Advertisement

ಒಂದು ಕೋಟಿ ರೂಗಳ ವೆಚ್ಚದಲ್ಲಿ ದೂರ ತರಂಗ ಶಿಕ್ಷಣ: ಶ್ರೀ ಸ್ವಾಮಿ ಜಪಾನಂದ

09:13 PM Jul 14, 2022 | Team Udayavani |

ಕೊರಟಗೆರೆ: ಜಿಲ್ಲೆಯ ಗಡಿಭಾಗದ ತಾಲೂಕುಗಳ 50 ಸರ್ಕಾರಿ ಶಾಲೆಗಳಲ್ಲಿ ಮೊದಲ ಹಂತದಲ್ಲಿ ಒಂದು ಕೋಟಿ ರೂಗಳ ವೆಚ್ಚದಲ್ಲಿ ದೂರ ತರಂಗ ಶಿಕ್ಷಣವನ್ನು ಅಳವಡಿಲಾಗಿದೆ ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಶ್ರೀ ಸ್ವಾಮಿ ಜಪಾನಂದ ಸ್ವಾಮೀಜಿ ತಿಳಿಸಿದರು.

Advertisement

ತಾಲೂಕಿನ ಹೊಳವನಹಳ್ಳಿ ಹೊಬಳಿಯ ಗೊಡ್ರಹಳ್ಳಿ ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ದೂರತರಂಗ ಶಿಕ್ಷಣ ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳ ಗ್ರಾಮೀಣ ಮಕ್ಕಳಿಗೆ ತಂತ್ರಜ್ಞಾನ ಶಿಕ್ಷಣ ನೀಡುವ ನಿಟ್ಟಿನಲ್ಲಿ ಇನ್ಫೋಸಿಸ್ ಪೌಂಡೇಷನ್ ಸಂಸ್ಥೆಯ ಅದ್ಯಕ್ಷೆ ಸುಧಾಮೂರ್ತಿರವರ ಸಂಪೂರ್ಣ ಸಹಕಾರದಿಂದ ಈ ದೂರ ತರಂಗ ಶಿಕ್ಷಣವನ್ನು ತರಲಾಗಿದ್ದು ನಮ್ಮ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣಕ್ಕೆ ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಳ್ಳಬೇಕಾಗಿದೆ ಎಂದ ಅವರು ತಾಲೂಕಿನಲ್ಲಿ ಅರಸಾಪುರ, ಎಲೆರಾಂಪುರ, ಗೊಡ್ರಹಳ್ಳಿ, ಯಲಚಗೆರೆ, ಬಿ.ಡಿ.ಪುರ ಶಾಲೆಗಳಿಗೆ ಪ್ರಥಮವಾಗಿ ಈ ಯೋಜನೆ ನೀಡಲಾಗಿದೆ, ಕೊರಟಗೆರೆ ಕ್ಷೇತ್ರ ಡಾ.ಜಿ.ಪರಮೇಶ್ವರ ರಂತಹ ವಿದ್ಯಾವಂತ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಶಾಸಕರನ್ನು ಪಡೆದಿರುವುದು ಶಿಕ್ಷಣವು ಮತಷ್ಟು ಬೆಳೆಯಲಿದೆ ಎಂದರು.

ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿದ್ದ ತಾಲೂಕಿನ ಎಲೆರಾಂಪುರದ ನರಸಿಂಹಗಿರಿ ಕ್ಷೇತ್ರದ ಹನುಮಂತಸ್ವಾಮಿಜಿ ಮಾತನಾಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಲು ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಬೇಕಿದೆ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರುಗಳನ್ನು ಪ್ರಶಂಸಿಸಬೇಕಾದೆ, ಸರ್ಕಾರಿ ಶಾಲೆಗಳಲ್ಲಿ ಜಪಾನಂದ ಸ್ವಾಮೀಜಿಯವರ ದೂರತರಂಗ ಶಿಕ್ಷಣ ಅತ್ಯಂತ ಮಹತ್ವದ್ದು. ಈ ಭಾಗದ ಶಾಸಕರಾದ ಡಾ.ಜಿ.ಪರಮೇಶ್ವರ ರವರು ಅಭಿವೃದ್ದಿಯಲ್ಲಿ ಮುಂಚುಣಿಯಲ್ಲಿ ಇದ್ದಾರೆ, ೧೦೦೦ ಬಾಕಿ ಇದ್ದರೆ ಮೃತ ದೇಹವನ್ನು ಕೊಡದ ಖಾಸಗಿ ಆಸ್ಪತ್ರೆಗಳ ಮದ್ಯೆ ಕೋವಿಡ್ ಸಂದರ್ಭದಲ್ಲಿ ಮತ್ತು ಇನ್ನಿತರ ಪ್ರಕರಣಗಳಲ್ಲಿ ಸಾವಿರಾರು ಜನರಿಗೆ ಅವರ ಆಸ್ಪತ್ರೆಯಲ್ಲಿ ಉಚಿತ ಸೇವೆ ಮತ್ತು ಕೆಲವು ಸಂದರ್ಭದಲ್ಲಿ ಹಣ ಕಟ್ಟಲಾಗದ ಬಡವರಿಗೆ ಸಹಾಯ ಮಾಡಿರುವವರು ಶಾಸಕ ಡಾ.ಜಿ.ಪರಮೇಶ್ವರ ಮಾತ್ರ ಎಂದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಶಾಸಕ ಡಾ.ಜಿ.ಪರಮೇಶ್ವರ ಮಾತನಾಡಿ ಶಿಕ್ಷಣವು ಜೀವನದಲ್ಲಿ ಮಹತ್ತರ ಬದಲಾವಣೆ ನೀಡುತ್ತದೆ, ಸರ್ಕಾರಗಳು ಪ್ರತಿವರ್ಷದ ಅಯವ್ಯಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಬೇಕು, ಈ ಕ್ಷೇತ್ರದಲ್ಲಿ ನನ್ನ ಶಾಸಕ ಅವಧಿಯಲ್ಲಿ ಸುಮಾರು ೧೦೦ ಕೋಟಿಗಳ ಶಿಕ್ಷಣ ಯೊಜನೆಯನ್ನು ತಂದಿದ್ದು ಅವುಗಳಲ್ಲಿ ಬಹುತೇಕ ವಸತಿ ಶಾಲೆಗಳು ಆಗಿವೆ, ನಮ್ಮ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾಥಿಗಳು ಪ್ರತಿಭಾನ್ವಿತರಾಗಿರುತ್ತಾರೆ ಅವರಿಗೆ ಅವಕಾಶ ಉತ್ತಮ ಪರಿಸರ ರೂಪಿಸಿ ಕೊಡಬೇಕಾದ್ದು ನಮ್ಮ ಕರ್ತವ್ಯ ನಿಟ್ಟಿನಲ್ಲಿ ಜಪಾನಂದ ಸ್ವಾಮಿಜಿಗಳು ಮತ್ತು ಸುಧಾಮೂರ್ತಿ ರವರು ಸರ್ಕಾರ ಶಾಲೆಗಳ ಅಬಿವೃದ್ದಿ ಸರ್ಕಾರಕ್ಕೆ ಸಹಕಾರ ಯೋಜನೆಗಳನ್ನು ನೀಡುತ್ತಿರುವುದು ಅತ್ಯಂತ ಮಹತ್ತರ ಕಾರ್ಯ ಎಂದರು.

ಈ ಸಂದರ್ಭದಲ್ಲಿ ಗೊಡ್ರಹಳ್ಳಿ ಪ್ರೌಡಶಾಲೆಗೆ ಎಲ್ಲಾ ಮೂಲಭೂತ ಸೌರ‍್ಯ ನೀಡುವುದರೊಂದಿಗೆ ವಿದ್ಯಾರ್ಥಿಗಳ ಆಶಾಯದಂತೆ ಇಂಗ್ಲಿಷ್ ಮಾದ್ಯಮವನ್ನು ಮಂಜೂರು ಮಾಡಿಕೊಡಿಸುವುದಾಗಿ ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುದಾಕರ್ ಗ್ರಾಮ ಪಂಚಾಯತಿ ಅದ್ಯಕ್ಷೆ ಕಾಂಚನ, ಉಪಾದ್ಯಕ್ಷ ಕರಿಯಪ್ಪ, ಸದಸ್ಯರುಗಳಾದ ಲಕ್ಷೀನರಸಯ್ಯ, ಸುಬ್ಬರಾಯಪ್ಪ, ಎಸ್ ಡಿಎಂಸಿ ಅದ್ಯಕ್ಷ ಚನ್ನಿಗರೆಡ್ಡಿ ಮಾಜಿ ತಾ.ಪಂ ಉಪಾದ್ಯಕ್ಷ ವೆಂಕಟಪ್ಪ, ಸದಸ್ಯ ಈರಣ್ಣ ಮುಖಂಡ ಉಮಾಶಂಕರ್ ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next