖ್ಯವಾಗಿರುತ್ತದೆ. ಆ ಗುರಿಯನ್ನು ತಲುಪುವ ಛಲ, ಪರಿಶ್ರಮವಿದ್ದಾಗ ಮಾತ್ರ ಯಶಸ್ವಿ ಜೀವನ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು. ತಾವು ಕಲಿತ ಶಿಕ್ಷಣ ಸಂಸ್ಥೆಯನ್ನು ಸದಾ ನೆನಪಿನಲ್ಲಿಟ್ಟುಕೊಂಡು ಉನ್ನತ ಹುದ್ಧೆಯನ್ನು ಅಲಂಕರಿಸಿ ಸಂಸ್ಥೆಯ ಋಣ ತೀರಿಸುವ ಕಾರ್ಯದಲ್ಲಿ ತೊಡಗಬೇಕು. ಗುರು ಹಿರಿಯರು ಮತ್ತು ಹೆತ್ತವರು ಹಾಗೂ ದೇವರ ಅನುಗ್ರಹವಿದ್ದಲ್ಲಿ ಯಾವುದೇ ಸಾಧನೆಯನ್ನು ಮಾಡಬಹುದು. ಮಕ್ಕಳು ಪರಿಶ್ರಮ, ಏಕಾಗ್ರತೆ, ಶ್ರದ್ಧೆಯಿಂದ ಕಲಿತು ಜೀವನದಲ್ಲಿ ಸುಸಂಸ್ಕೃತ ವ್ಯಕ್ತಿಗಳಾಗಿ ಬಾಳಬೇಕು ಎಂದು ನುಡಿದರು.
ಕಾರ್ಯವೈಖರಿ ಅಭಿನಂದನೀಯವಾಗಿದೆ ಎಂದು ನುಡಿದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
Related Articles
Advertisement
ವಿಶೇಷ ಅತಿಥಿಯಾಗಿ ಪಾಲ್ಗೊಂಡ ಭಾರತ್ ಬ್ಯಾಂಕಿನ ನಿರ್ದೇಶಕ ಪುರುಷೋತ್ತಮ ಎಸ್. ಕೋಟ್ಯಾನ್ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮಾತಾಪಿತರು ಹಾಗೂ ಹಿರಿಯರ ಕನಸನ್ನು ನನಸಾಗಿಸುವಲ್ಲಿ ಶ್ರಮಿಸಬೇಕು. ನಾವು ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ಪಡೆದಾಗ ಗುರಿಯನ್ನು ತಲುಪಲು ಸಾಧ್ಯವಿದೆ ಎಂದರು.ಸಮಾರಂಭದಲ್ಲಿ ಕಳೆದ 15 ವರ್ಷಗಳಿಂದ ಸಂಸ್ಥೆಯ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿರುವ ಶಶಿಕಲಾ ಜಗದಾಳೆ ಅವರನ್ನು ಸಮ್ಮಾನಿಸಲಾಯಿತು. ಅಲ್ಲದೆ ಶಿಕ್ಷಣ ಸಂಸ್ಥೆಯ ಶಿಕ್ಷಕರನ್ನು ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು, ಸದಸ್ಯರನ್ನು ಗೌರವಿಸಲಾಯಿತು. ಗೌರವ ಅತಿಥಿಗಳಾಗಿ ಬಿಜೆಪಿ ಮೋಹನೆ-ಟಿಟ್ವಾಲಾ ವಲಯದ ಅಧ್ಯಕ್ಷ ಸುಭಾಶ್ ಜಿ. ಪಾಟೀಲ್, ನಗರ ಸೇವಕಿ ಸುನಂದಾ ಮುಕುಂದ್ ಕೋಟ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಾಂಶುಪಾಲ ದಿವಾಕರ ಆರ್. ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಉದ್ಘಾಟಿಸಿದರು. ಅತಿಥಿ-ಗಣ್ಯರುಗಳನ್ನು ದಿವಾಕರ ಸಾಲ್ಯಾನ್ ಅವರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಸ್ಥೆಯ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದವು. ವಿದ್ಯಾರ್ಥಿ ಹರ್ಷ್ ಸಿಂಗ್ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವಿದ್ಯಾರ್ಥಿಗಳು, ಪಾಲಕ-ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಳೆದ ನಲ್ವತ್ತು ವರ್ಷಗಳಿಂದ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳನ್ನು ಯಶಸ್ವಿ ವ್ಯಕ್ತಿಗಳನ್ನಾಗಿ ಬಿಂಬಿಸಿದ ಹೆಗ್ಗಳಿಕೆಯನ್ನು ಸಂಸ್ಥೆಯು ಹೊಂದಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಧಾರೆ ಎರೆಯುವುದು ಭಗವಂತನ ಪೂಜೆ ಎಂಬ ದೃಷ್ಟಿಯಿಂದ ಈ ಕಾರ್ಯದಲ್ಲಿ ತೊಡಗಿದ್ದೇನೆ. ನನ್ನ ಕೊನೆಯುಸಿರಿರುವವರೆಗೆ ಶಿಕ್ಷಣವನ್ನು ಧಾರೆಯೆರೆಯುತ್ತೇನೆ. ಯಾವುದೇ ರೀತಿಯ ಭೇದ-ಭಾವ ಇಲ್ಲದೆ ಅಕ್ಷರ ದಾಸೋಹದಲ್ಲಿ ತೊಡಗಿದ್ದೇನೆ. ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವನ್ನು ನೀಡದರೆ, ಸಂಸ್ಕೃತಿ, ಸಂಸ್ಕಾರಗಳ ಅರಿವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸುಸಂಸ್ಕೃತರಾಗಿ ಬೆಳೆದಾಗ ಮಾತ್ರ ಸಂಸ್ಥೆಯ ಉದ್ದೇಶ ಸಾರ್ಥಕತೆಯನ್ನು ಪಡೆಯಲು ಸಾಧ್ಯ. ಸಂಸ್ಥೆಯ ಕಾರ್ಯಕ್ರಮಗಳಿಗೆ ತುಳು-ಕನ್ನಡಿಗರ ಪ್ರೋತ್ಸಾಹ ಸದಾಯಿರಲಿ .
ದಿವಾಕರ ಆರ್. ಸಾಲ್ಯಾನ್, ಪ್ರಾಚಾರ್ಯರು, ದಿವಾಕರ್ ಕ್ಲಾಸಸ್ ಮೋಹನೆ