Advertisement

ಖಾಸಗಿ ಆಸ್ಪತ್ರೆಗಳ ಮೇಲೆ ಜಿಲ್ಲಾಡಳಿತ ನಿಗಾ

06:34 PM Apr 25, 2021 | Suhan S |

ವಿಜಯಪುರ: ಕೋವಿಡ್‌ ಎರಡನೇ ಅಲೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿದ್ದು, ಕರ್ನಾಟಕದಲ್ಲಿ ವಾರಾಂತ್ಯದ ಕರ್ಫ್ಯೂ ವಿಧಿಸುವ ಮಟ್ಟಕ್ಕೆ ಪರಿಸ್ಥಿತಿ ಕೈ ಮೀರುತ್ತಿದೆ.ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೋವಿಡ್‌ರೋಗಿಗಳಿಗೆ ಚಿಕಿತ್ಸೆಗಾಗಿಯೇ ಜಿಲ್ಲೆಯಲ್ಲಿಖಾಸಗಿ ಒಡೆತನದ 17 ಆಸ್ಪತ್ರೆಗಳಿಗೆ ಅನುಮತಿಸಲಾಗಿದೆ.

Advertisement

ಆದರೆ ಖಾಸಗಿ ಆಸ್ಪತ್ರೆಗಳು ಪ್ರವೇಶ ಪಡೆದ ರೋಗಿಗಳು,ಹಾಸಿಗೆ ಬಳಕೆ, ಲಭ್ಯತೆ ಕುರಿತು ನಿತ್ಯವೂನಿಖರ ಮಾಹಿತಿ ನೀಡದೇ ಅಸಹಕಾರ ತೋರ ತೊಡಗಿವೆ. ಇದರಿಂದಾಗಿ ಜಿಲ್ಲಾಧಿಕಾರಿಯೇಸ್ವಯಂ ಕಾರ್ಯಾಚರಣೆಗೆ ಇಳಿಯಲುಮುಂದಾಗಿದೆ. ಇದಕ್ಕಾಗಿ ಪ್ರತಿ ಆಸ್ಪತ್ರೆ ಮೇಲೆನಿಗಾ ಇಡಲು ನೋಡಲ್‌ ಅಧಿಕಾರಿಗಳನ್ನು ನೇಮಿಸಿದ್ದಾರೆ.

ಸರ್ಕಾರಿ ನಿಯಮದಂತೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರಿಗೆ ಶುಲ್ಕ ಸಹಿತ ಆರೋಗ್ಯ ಸೇವೆ ನೀಡಲು ಖಾಸಗಿ ಒಡೆತನದ17 ಆಸ್ಪತ್ರೆಗಳಿಗೆ ಅವಕಾಶ ನೀಡಲಾಗಿದೆ.ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಕೋವಿಡ್‌ಘಟಕದ 285 ಹಾಸಿಗೆ ಅಲ್ಲದೇ ಇದೀಗ ತಾಲೂಕು ಆಸ್ಪತ್ರೆಗಳಲ್ಲಿ 3 ಕಡೆ ತಲಾ 25 ಹಾಗೂ ಬಸವನಬಾಗೇವಾಡಿ ಸರ್ಕಾರಿಆಸ್ಪತ್ರೆಯಲ್ಲಿ 50 ಹಾಸಿಗೆಯ ಕೋವಿಡ್‌ ಘಟಕಆರಂಭಿಸಲಾಗಿದೆ. ಸರ್ಕಾರಿ ಆಸ್ಪತ್ರೆಯ ಈಹಾಸಿಗೆ ಸೇರಿ ಜಿಲ್ಲೆಯಲ್ಲಿ 1531 ಹಾಸಿಗೆ ಲಭ್ಯಇವೆ. ಇದರಲ್ಲಿ ಸಾಮಾನ್ಯ, ವೆಂಟಿಲೇಟರ್‌, ಆಕ್ಸಿಜನ್‌, ಐಸಿಯು ಸೌಲಭ್ಯಗಳ ಹಾಸಿಗೆಗಳೂ ಸೇರಿವೆ.

ಹಾಸಿಗೆ ಸಿಗದೇ ಗೋಗರೆದು ದೂರುಗಳ ಸರಮಾಲೆಯ ಕಥೆ ಒಂದೆಡೆಯಾದರೆ, ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆಅಗತ್ಯವಾಗಿ ಬೇಕಿರುವ ರೆಮ್‌ಡಿವಿಸಿಯರ್‌ ಇಂಜೆಕ್ಷನ್‌ ಕೊರತೆಯ ನೇಪ ಹೇಳುವುದು, ನಿಗದಿಗಿಂತ ಹೆಚ್ಚಿನನ ಬೆಲೆಗೆ ಔಷಧ ಮಾರಾಟದಂಥ ದೂರುಗಳು ಕೇಳಿ ಬಂದಿವೆ. ಆಕ್ಸಿಜನ್‌ ಕೊರತೆ, ವೆಂಟಿಲೇಟರ್‌ ಹಾಸಿಗೆ ಇಲ್ಲ, ಐಸಿಯು ಹಾಸಿಗೆ ಖಾಲಿ ಇಲ್ಲ ಎಂದೆಲ್ಲ ದೂರುಗಳು ಕೇಳಿ ಬಂದಿವೆ.

ಸರ್ಕಾರದ ಅನುಮತಿ ಪಡೆದು ಕೋವಿಡ್‌ ಘಟಕ ಆರಂಭಿಸಿರುವ ಖಾಸಗಿ ಆಸ್ಪತ್ರೆಗಳುಮಾತ್ರ ನಿತ್ಯವೂ ತನ್ನ ಆಸ್ಪತ್ರೆಗೆ ದಾಖಲಾಗುವರೋಗಿಗಳೆಷ್ಟು, ಯಾವ ರೋಗಿ ಯಾವಸೌಲಭ್ಯದ ಹಾಸಿಗೆಯಲ್ಲಿದ್ದಾರೆ, ಹೊಸದಾಗಿಸೋಂಕು ದೃಢಪಟ್ಟವರಿಗೆ ಲಭ್ಯ ಇರುವಹಾಸಿಗೆ ಎಷ್ಟು ಎಂಬ ನಿಖರ ಮಾಹಿತಿ ನೀಡಬೇಕು. ಈ ಕುರಿತು ನಿರ್ದಿಷ್ಟ ಆ್ಯಪ್‌ನಲ್ಲಿ ನಿತ್ಯವೂ ಅಂಕಿ ಸಂಖ್ಯೆ ದಾಖಲಿಸಿ ಜಿಲ್ಲೆಯ ಕೋವಿಡ್‌ ಸೋಂಕಿತರಿಗೆ ಸೌಲಭ್ಯ ನೀಡುವಲ್ಲಿ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತಕ್ಕೆ, ಸರ್ಕಾರಕ್ಕೆ ಮಾಹಿತಿ ನೀಡುವುದು ಕಡ್ಡಾಯ.

Advertisement

ಜಿಲ್ಲೆಯಲ್ಲಿ ಪ್ರಸ್ತುತ ಸಂದರ್ಭದಲ್ಲಿ ಆಕ್ಸಿಜನ್‌ನ 900 ಸಿಲಿಂಡರ್‌ ಬೇಕಿದ್ದು, 900 ಸಿಲಿಂಡರ್‌ ಸಿಗುತ್ತಿದ್ದು, 200 ಸಿಲಿಂಡರ್‌ ಕೊರತೆ ಕಂಡು ಬಂದಿತ್ತು. ಬಿಎಲ್‌ಡಿಇಆಸ್ಪತ್ರೆ 13 ಸಾವಿರ ಕಿಲೋ ಲೀಟರ್‌, ಜಿಲ್ಲಾ ಸರ್ಕಾರಿ ಆಸ್ಪತ್ರೆ 6 ಸಾವಿರ ಕಿ.ಲೀ., ಬಿದರಿ ಆಸ್ಪತ್ರೆ 3 ಸಾವಿರ ಕಿ.ಲೀ., ಯಶೋಧಾ ಆಸ್ಪತ್ರೆ100 ಸಿಲಿಂಡರ್‌ ಆಕ್ಸಿಜನ್‌ನ್ನು ನೇರವಾಗಿಉತ್ಪಾಕದ ಸಂಸ್ಥೆಗಳಿಂದಲೇ ಪಡೆಯುತ್ತಿವೆ. ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಕೇಳಿ ಬರುತ್ತಿರುವ ಆಕ್ಸಿಜನ್‌ ಕೊರತೆ ನೀಗುವಲ್ಲಿ ಜಿಲ್ಲಾಧಿಕಾರಿ ಸುನಿಲಕುಮಾರ ಅವರು ಜಿಲ್ಲೆಗೆ ಆಕ್ಸಿಜನ್‌ ಪೂರೈಸುವ ಬಳ್ಳಾರಿ ಏಜೆನ್ಸಿಗಳನ್ನು ಸಂಪರ್ಕಿಸಿಅಗತ್ಯ ಪ್ರಮಾಣದ ಆಕ್ಸಿಜನ್‌ ಪಡೆಯಲು ಮುಂದಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ ಪ್ರಸ್ತುತಸಂದರ್ಭದಲ್ಲಿನ ಅಗತ್ಯ ಪ್ರಮಾಣದಲ್ಲಿ ಕೋವಿಡ್‌ ರೋಗಿಗಳಿಗೆ ಅಗತ್ಯವಾಗಿರುವ ರೆಮ್‌ಡಿವಿಸೀಯರ್‌ ಲಸಿಕೆ ಪೂರೈಕೆ ಇದೆ. ಆದರೂ ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಳಿಗೆ ಈ ಲಸಿಕೆಯ ಕೊರತೆ ಕಾರಣ ನೀಡಿ ಚೀಟಿ ಬರೆದು ಕೊಡುತ್ತಿದ್ದು, ಜಿಲ್ಲಾಡಳಿತಕ್ಕೆ ದೂರುಗಳ ಸುರಿಮಳೆ ಆಗುತ್ತಿವೆ.

ಆದರೆ ಸರ್ಕಾರಿ ಔಷಧ ಸಂಗ್ರಹಾಗಾರದಲ್ಲಿ 800, ಬಿಎಲ್‌ಡಿಇ ಆಸ್ಪತ್ರೆಯಲ್ಲಿ 1000, ವೇದಾಂತ ಆಸ್ಪತ್ರೆಯಲ್ಲಿ 288, ಭಾಗ್ಯವಂತಿ ಆಸ್ಪತ್ರೆಯಲ್ಲಿ 230, ಗುಡ್ಡೋಡಗಿ ಏಜೆನ್ಸಿ ಮೂಲಕ 7 ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದಲ್ಲಿ ರೆಮ್‌ಡಿವಿಸಿಯರ್‌ ಲಸಿಕೆ ಪೂರೈಸಿದ ದಾಖಲೆಇದೆ. ಆಕ್ಸಿಜನ್‌, ರೆಮ್‌ಡಿಸಿವಿಯರ್‌ಸೇರಿದಂತೆ ಎಲ್ಲವನ್ನೂ ನಿರೀಕ್ಷೆಗೆ ತಕ್ಕಂತೆ ಪೂರೈಸುವ ವ್ಯಸವಸ್ಥೆ ಮಾಡಿದ್ದರೂ ಖಾಸಗಿಆಸ್ಪತ್ರೆಗಳು ನಿರ್ವಹಣೆಯಲ್ಲಿ ಲೋಪ ಆಗುತ್ತಿದೆಯೇ, ಖಾಸಗಿ ವೈದ್ಯಕೀಯವ್ಯವಸ್ಥೆ ಪರಿಸ್ಥಿತಿಯ ದುರ್ಲಾಭ ಪಡೆಯಲುಮುಂದಾಗಿಯಿತೆ ಎಂಬ ಅನುಮಾನ ಮೂಡಿದೆ.

ಈ ವಿಷಯವನ್ನು ಗಂಭೀರವಾಗಿಪರಿಗಣಿಸಿರುವ ಡಿಸಿ ಸುನೀಲಕುಮಾರ ಅವರು, ಆಕ್ಸಿಜನ್‌ ಹಾಗೂ ರೆಮ್‌ಡಿವಿಸಿಯರ್‌ ಔಷಧ ನಿರ್ವಹಣೆಗಾಗಿ ಹಿರಿಯ ಕೆಎಎಸ್‌ ಅಧಿಕಾರಿ ಡಾ.ಔದ್ರಾಮ್‌ ಅವರನ್ನೇ ಪ್ರತ್ಯೇಕವಾಗಿ ಉಸ್ತುವಾರಿಗೆ ನೇಮಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೋವಿಡ್‌ ಆರೋಗ್ಯಸೇವೆ ನೀಡುತ್ತಿರುವ ಖಾಸಗಿ ಆಸ್ಪತ್ರೆಗಳಲ್ಲಿನಾಲ್ಕಾರು ಆಸ್ಪತ್ರೆ ಹೊರತುಪಡಿಸಿದರೆ ಬಹುತೇಕ ಆಸ್ಪತ್ರೆಗಳು ಹಾಸಿಗೆ ಮಾಹಿತಿ ನೀಡುತ್ತಿಲ್ಲ. ಅಲ್ಲದೇ ಚಿಕಿತ್ಸೆಗೆ ದಾಖಲಾಗಲುಬರುವ ರೋಗಿಗಳಿಗೆ ಹಾಸಿಗೆ ಅಲಭ್ಯ, ಇತರೆ ಸೌಲಭ್ಯ ಇಲ್ಲ ಎಂದೆಲ್ಲ ರೋಗಿಗಳ ಪ್ರವೇಶಕ್ಕೆ ನಿರಾಕರಿಸಲಾಗುತ್ತಿದೆ.

ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಓರ್ವ ರೋಗಿಮೃತಮಟ್ಟಿದ್ದಾನೆ ಎಂಬ ದೂರೂ ಇದೆ. ಈ ಕುರಿತು ತನಿಖೆ ನಡೆಸಿರುವ ವಿಜಯಪುರತಹಶೀಲ್ದಾರ್‌ ನೇತೃತ್ವದ ತನಿಖಾ ತಂಡಜಿಲ್ಲಾಡಳಿತಕ್ಕೆ ವರಿ ನೀಡಲು ಮುಂದಾಗಿದೆ. ಈಘಟನೆಯ ಬೆನ್ನಲ್ಲೇ ಸರ್ಕಾರಿ ಆಸ್ಪತ್ರೆಯಲ್ಲೂಹಾಸಿಗೆ ಹಾಗೂ ಇತರೆ ಸೌಲಭ್ಯದ ದುರವಸ್ಥೆಯ ವಿಡಿಯೋಗಳು ವೈರಲ್‌ ಆಗಿವೆ.

 

-ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next