Advertisement

ಹಣ್ಣು-ತರಕಾರಿ ನೇರ ಮಾರಾಟಕ್ಕೆ ರೈತರಿಗೆ ಜಿಲ್ಲಾಡಳಿತ ಅನುಮತಿ

05:25 PM Apr 29, 2020 | Suhan S |

ಬೆಳಗಾವಿ: ಕೊವಿಡ್‌-19 ಸೋಂಕಿನ ಲಾಕ್‌ಡೌನ್‌ನಿಂದಾಗಿ ರೈತರಿಗೆ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಅನುಕೂಲವಾಗಲು ಜಿಲ್ಲಾಡಳಿತ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಕೆ.ಎಮ್‌.ಎಫ್‌ ಮಳಿಗೆಗಳ ಪಕ್ಕದಲ್ಲಿ ರೈತರು ನೇರವಾಗಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.

Advertisement

ನಗರದಲ್ಲಿರುವ ನಂದಿನಿ ಹಾಲು ಮಾರಾಟ ಮಳಿಗೆಗಳ ಪಕ್ಕದಲ್ಲಿ ನೇರವಾಗಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆಯಬಹುದಾಗಿದೆ. ಆಸಕ್ತ ರೈತರು ತಮ್ಮ ಹೆಸರು ಮತ್ತು ವಿಳಾಸದ ಮಾಹಿತಿಯನ್ನು ನೋಂದಯಿಸಲು ಶಿವಾನಂದ ಮಾಳಶೆಟ್ಟಿ, ಸಹಾಯಕ ತೋಟಗಾರಿಕೆ ಅಧಿಕಾರಿ, ತೋಟಗಾರಿಕೆ ಉಪನಿರ್ದೇಶಕರ ಕಚೇರಿ,ಬೆಳಗಾವಿ, ದೂರವಾಣಿ ಸಂಖ್ಯೆ: 7411539854, ವಿನಾಯಕ ಪಾಟೀಲ, ಸಹಾಯಕ ತೋಟಗಾರಿಕೆ ಅಧಿಕಾರಿ, ದೂ. ಸಂಖ್ಯೆ: 9902349843 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next