Advertisement

ಜಿಲ್ಲಾ ಕಾಂಗ್ರೆಸ್‌ ಹಿಂದುಳಿದ ವರ್ಗ ಸಭೆ

11:29 AM Nov 16, 2017 | Team Udayavani |

ಮಹಾನಗರ:ಜಿಲ್ಲಾ ಕಾಂಗ್ರೆಸ್‌ ಹಿಂದುಳಿದ ವರ್ಗ ಸಮಿತಿ ಸಭೆಯು ಜಿಲ್ಲಾಧ್ಯಕ್ಷ ಧರಣೇಂದ್ರ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಭವನದಲ್ಲಿ ಜರಗಿತು.

Advertisement

ರಾಜ್ಯ ಸರಕಾರ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಯೊಂದಿಗೆ ಆರ್ಥಿಕವಾಗಿ ಸಾಮಾಜಿಕವಾಗಿ ಬದುಕುವ ಕಟ್ಟ ಕಡೆಯ ವ್ಯಕ್ತಿಗೂ ನೆರವನ್ನು ಕೊಡುತ್ತಿದೆ. ಅನ್ನ ಭಾಗ್ಯ ಮಕ್ಕಳಿಗೆ ಕ್ಷೀರಭಾಗ್ಯ, ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕ ಆಹಾರ ಕೊಡುವಂತಹ ಯೋಜನೆ. ಇದು ಬಲಿಷ್ಠ ಸಮಾಜ ಸುರಕ್ಷಿತ ಸಮಾಜವನ್ನು ನಿರ್ಮಿಸಿ ಬಲಿಷ್ಠ ಗ್ರಾಮ ರಾಷ್ಟ್ರದ ನಿರ್ಮಾಣ ಮಾಡುತ್ತಿದೆ ಎಂದು ಅವರು ಹೇಳಿದರು.

ಅಲ್ಲದೆ ಸರಕಾರದ ಎಲ್ಲ ಇಲಾಖೆಗಳ ಸಚಿವರು ಅವರವರ ಖಾತೆಗಳಲ್ಲಿ ಕರ್ನಾಟಕ ಸಮಗ್ರ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ. ಹಲವು ಮಹತ್ವದ ಕಾರ್ಯ ಕ್ರಮಗಳಿಂದ ಹಿಂದುಳಿದ, ದಲಿತ, ಅಲ್ಪ ಸಂಖ್ಯಾಕರ ಹಾಗೂ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದ ಜನರನ್ನು ಸಂಕಷ್ಟದಿಂದ ದೂರ ಮಾಡಿದ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಮಾತು ತಪ್ಪಿದ ಕೇಂದ್ರ ಸರಕಾರ
ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಸದಾಶಿವ ಉಳ್ಳಾಲ್‌ ಮಾತನಾಡಿ, ಕೇಂದ್ರ ಸರಕಾರವು ಅಚ್ಛೇ ದಿನ್‌ ಆಯೇಗಾ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಪೂರೈಸಿದರೂ ಯಾವುದೇ ಬೃಹತ್‌ ಯೋಜನೆಗಳು ಜಾರಿಗೆ ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿಗಳು ಗುಂಡಿ ಬಿದ್ದು ಹೊಂಡಮಯವಾಗಿವೆ. ಗ್ರಾಮೀಣ ರಸ್ತೆಗಳಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಮಂಜೂರಾಗುತ್ತಿಲ್ಲ. ಕಪ್ಪು ಹಣವನ್ನು ತಂದು ಜನರು ಎಷ್ಟೋ ವರ್ಷ ತೆರಿಗೆಯೇ ಕಟ್ಟಬೇಕಾಗಿಲ್ಲ ಎಂದು ಹೇಳಿ ಈಗ ಜಿ.ಎಸ್‌.ಟಿ. ಅಂತ ಹೇಳಿ ಬಡವರ ರಕ್ತವನ್ನು ಹೀರಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಮ್ಮ ಯುವ ಜನಾಂಗ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಇತರ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿಗಳಾದ ಸದಾಶಿವ ಉಳ್ಳಾಲ್‌ ಹಾಗೂ ಡಿ.ಸಿ.ಸಿ., ಒ.ಬಿ.ಸಿ. ವಿಭಾಗದ ಉಪಾಧ್ಯಕ್ಷ ಸುಂದರ ಸಿ. ಪೂಜಾರಿ, ಶೋಭಾ ಕೇಶವ್‌, ಪ್ರವೀಣ ಕಡೆಂಜಿ, ಮನುರಾಜ್‌, ವಿಶ್ವನಾಥ ಕೋಟ್ಯಾನ್‌ ಅಳಿಯೂರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next