Advertisement

Kollur: ಸಳ್ಕೋಡು, ಗಂಗೆಕೊಡ್ಲು ಕಿರುಸೇತುವೆಗಳು ಕುಸಿಯುವ ಭೀತಿ

01:54 PM Dec 10, 2024 | Team Udayavani |

ಕೊಲ್ಲೂರು: ಜಡ್ಕಲ್‌ ಗ್ರಾ.ಪಂ.ವ್ಯಾಪ್ತಿಯ ಸಳ್ಕೊàಡು ಹಾಗೂ ಗಂಗೆಕೊಡ್ಲು ಎಂಬಲ್ಲಿನ ಕಿರುಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ಬಿರುಕು ಬಿಟ್ಟಿದ್ದು.,ಇದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಕುಸಿದು ಬೀಳುವ ಭೀತಿ ಇದೆ.

Advertisement

30 ವರ್ಷಗಳ ಹಿಂದಿನ ಸೇತುವೆ
ಕೊಲ್ಲೂರು- ಜಡ್ಕಲ್‌- ಕಮಲಶಿಲೆ -ಧರ್ಮಸ್ಥಳ ನಡುವಿನ ಸಂಪರ್ಕ ಕೊಂಡಿಯಾಗಿರುವ ರಾಜ್ಯ ಹೆದ್ದಾರಿಯೆಂದು ಪರಿಗಣಿಸಲ್ಪಟ್ಟಿರುವ ಈ ಮಾರ್ಗದಲ್ಲಿ ದಿನಂಪ್ರತಿ ನೂರಾರು ಘನ ಹಾಗೂ ಲಘು ವಾಹನಗಳು ಸಂಚರಿಸುತ್ತವೆ. ಕೊಲ್ಲೂರಿನಿಂದ ಹಳ್ಳಿಹೊಳೆಗೆ ಸನಿಹದ ಮಾರ್ಗವಾಗಿರುವುದರಿಂದ ಕಮಲಶಿಲೆ ದೇಗುಲಕ್ಕೆ ತೆರಳುವ ಯಾತ್ರಾರ್ಥಿಗಳು ಕೊಲ್ಲೂರು ಕ್ಷೇತ್ರ ದರ್ಶನ ಮುಗಿಸಿ ಈ ಮಾರ್ಗವಾಗಿ ಸಾಗುತ್ತಾರೆ.

ಬಹುಕಾಲದ ಬೇಡಿಕೆ
ಜಡ್ಕಲ್‌ ಗ್ರಾಮಸ್ಥರು ಬಹಳಷ್ಟು ವರುಷಗಳಿಂದ ಸಳ್ಕೊàಡು ಹಾಗೂ ಗಂಗೆಕೊಡ್ಲುವಿನಲ್ಲಿರುವ ಶಿಥಿಲಗೊಂಡ ದುರ್ಬಲ ಸೇತುವೆಯನ್ನು ಬದಲಿಸಿ ನೂತನ ಸೇತುವೆ ನಿರ್ಮಿಸುವಂತೆ ಇಲಾಖೆ ಗಮನ ಸೆಳೆಯಲು ಗ್ರಾಮಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿದ್ದರು. ಕಳೆದ 7 ತಿಂಗಳ ಹಿಂದೆ ಜಡ್ಕಲ್‌ ಗ್ರಾ.ಪಂ. ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿಲಾಗಿತ್ತು. ಆದರೆ ಈವರೆಗೆ ಸರಕಾರದ ಮುಂದೆ ಸೇತುವೆ ನಿರ್ಮಾಣದ ಪ್ರಸ್ತಾವನೆ ತಲುಪದಿರುವುದು ಗ್ರಾಮಸ್ಥರಲ್ಲಿ ನಿರಾಸೆ ಉಂಟುಮಾಡಿದೆ. ಘನ ವಾಹನಗಳು ಸಾಗುತ್ತಿರುವ ಈ ಸೇತುವೆ ಬದಲಿಸದಿದ್ದಲ್ಲಿ ಮುಂದಿನ ದಿನ ದುರಂತ ಕಟ್ಟಿಟ್ಟ ಬುತ್ತಿ.

ಏಕಕಾಲದಲ್ಲಿ ಸೇತುವೆ ಬಳಿ ವಾಹನಗಳು ಎದುರು ಬದುರಾದಲ್ಲಿ ಫಜೀತಿಯೇ ಸರಿ. ರಾತ್ರಿ ಈ ಭಾಗದಲ್ಲಿ ಸಂಚರಿಸುವ ವಾಹನ ಚಾಲಕರು ನಿಗಾ ವಹಿಸದಿದ್ದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಒಂದೆಡೆ ಶಿಥಿಲಗೊಂಡ ಸೇತುವೆಯಾದರೆ ಮತ್ತೂಂದಡೆ ಸೇತುವೆ ಮಾರ್ಗವಾಗಿ ಸಾಗುವ ಹಾದಿಯೂ ಹೊಂಡಮಯವಾಗಿದ್ದು, ಚಾಲಕರು ಸರ್ಕಸ್‌ ಮಾಡಿ ಪ್ರಯಾಣ ಮುಂದುವರಿಸಬೇಕಾದ ಪರಿಸ್ಥಿತಿ ಇದೆ. ಪುರಾತನ ಕಾಲದ ಸೇತುವೆಗೆ ಮುಕ್ತಿ ಎಂದು ಎಂಬುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.

Advertisement

ಪುನರ್‌ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ
ಶಿಥಿಲಗೊಂಡ 2 ಸೇತುವೆಗಳ ಪುನರ್‌ ನಿರ್ಮಾಣದ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೆ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
– ಪಾರ್ವತಿ ಬೆಳಾರಿ, ಅಧ್ಯಕ್ಷರು, ಗ್ರಾ.ಪಂ. ಜಡ್ಕಲ್‌

ಬಹಳಷ್ಟು ವರ್ಷಗಳಿಂದ ಬೇಡಿಕೆ
ಬಹಳಷ್ಟು ವರ್ಷಗಳಿಂದ ಶಿಥಿಲಗೊಂಡ ಸೇತುವೆಗಳ ಬದಲಿ ವ್ಯವಸ್ಥೆ ಮಾಡುವಂತೆ ಆಗ್ರಹಿಸಲಾಗಿದ್ದರೂ ಬೇಡಿಕೆ ಈಡೇರದಿರುವುದು ದುರಾದೃಷ್ಟಕರ.
– ಚಂದ್ರ ಪೂಜಾರಿ, ಸಳ್ಕೋಡು

-ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next