Advertisement

TTD ಯಿಂದ ಭಗವದ್ಗೀತೆ ಪ್ರತಿಗಳ ವಿತರಣೆ

09:59 PM Sep 29, 2023 | Team Udayavani |

ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಗಳು(ಟಿಟಿಡಿ) ಟ್ರಸ್ಟ್‌ ವತಿಯಿಂದ ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಇಂಗ್ಲೀಷ್‌ ಭಾಷೆಗಳಲ್ಲಿ ಭಗವದ್ಗೀತೆಯ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ತೆಲುಗು ಭಾಷೆ ಒಂದರಲ್ಲೇ ಒಂದು ಕೋಟಿ ಪ್ರತಿಗಳನ್ನು ಹಂಚಲಾಗುವುದು ಎಂದು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ವೆಲ್ಲೂರ್‌ ಮತ್ತು ಪೆರಿಯಪಾಲಂ ಕಡೆಯಿಂದ ತಿರುಪತಿ ಮಾರ್ಗದಲ್ಲಿ ಪ್ರತಿ 25 ಕಿ.ಮೀ.ಗಳಿಗೆ ಒಂದರಂತೆ ಛತ್ರಗಳನ್ನು ನಿರ್ಮಿಸಲಾಗುವುದು. ತಿರಮಲಕ್ಕೆ ಕಾಲ್ನಡಿಗೆ ಮೂಲಕ ಆಗಮಿಸುವ ಭಕ್ತರ ವಾಸ್ತವ್ಯಕ್ಕೆ ವಸತಿ ನಿಲಯಗಳು ಹಾಗೂ ಅಡಿಗೆ ಕೋಣೆಗಳನ್ನು ಇಲ್ಲಿ ನಿರ್ಮಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಇನ್ನೊಂದೆಡೆ, “ಇದುವರೆಗೂ ಆರು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಕ್ರೂರ ಪ್ರಾಣಿಗಳ ಸೆರೆಗಾಗಿ ಸಮೀಪದ ಕಾಡಿನಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಇದರಲ್ಲಿ 170 ಅರಣ್ಯ ಸಿಬ್ಬಂದಿ ತೊಡಗಿದ್ದಾರೆ. ನಡಿಗೆ ಮೂಲಕ ತಿರುಮಲ ಬೆಟ್ಟ ಹತ್ತುವ ಭಕ್ತರನ್ನು ಗುಂಪುಗಳಲ್ಲಿ ಭದ್ರತಾ ಸಿಬ್ಬಂದಿ ಜತೆಗೆ ಕಳುಹಿಸಲಾಗುತ್ತಿದೆ. ಮಧ್ಯಾಹ್ನ 2 ಗಂಟೆ ಒಳಗೆ ಮಾತ್ರ 12 ವರ್ಷದೊಳಗಿನ ಮಕ್ಕಳಿಗೆ ಬೆಟ್ಟ ಹತ್ತಲು ಅವಕಾಶವಿದೆ. ರಾತ್ರಿ 10 ಗಂಟೆವರೆಗೆ ಮಾತ್ರ ಭಕ್ತರ ಗುಂಪುಗಳಿಗೆ ಬೆಟ್ಟ ಹತ್ತಲು ಅವಕಾಶ ನೀಡಲಾಗಿದೆ’ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next