Advertisement

ಚುನಾವಣಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿ; ಗ್ರಾ.ಪಂ ಮಾಜಿ ಉಪಾಧ್ಯಕ್ಷರ ವಿರುದ್ಧ ಪ್ರಕರಣ ದಾಖಲು

05:12 PM Dec 12, 2020 | Mithun PG |

ಬಂಟ್ವಾಳ: ತುಂಬೆ ಗ್ರಾಮ ಪಂಚಾಯಿತಿಯ ಪಿಡಿಒ, ಸಹಾಯಕ ಚುನಾವಣಾಧಿಕಾರಿಯವರಿಗೆ ಅವಹೇಳನಕಾರಿಯಾಗಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ, ಚುನಾವಣಾ ಸಂಬಂಧ ಕಾಗದಪತ್ರವನ್ನು ಎಸೆದು ಜೀವಬೆದರಿಕೆ ಒಡ್ಡಿದ ಆರೋಪದಲ್ಲಿ  ತುಂಬೆ ಗ್ರಾ.ಪಂನ ಮಾಜಿ ಉಪಾಧ್ಯಕ್ಷರೋರ್ವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Advertisement

ತುಂಬೆ ಗ್ರಾಮ ಪಂಚಾಯತ್ ನ  ಮಾಜಿ ಉಪಾಧ್ಯಕ್ಷ ಪ್ರವೀಣ್ ಬಿ.ತುಂಬೆ ಎಂಬವರ ಮೇಲೆ ಸಹಾಯಕ ಚುನಾವಣಾಧಿಕಾರಿ, ಪಿಡಿಒ ಚಂದ್ರಾವತಿ ಅವರ ದೂರಿನನ್ವಯ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನಲೆ:

ಶುಕ್ರವಾರರಂದು (ಡಿ. 11) ತುಂಬೆ ಗ್ರಾ.ಪಂ. ವಾರ್ಡ್ -1 ರಲ್ಲಿ ಪರಿಶಿಷ್ಟ ಪಂಗಡ  ಮಹಿಳಾ  ಮೀಸಲಾತಿ ಸ್ಥಾನಕ್ಕೆ ಅಭ್ಯರ್ಥಿಗಳು ಯಾರೂ ನಾಮಪತ್ರ ಸಲ್ಲಿಸಲು ಬಾರದ ಹಿನ್ನಲೆಯಲ್ಲಿ  ನಿಯಮದಂತೆ   ಆ ಸ್ಥಾನಕ್ಕೆ ಪರಿಶಿಷ್ಟ ಜಾತಿಯ ಮಹಿಳಾ  ಅಭ್ಯರ್ಥಿಯನ್ನು ನಿಲ್ಲಿಸಲು ಅವಕಾಶ ಇದ್ದು ಮಹಿಳಾ ಅಭ್ಯರ್ಥಿಯೋರ್ವರು  ನಾಮಪತ್ರ ಸಲ್ಲಿಸಿ ತೆರಳಿದ್ದರು.

ಇದನ್ನೂ ಓದಿ: ಕೊಡಪಾನದ ಒಳಗೆ ಮೂಗು ತೂರಿಸಲು ಹೋಗಿ ತಲೆ ಸಿಲುಕಿಕೊಂಡು ಒದ್ದಾಡಿದ ಬೀದಿ ನಾಯಿ | Udayavni

Advertisement

ಮಧ್ಯಾಹ್ನ 3.00 ಗಂಟೆಯ ಬಳಿಕ ಗ್ರಾ.ಪಂ ಕಚೇರಿಗೆ ಆಗಮಿಸಿದ್ದ ಪ್ರವೀಣ್ ಬಿ.ತುಂಬೆ, ಚುನಾವಣೆಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಎಸೆದು ಚುನಾವಣಾ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಮಹಿಳಾ ಅಧಿಕಾರಿ ಎಂಬುವುದನ್ನು ಪರಿಗಣಿಸದೆ ಅವರನ್ನು   ತೀರಾ ಅವಹೇಳನವಾಗಿ ನಿಂದಿಸಿದ್ದಲ್ಲದೆ  ಬೆದರಿಕೆ ಕೂಡ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿರುವ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಾಂಜಾರು ಮಲೆಯಲ್ಲಿ ಮತಗಟ್ಟೆ ವೀಕ್ಷಣೆಗೆ ತೆರಳಿದ ಅಧಿಕಾರಿಗಳಿಗೆ ಎದುರಾದ ಒಂಟಿ ಸಲಗ

Advertisement

Udayavani is now on Telegram. Click here to join our channel and stay updated with the latest news.

Next