Advertisement

ಎಂಜಿಎನ್‌ವಿವೈ ಅನುದಾನ ಸಮವಾಗಿ ಹಂಚಿ

05:19 AM Jul 02, 2020 | Lakshmi GovindaRaj |

ಮೈಸೂರು: ನಗರ ಪಾಲಿಕೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ಕೈಗೊಳ್ಳಬೇಕಾದ ಕೆಲಸಗಳ ಪಟ್ಟಿ ಸಿದ್ಧಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್‌ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು. ನಗರದ  ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ(ಎಂಜಿಎನ್‌ವಿವೈ) ಅನುದಾನ ಬಳಕೆ ಸಂಬಂಧ ಮಾತನಾಡಿದರು.

Advertisement

ಅನುದಾನದ ಹಣ ನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಸಮನಾಗಿ ಹಂಚಿಕೆಯಾಗಬೇಕು. ತುರ್ತು ಕೆಲಸಗಳ ಪಟ್ಟಿ ಸಿದ್ಧಪಡಿಸಿ, ಪೂರ್ಣ ಮಾಹಿತಿ ಗಳೊಂದಿಗೆ ಬಂದರೆ ಮುಂದಿನ ವಾರ ಈ ಬಗ್ಗೆ ಚರ್ಚಿಸ ಬಹುದು ಎಂದು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರು. ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ  ಮಾತನಾಡಿ, ಯೋಜನೆಯಡಿ 150 ಕೋಟಿ ರೂ. ಮಂಜೂರಾಗಿದೆ. ಈ ಮೊತ್ತದಲ್ಲಿ 50.76 ಕೋಟಿ ರೂ. ಮೊತ್ತವನ್ನು ಜೆ ನರ್ಮ್ ಯೋಜನೆಗೆ ಹೊಂದಿಸಲಾಗಿದೆ.

ಈ ಯೋಜನೆಯ ವೆಚ್ಚ ಹೆಚ್ಚಳ, ಪ್ರೋತ್ಸಾಹ ಧನ ಮತ್ತು ಆಡಳಿತಾತ್ಮಕ  ವೆಚ್ಚಕ್ಕಾಗಿ 15.87 ಕೋಟಿ ರೂ. ಮೀಸಲಿಡಲಾಗಿದೆ. ಇನ್ನುಳಿದ 83.36 ಕೋಟಿ ಮೊತ್ತದಲ್ಲಿ 5 ಕೋಟಿ ಅಗತ್ಯ ಯಂತ್ರಗಳ ಖರೀದಿಗಿಟ್ಟಿದ್ದು, ಉಳಿದ 78 ಕೋಟಿ ಮೊತ್ತ ಕ್ರಿಯಾ ಯೋಜನೆಗೆ ಲಭ್ಯವಾಗಲಿದೆ ಎಂದರು. ಪಾಲಿಕೆ ವ್ಯಾಪ್ತಿಯಲ್ಲಿ  ಒಳಚರಂಡಿ ವ್ಯವಸ್ಥೆ ಅಧುನೀಕರಣಗೊಳಿಸಲು 140 ಕೋಟಿ ಮೊತ್ತದ ಕಾಮಗಾರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ.

ನಗರದ ಕೆಲವು ಭಾಗಗಳಲ್ಲಿ ಹಳೆಯ ಪೈಪ್‌ಲೈನ್‌ ಬದಲಿಸಬೇಕಾಗಿದ್ದು, ಅದಕ್ಕಾಗಿ  ಯೋಜನೆ ರೂಪಿಸಲಾಗಿದೆ. ಇದಕ್ಕೆ ಸರ್ಕಾರದ ಒಪ್ಪಿಗೆ ಸಿಗಬೇಕು ಎಂದು ಹೇಳಿದರು. ಸಭೆಯಲ್ಲಿ ಸಂಸದ ಪ್ರತಾಪಸಿಂಹ, ಶಾಸಕರಾದ ದೇವೇಗೌಡ, ರಾಮದಾಸ್‌, ನಾಗೇಂದ್ರ, ಮಂಜುನಾಥ್‌, ಹರ್ಷವರ್ಧನ್‌, ವಿಧಾನಪರಿಷತ್‌ ಸದಸ್ಯ  ಸಂದೇಶ್‌ ನಾಗರಾಜು, ಮೇಯರ್‌ ತಸ್ನೀಂ, ಉಪಮೇಯರ್‌ ಶ್ರೀಧರ್‌, ಜಿಲ್ಲಾಧಿಕಾರಿ ಆಭಿರಾಂ ಜಿ.ಶಂಕರ್‌, ಪಾಲಿಕೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next