Advertisement

ಹದವಾದ ಮಳೆಗೆ ಹಳ್ಳ-ಕೊಳ್ಳ ಭರ್ತಿ

10:27 AM Jun 11, 2018 | Team Udayavani |

ಭಾಲ್ಕಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗುತ್ತಲಿದ್ದು, ಹಳ್ಳ, ಕೊಳ್ಳ, ಚೆಕ್‌ಡ್ಯಾಮ್‌ಗಳು ಮೈದುಂಬಿ ಹರಿಯುತ್ತಿವೆ.

Advertisement

ಮೂರು ದಿನಗಳ ಹಿಂದೆ ಮೋಡ ಕವಿದ ವಾತಾವರಣವಿತ್ತು. ಶುಕ್ರವಾರ ನಸುಕಿನ ಜಾವ ಸುರಿದ ಮಳೆಯಿಂದ ಭೂಮಿ
ತಣ್ಣಗಾಗಿತ್ತು. ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆ ಸುಮಾರು 1 ಗಂಟೆ ಕಾಲ ಸುರಿದ ಹಿನ್ನೆಲೆಯಲ್ಲಿ ರೈತರ ಮುಖದಲ್ಲಿ ಸಂತಸ ಮೂಡಿದೆ.

ಕೆಲವು ವರ್ಷಗಳಿಂದ ಮಳೆ ಕೊರತೆಯಿಂದ ನಲುಗಿದ್ದ ತಾಲೂಕಿನ ರೈತರು ಈ ವರ್ಷ ಉತ್ತಮ ಮಳೆ-ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಕೃಷಿ ಇಲಾಖೆಯ ಮಾಹಿತಿ ಮೇರೆಗೆ 2018ರ ಜ.1ರಿಂದ ಮೇ 31ರ ವರೆಗೆ ತಾಲೂಕಿನ ವಾಡಿಕೆ ಮಳೆ 75ಮಿ.ಮೀ. ಇದೆ. ಇದರಲ್ಲಿ 64 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ 15 ಮಿ.ಮೀ. ಮಳೆಯ ಕೊರತೆ ಇತ್ತು. 

ಜೂ.1ರಿಂದ 8ರ ವರೆಗೆಯೇ ಒಂದು ವಾರದ ವಾಡಿಕೆ ಮಳೆ 26 ಮಿ.ಮೀ. ಇದ್ದರೆ, ಎರಡು ದಿನಗಳಲ್ಲಿ 97 ಮಿ.ಮೀ.
ಮಳೆಯಾಗಿದೆ. ಒಟ್ಟಿನಲ್ಲಿ ಜ.1ರಿಂದ ಜೂ.8ರ ವರೆಗೆ ವಾಡಿಕೆ ಮಳೆ 102 ಮಿ.ಮೀ. ದೆ. ಕಳೆದ ಎರಡು ದಿನಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಇದುವರೆಗೆ 161 ಮಿ.ಮೀ. ಮಳೆಯಾಗಿದೆ. ಹೀಗಾಗಿ ವಾಡಿಕೆಗಿಂತ 58 ಮಿ.ಮೀ. ಮಳೆ ಹೆಚ್ಚುವರಿಯಾಗಿದ್ದು, ಮಳೆಯಾಧಾರಿತ ಕೃಷಿ ಮಾಡುವ ರೈತರ ಮುಖದಲ್ಲಿ ಸಂತಸ ಮೂಡಿದೆ.

ಶನಿವಾರ ಸುರಿದ ಮಳೆ ಪ್ರಮಾಣ: ಭಾಲ್ಕಿ ಹೋಬಳಿ 40.8 ಮಿ.ಮೀ., ನಿಟ್ಟೂರ ಹೋಬಳಿ 48, ಖಟಕಚಿಂಚೋಳಿ ಹೋಬಳಿ 26.3, ಸೈಗಾವ ಹೋಬಳಿ 47, ಲಖಣಗಾಂವ ಹೋಬಳಿ 34.5, ಹಲಬರ್ಗಾ ಹೋಬಳಿಯಲ್ಲಿ 35.4 ಮಿ.ಮೀ., ಒಟ್ಟಿನಲ್ಲಿ ತಾಲೂಕಿನ ಸರಾಸರಿ ಮಳೆಯ ಪ್ರಮಾಣ 38.6 ಮಿ.ಮೀ. ಇದೆ. 

Advertisement

ಬೀರಿ(ಬಿ), ಅಂಬೆಸಾಂಗವಿ, ವಳಸಂಗ, ತಳವಾಡ(ಕೆ), ಕದಲಾಬಾದ್‌, ಕರಡ್ಯಾಳ, ಕೋನಮೇಳಕುಂದಾ ಸೇರಿದಂತೆ ಮುಂತಾದ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದ್ದು ಬಹುತೇಕ ಕಡೆಗಳಲ್ಲಿ ಸಣ್ಣಪುಟ್ಟ ಹಳ್ಳ ಕೊಳ್ಳ, ಚೆಕ್‌ ಡ್ಯಾಮ್‌ಗಳು ತುಂಬಿ ಹರಿಯುತ್ತಿವೆ. 

ತಾಲೂಕಿನಲ್ಲಿ ಎರಡೂಮೂರು ದಿನಗಳಿಂದ ಉತ್ತಮ ಮುಂಗಾರು ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷಿಕರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬೀಜ, ಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next