Advertisement
ಸುತ್ತಿ ಬಳಸಿ ಮಾರಣಕಟ್ಟೆ ಸಾಗುವ ಹಾದಿಯ ನಡುವೆ ಹರಿಯುವ ಹೊಳೆಗೆ ಮರದ ದಿಮ್ಮೆಯ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದ್ದು ಆ ಮಾರ್ಗವಾಗಿ ಮಳೆ ಗಾಲದಲ್ಲಿ ಆ ಭಾಗದ ನಿವಾಸಿಗಳು ಸಾಗುವ ಪರಿಪಾಠ ಹೊಂದಿದ್ದರು.ಕಳೆದ ವರುಷ ಮಳೆಗಾಲದಲ್ಲಿ ಆ ಮಾರ್ಗವಾಗಿ ಶಾಲೆಗೆ ಸಾಗುತ್ತಿದ್ದ ವಿದ್ಯಾರ್ಥಿನಿ ವಿಸ್ಮಯ ದೇವಾಡಿಗ ಆಕಸ್ಮಿಕವಾಗಿ ಕಾಲು ಜಾರಿ ನದಿ ಪಾಲಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ರೂ. 10 ಲಕ್ಷ ವೆಚ್ಚದಲ್ಲಿ ಕರಾವಳಿ ಅಭಿವೃದ್ಧಿಪ್ರಾಧಿಕಾರದ ನೇತƒತ್ವದಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಕಿರುಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.
Related Articles
Advertisement
ಅನುದಾನಕ್ಕಾಗಿ ಶಾಸಕರಿಗೆ ಮನವಿಚಿತ್ತೂರು ಗ್ರಾ.ಪಂ. ನಲ್ಲಿರುವ ಅನು ದಾನವು ಸೀಮಿತವಾಗಿದ್ದು ಅದು ಗ್ರಾ.ಪಂ. ವಿವಿಧ ಕಾಮಗಾರಿಗಳು ಹಾಗೂ ಇತರ ಸೌಕರ್ಯಗಳಿಗೆ ಬಳಸಬೇಕಾಗಿದ್ದು ಅಷ್ಟೊಂದು ಮೊತ್ತದ ಹಣವನ್ನು ಕ್ರೋಡೀ ಕರಿಸುವುದು ಕಷ್ಟಸಾಧ್ಯವೆಂದು ಚಿತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ ಮಡಿವಾಳ ಅಭಿಪ್ರಾಯ ಪಟ್ಟಿದ್ದಾರೆ. ನೂತನ ಶಾಸಕರಲ್ಲಿ ಮನವಿ ಸಲ್ಲಿಸಿ ಅನುದಾನಕ್ಕಾಗಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ. ತಾ.ಪಂ.ನಲ್ಲಿ ಪ್ರಸ್ತಾಪ
ಸಂನ್ಯಾಸಿಬೆಟ್ಟು-ಚಿತ್ತೂರು ಸಂಪರ್ಕ ಕಿರುಸೇತುವೆ ನಿರ್ಮಾಣವಾಗಿದ್ದರೂ ಅನುದಾನದ ಕೊರತೆಯಿಂದ ರಿವೀಟ್‌ಮೆಂಟ್ ಕಾಮಗಾರಿ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ತಾ.ಪಂ. ನಲ್ಲಿ ಪ್ರಸ್ತಾಪಿಸಿ ಜಿಲ್ಲಾ ಪಂಚಾಯತ್ ಗಮನಕ್ಕೆ ತಂದು ಅಪೂರ್ಣ ಕಾಮಗಾರಿ ಭರ್ತಿ ಮಾಡಲು ಪ್ರಯತ್ನಿಸಲಾಗುವುದು .
– ಉದಯ ಜಿ. ಪೂಜಾರಿ, ತಾ.ಪಂ. ಸದಸ್ಯ