ಗಂಗಾವತಿ: ಪರಕೀಯರಿಂದ ದೇಶವನ್ನು ಸ್ವಾತಂತ್ರ್ಯಗೊಳಿಸಿದ ಮಹನೀಯರನ್ನು ಯುವಜನರು ಸದಾ ಸ್ಮರಣೆ ಮಾಡುವ ಮೂಲಕ ದೇಶದ ಪ್ರಗತಿಗೆ ಶ್ರಮಿಸುವಂತೆ ಬಿಜೆಪಿ ಯುವ ಮುಖಂಡ ಕಿರಣಕುಮಾರಗೌಡ ಹೇಳಿದರು.
ಅವರು ನಗರದ ಕೊಂಡಮಿ ವಿನಾಯಕ ಶಾಲೆಯಲ್ಲಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ರಾಷ್ಟ್ರ ಧ್ವಜ ಹಾಗೂ ಸಸಿಗಳನ್ನು ಶಿವನಗೌಡ ಸೇವಾ ಟ್ರಸ್ಟ್ ಉಚಿತವಾಗಿ ವಿತರಿಸಿ ಮಾತನಾಡಿದರು.
ಸ್ವಾತಂತ್ರ್ಯದ ಅಮೃತಮಹೋತ್ಸವದ ನಿಮಿತ್ತ ನಮ್ಮ ಶಿವನಗೌಡ ಸೇವಾ ಟ್ರಸ್ಟ್ ವತಿಯಿಂದ ಗಂಗಾವತಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಒಟ್ಟು 6000 ರಾಷ್ಟ್ರ ಧ್ವಜ ಹಾಗೂ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದಲ್ಲಿರುವುದರಿಂದಾಗಿ ಈ ಭಾರಿ ಸ್ವಾತಂತ್ರ್ಯದ ಅಮೃತಮಹೋತ್ಸವ ಇಷ್ಟು ವೈಭವದಿಂದ ದೇಶದ ಜನರು ಆಚರಣೆ ಮಾಡುತ್ತಿದ್ದಾರೆ. ಧರ್ಮ ದೇಶ ಉಳಿಯಲು ಬಿಜೆಪಿ ಪಕ್ಷ ಅಧಿಕಾರದಲ್ಲಿರಬೇಕು. ಜತೆಗೆ ಮೋದಿಯವರು ಪ್ರಧಾನಿಯಾಗಿ ಇನ್ನೂ ಬಹಳಷ್ಟು ವರ್ಷ ಆಡಳಿತ ನಡೆಸುವಂತೆ ಜನರು ಆಶೀರ್ವಾದ ಮಾಡಬೇಕೆಂದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಎ.ಜೆ.ರಂಗನಾಥ, ಹಿರಿಯ ಪತ್ರಕರ್ತರಾದ ಕೆ.ನಿಂಗಜ್ಜ, ಇಂಗಳಗಿ ನಾಗರಾಜ, ರಾಮಮೂರ್ತಿ ನವಲಿ, ಎಸ್.ಎಂ.ಪಟೇಲ್, ಚಂದ್ರಶೇಖರ್ ಮುಕ್ಕುಂದಿ, ಚಂದ್ರಶೇಖರಗೌಡ, ಶಿವಪ್ಪ ನಾಯಕ, ವಿಶ್ವನಾಥ ಬೆಳಗಲ್ ಮಠ, ದೇವಿಕೇರಿ ಶ್ರೀನಿವಾಸ, ಕಾಶಿನಾಥ, ಮಲ್ಲಿಕಾರ್ಜುನ ಗೋಟೂರು, ಹನುಮೇಶ ಭಟಾರಿ, ಮುಖ್ಯಶಿಕ್ಷಕ ಶ್ರೀನಿವಾಸ ನಾಯ್ಡು, ದೈ.ಶಿಕ್ಷಕ ಎ.ಉಜ್ಜನಗೌಡ ಇದ್ದರು.ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಶಾಲಾವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕರು ಸಿಬ್ಬಂದಿಯವರಿಗೆ ರಾಷ್ಟ್ರ ಧ್ವಜ ಹಾಗೂ ಸಸಿಗಳನ್ನು ವಿತರಿಸಲಾಯಿತು.