Advertisement

ಕೋವಿಡ್‌ ಸೋಂಕಿತರಿಗೆ ಆಹಾರ ವಿತರಣೆ

03:16 PM May 07, 2021 | Team Udayavani |

ಬೀದರ : ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ತಾಲೂಕಿನ ಅಯಾಸಪುರ ಗ್ರಾಮದ ಶಿವರಾಜ ಪಾಟೀಲ ಪರಿವಾರವು ಸೋಂಕಿತರು, ಅವರ ಆರೈಕೆಯಲ್ಲಿರುವ ಸಂಬಂಧಿ ಕರು ಹಾಗೂ ಕೋವಿಡ್‌ ವಾರಿಯರ್ಸ್‌ ಗೆ ನಿತ್ಯ ಉಚಿತ ಆಹಾರ ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ.

Advertisement

ಇಲ್ಲಿನ ವಂದೇ ಮಾತರಂ ಸ್ಕೂಲ್‌ ಅಧ್ಯಕ್ಷರಾದ ಶಿವರಾಜ ಪಾಟೀಲ, ಪುತ್ರರಾದ ವೀರಭದ್ರ ಎಂಟರ್‌ ಪ್ರೈಸೆಸ್‌ನ ಆಕಾಶ ಪಾಟೀಲ ಹಾಗೂ ನ್ಯೂ ಝೀರಾ ಮಿನರಲ್‌ ವಾಟರ್ಸ್‌ ನ ಸಂತೋಷ ಪಾಟೀಲ 10 ದಿನಗಳಿಂದ ಅನ್ನ ದಾಸೋಹ ನಡೆಸಿಕೊಂಡು ಬರುತ್ತಿದ್ದಾರೆ. ನಿತ್ಯ ತಮ್ಮ ಮನೆಯಲ್ಲೇ ಆಹಾರ ತಯಾರಿಸಿ, ಪ್ಯಾಕ್‌ ಮಾಡಿ, ವಾಹನದಲ್ಲಿ ಶುದ್ಧ ಕುಡಿಯುವ ನೀರಿನ ಪಾಕೇಟ್‌ನೊಂದಿಗೆ ಪ್ರತಿದಿನ ಮಧ್ಯಾಹ್ನ ಬೀದರನ ಕೋವಿಡ್‌ ಆಸ್ಪತ್ರೆ ಆವರಣದಲ್ಲಿ ಸೋಂಕಿತರು, ಅವರ ಸಂಬಂಧಿಕರು ಹಾಗೂ ಕೋವಿಡ್‌ ವಾರಿಯರ್ಸ್‌ಗಳಿಗೆ ವಿತರಿಸುತ್ತಿದ್ದಾರೆ. ನನ್ನ ತಂದೆ, ತಾಯಿ, ನನಗೆ ಹಾಗೂ ನನ್ನ ಪತ್ನಿಗೆ ಕೋವಿಡ್‌ ಸೋಂಕು ತಗುಲಿತು.

ನಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದೇವು. ಆದರೆ, ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಬಡ ಸೋಂಕಿತರು ಹಾಗೂ ಅವರ ಕುಟುಂಬದ ಸದಸ್ಯರ ಸಂಕಷ್ಟ ಮನ ಕಲುಕಿತು. ಬಡ ಸೋಂಕಿತರಿಗೆ ನೆರವಾಗಲು ನಿರ್ಧರಿಸಿ, ಉಚಿತ ಆಹಾರ ಸೇವೆ ಆರಂಭಿಸಿದೇವು ಎಂದು ಆಕಾಶ ಪಾಟೀಲ ತಿಳಿಸಿದರು. ನಿತ್ಯ 500 ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದ್ದೇವೆ. ಜನತಾ ಕಫೂÂì ಮುಕ್ತಾಯದವರೆಗೆ ಆಹಾರ ವಿತರಣೆ ನಡೆಯಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next