Advertisement

ರೈತರಿಗೆ 160 ಕೋಟಿ ರೂ. ಕೃಷಿ ಸಾಲ ವಿತರಣೆ

04:38 PM Nov 19, 2022 | Team Udayavani |

ಸಾಲಿಗ್ರಾಮ: ಮೈಸೂರು ಚಾಮರಾಜನಗರ ಎರಡೂ ಜಿಲ್ಲೆಗಳಿಂದ 1,300 ಕೋಟಿ ರೂ. ಬೆಳೆ ಸಾಲ ನೀಡಿದ್ದು, ಕೆ.ಆರ್‌.ನಗರ, ಸಾಲಿಗ್ರಾಮ ತಾಲೂಕಿನಿಂದ 160 ಕೋಟಿ ರೂ. ವಿತರಿಸಲಾಗಿದೆ ಎಂದು ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷ ಜಿ.ಡಿ.ಹರೀಶ್‌ಗೌಡ ಹೇಳಿದರು.

Advertisement

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಹೋಬಳಿಯ ಚಿಬುಕಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ.ನ ಕೃಷಿ ಪತ್ತಿನ ಸಹಕಾರ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಡಿಸಿಸಿ ಬ್ಯಾಂಕ್‌ ರೈತರದ್ದು, ಜಿಲ್ಲೆಯಲ್ಲಿ 1 ಲಕ್ಷ ರೈತ ಕುಟುಂಬಗಳಿಗೆ ಸಾಲ ವಿತರಣೆ ಮಾಡಲಾಗಿದೆ. ಎರಡು ತಾಲೂಕಿನಿಂದಲೂ ಇದುವರೆಗೆ 81 ಕೋಟಿ ರೂ. ಬೆಳೆ ಸಾಲ ನೀಡಲಾಗುತ್ತಿತ್ತು. ಆದರೆ, ನಮ್ಮ ಅವಧಿಯಲ್ಲಿ 160 ಕೋಟಿ ರೂ. ದಾಟಿದ್ದು, ಇದೀಗ ಜಿಲ್ಲೆಯಲ್ಲಿ 2.5 ಕೋಟಿ ರೂ. ಅನ್ನು ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಕಟ್ಟಡಗಳಿಗೆ ಅನುದಾನ ನೀಡಲಾಗಿದೆ ಎಂದು ಹೇಳಿದರು.

ಮಹಿಳಾ ಸ್ವಸಹಾಯ ಸಂಘಗಳು ಖಾಸಗಿಯವರ ಬಳಿ ಶೇ.26 ಬಡ್ಡಿ ದರಕ್ಕೆ ಸಾಲ ಪಡೆಯುತ್ತಿದ್ದು, ನಮ್ಮ ಸಹಕಾರ ಸಂಘಗಳಲ್ಲಿ ಶೇ.12 ಬಡ್ಡಿ ದರದಲ್ಲಿ ಸಾಲ ಪಡೆದರೆ ಉತ್ತಮ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಇನ್ನು ತಗ್ಗಿಸಲಾಗುವುದು. ಅಲ್ಲದೆ, ಸರ್ಕಾರ ಕೃಷಿ ಸಾಲಕ್ಕೆ ನಿಗದಿ ಮಾಡುವ ಹಣಕಾಸಿನ ಪ್ರಮಾಣ ತೀರಾ ಕಡಿಮೆ ಇದ್ದು, ಈ ಬಗ್ಗೆ ಸಹಕಾರ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.

ಭೂಮಿಪೂಜೆ ನೆರವೇರಿಸಿ ಶಾಸಕ ಸಾ.ರಾ. ಮಹೇಶ್‌ ಮಾತನಾಡಿ, ರೈತರು ಸಹಕಾರ ಸಂಘಗಳನ್ನು ತಮ್ಮದು ಎಂಬ ಭಾವನೆಯಿಂದ ಸಾಲ ಪಡೆಯಲು ಬಂದರೆ ಕಾರ್ಯದರ್ಶಿಗಳು ಅವರಿಗೂ ಮೋಸ ಮಾಡುತ್ತಿದ್ದು, ಮಿಲೇì, ಹರದನಹಳ್ಳಿ ಸಂಘಗಳಲ್ಲಿ ಇಂತಹ ಅಕ್ರಮಗಳು ನಡೆದಿರುವುದು ಬೇಸರದ ವಿಚಾರವಾಗಿದ್ದು, ಸಂಘಗಳ ಕಾರ್ಯದರ್ಶಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಸಂಘಗಳು ಬೆಳವಣಿಗೆ ಹೊಂದಲು ಸಹಕಾರಿಯಾಗಲಿದೆ ಎಂದು ಕಿವಿಮಾತು ಹೇಳಿದರು.

ರಾಜಕಾರಣವನ್ನು ಬಿಟ್ಟು ಸಹಕಾರ ಸಂಘಗಳು ರೈತರ ಏಳಿಗೆಗೆ ದುಡಿಯಬೇಕಿದೆ. ಚಿಬುಕಹಳ್ಳಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ರೂ. ನೀಡುತ್ತೇನೆ. ಜೊತೆಗೆ ಸಹಕಾರ ಬಂಧುಗಳು ನಿಮ್ಮ ಆಶೋತ್ತರಗಳನ್ನು ಕಾಪಾಡುವ ಪ್ರಾದೇಶಿಕ ಪಕ್ಷ ಹಾಗೂ ರೈತರ ಬಗ್ಗೆ ಕಾಳಜಿ ಇರುವ ನಾಯಕರನ್ನು ಚುನಾವಣೆಗಳಲ್ಲಿ ಗೆಲ್ಲಿಸಿದರೆ ನಿಮಗೆ ಅದೇ ಸಹಕಾರಿಯಾಗಲಿದ್ದು, ಹರೀಶ್‌ಗೌಡ ಅವರು ಸಾಕಷ್ಟು ಸಹಕಾರಿ ಆಡಳಿತದಲ್ಲಿ ನುರಿತು ಜಿಲ್ಲೆಯ ಹೆಸರನ್ನು ಇಂದು ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷರಾಗುವ ಮೂಲಕ ರಾಜ್ಯದೆತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಹೇಳಿದರು.

Advertisement

ಸಂಘದ ನೂತನ ಕಟ್ಟಡಕ್ಕೆ ಉಚಿತವಾಗಿ ಜಾಗ ನೀಡಿದ ಜಿಪಂ ಮಾಜಿ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಅಧ್ಯಕ್ಷ ದ್ವಾರಕೀಶ್‌, ಸಂಘದ ಅಧ್ಯಕ್ಷ ಗಣೇಶ್‌, ಜಿಲ್ಲಾ ಪರಿಷತ್‌ ಮಾಜಿ ಉಪಾಧ್ಯಕ್ಷ ಚನ್ನಬಸಪ್ಪ, ಗ್ರಾಪಂ ಅಧ್ಯಕ್ಷೆ ಶೋಭಾರಾಣಿ, ಜೆಡಿಎಸ್‌ ಮುಖಂಡರಾದ ಮಧುಚಂದ್ರ, ಶ್ರೀರಾಂಪುರ ಸಂತೋಷ್‌, ಬೆಣಗನಹಳ್ಳಿ ಪ್ರಸನ್ನ, ರಮೇಶ್‌, ತಿಮ್ಮಗೌಡ, ಸಿ.ಬಿ.ಲೋಕೇಶ್‌, ಧರ್ಮ, ಸಹಕಾರ ಅಭಿವೃದ್ಧಿ ಅಧಿಕಾರಿ ರವಿ, ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ಪ್ರತಾಪ್‌, ಸಂಘದ ಉಪಾಧ್ಯಕ್ಷ ಕೃಷ್ಣೇಗೌಡ, ನಿರ್ದೇಶಕರಾದ ಜಯಣ್ಣ, ವೆಂಕಟೇಶ, ಮಹೇಶ್‌, ಅಶೋಕ, ಗೋವಿಂದರಾಜು, ಶ್ವೇತಾ, ತಮ್ಮೇಗೌಡ, ನಿಂಗರಾಜು, ಸಣ್ಣರಾಮಯ್ಯ, ಮೇಲ್ವಿಚಾರಕರಾದ ಸತೀಶ್‌, ಸುಧೀರ್‌, ಸಂಘದ ಸಿಇಒ ಕೃಷ್ಣೇಗೌಡ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next