Advertisement

4 ವಾರ ಕಾಲಾವಕಾಶ ಕೋರಿದ ಅತೃಪ್ತರು

12:29 AM Jul 24, 2019 | Team Udayavani |

ಬೆಂಗಳೂರು: 15 ಮಂದಿ ಅತೃಪ್ತ ಶಾಸಕರು ಅನರ್ಹತೆ ವಿಚಾರಕ್ಕೆ ಸಂಬಂಧಿಸಿ ಸ್ಪೀಕರ್‌ ಮುಂದೆ ಹಾಜರಾಗಲು 4 ವಾರಗಳ ಕಾಲಾವಕಾಶವನ್ನು ಕೋರಿದ್ದಾರೆ. ಈ ಕುರಿತು ಸ್ವತಃ ಹುಣಸೂರ್‌ ಜೆಡಿಎಸ್‌ ಶಾಸಕರ ಎಚ್‌.ವಿಶ್ವನಾಥ್‌ ಅವರೇ ಸ್ಪಷ್ಟಪಡಿಸಿದ್ದಾರೆ.

Advertisement

ಈ ಕುರಿತು ಪಿಟಿಐ ಸುದ್ದಿಸಂಸ್ಥೆ ಜತೆ ಮಂಗಳವಾರ ಮಾತನಾಡಿದ ಅವರು, “ಹೌದು, ನಾವು ನಮ್ಮ ವಕೀಲರ ಮೂಲಕ ಸ್ಪೀಕರ್‌ ರಮೇಶ್‌ ಕುಮಾರ್‌ ಅವರಿಗೆ ಕೋರಿಕೆ ಸಲ್ಲಿಸಿದ್ದೇವೆ. 4 ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದೇವೆ’ ಎಂದಿದ್ದಾರೆ. 2011ರ ಬಾಲಚಂದ್ರ ಎಲ್‌. ಜಾರಕಿಹೊಳಿ ವರ್ಸಸ್‌ ಬಿ.ಎಸ್‌.ಯಡಿಯೂರಪ್ಪ ಪ್ರಕರಣವನ್ನು ಪ್ರಸ್ತಾಪಿಸುವ ಮೂಲಕ 4 ವಾರಗಳ ಕಾಲಾವಕಾಶ ಕೋರಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next