Advertisement
ಈ ಮೂಲಕ ಸುಪ್ರೀಂ ಸ್ಪೀಕರ್ ತೀರ್ಪನ್ನು ಭಾಗಶಃ ಎತ್ತಿಹಿಡಿದೆ. ಈ ಮಧ್ಯೆ, ಶಾಸಕರು ರಾಜೀನಾಮೆ, ಪಕ್ಷಾಂತರ ಹಾಗೂ ಅನರ್ಹತೆಯ ಪ್ರಹಸನದ ಮೂಲ ಬಿಂದು ಆಗಿದ್ದ ಸಂವಿಧಾನದ ಶೆಡ್ನೂಲ್ (ಪರಿಚ್ಛೇದ) 10 ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯ ವ್ಯಾಖ್ಯಾನ ಹಾಗೂ ವೈರುಧ್ಯಗಳ ಬಗ್ಗೆ ಈ ತೀರ್ಪು ಹತ್ತಾರು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ. ಸುಪ್ರೀಂಕೋರ್ಟ್‌ನ ಒಟ್ಟಾರೆ ತೀರ್ಪು ಮುಂದಿಟ್ಟುಕೊಂಡು, ಈ ವಿಷಯಗಳ ಬಗ್ಗೆ ಕಾನೂನು ತಜ್ಞರು ತಮ್ಮದೇ ವಿಶ್ಲೇಷಣೆ- ವಿಮರ್ಶೆಗೆ ಮುಂದಾಗಿದ್ದಾರೆ.
Related Articles
Advertisement
ಸ್ಪಷ್ಟತೆ ಸಿಕ್ಕಿದೆ: ಸುಪ್ರೀಂ ತೀರ್ಪಿನಿಂದ 10ನೇ ಶೆಡ್ನೂಲ್ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಕ್ಕಿದೆಯೇ ಅಥವಾ ಸಿಗಬೇಕೆದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ, “ನನಗೆ ಹಾಗೇನು ಅನಿಸುತ್ತಿಲ್ಲ. ಏಕೆಂದರೆ, ಸಂವಿಧಾನದಲ್ಲಿ ಮೊದಲೇ ಆ ರೀತಿ ಇದೆ. ಯಾವುದೇ ಒಬ್ಬ ಶಾಸಕ ಅನರ್ಹಗೊಂಡು ಅಥವಾ ರಾಜಿನಾಮೆ ಕೊಟ್ಟು ಅದೇ ಪಕ್ಷದ ಸದಸ್ಯನಾಗಿ ಮುಂದುವರಿಯಲು ಅವಕಾಶವಿಲ್ಲ. ಆದರೆ, ರಾಜಿನಾಮೆ ಕೊಟ್ಟು ಬೇರೆ ಪಕ್ಷಕ್ಕೆ ಹೋಗಲು ಅಥವಾ ಸ್ಪರ್ಧಿಸಿ ಗೆಲ್ಲಲು ಸಮಸ್ಯೆ ಇಲ್ಲ. ಹೀಗಿದ್ದಾಗಲೂ ರಮೇಶ್ ಕುಮಾರ್ ಅವರು ಸ್ವಲ್ಪ ಮುಂದುವರಿದಿದ್ದರು. ರಾಜೀನಾಮೆ ಮತ್ತು ಅನರ್ಹತೆ ವಿಚಾರ ಬಂದಾಗ ಏನು ಮಾಡಬೇಕು ಅನ್ನೊದಕ್ಕೆ ಸುಪ್ರೀಂ ಈ ತೀರ್ಪಿನಿಂದ ಸ್ಪಷ್ಟತೆ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.
ಪಕ್ಷ ವಿರೋಧಿ ಪದವೇ ಇಲ್ಲ: ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅನರ್ಹಗೊಂಡವರಿಗೆ ಗರಿಷ್ಠ ಮಟ್ಟದ ಶಿಕ್ಷೆ ಆಗಬೇಕು ಅನ್ನುವುದು ಮತದಾರರು, ಸಾರ್ವಜನಿಕರ ಸಹಜ ಮತ್ತು ಸಾಮಾನ್ಯ ಬೇಡಿಕೆ. ಆದರೆ, 10ನೇ ಶೆಡ್ನೂಲ್‌ನಲ್ಲಿ ಅದಕ್ಕೆ ಪೂರಕವಾದ ಅವಕಾಶಗಳು ಇಲ್ಲ. ಅಲ್ಲಿ ಇರುವುದು ಸ್ವ ಇಚ್ಛೆಯಿಂದ ರಾಜೀನಾಮೆ ಎಂದಿದೆ. ಪಕ್ಷ ವಿರೋಧಿ ಎಂಬ ಪದವೇ ಇಲ್ಲ. ಹಾಗಾಗಿ, ಅರ್ಥ ಬಾರದ ಪದಗಳಿಗೆ ಕಳೆದ ಹತ್ತಾರು ವರ್ಷಗಳಿಂದ ಅರ್ಥ ಕೊಡುವ ಕೆಲಸವಾಗಿದೆ. ಅದು ಆಯಾ ಸಂದರ್ಭ, ಸನ್ನಿವೇಶ ಹಾಗೂ ಅನುಕೂಲಗಳಿಗೆ ತಕ್ಕಂತೆ ಆಗಿದೆ. ಹೀಗಾಗಿ, 10ನೇ ಶೆಡ್ನೂಲ್‌ಗೆ ಬಲ ನೀಡುವ ದಿಸೆಯಲ್ಲಿ ಶಾಸನ ರಚನಾ ಸಂಸ್ಥೆಗಳು ಅವಲೋಕನ ನಡೆಸಬೇಕಾಗಿದೆ ಎಂದು ಸುಪ್ರೀಂಕೋರ್ಟ್ ವಕೀಲ ಕೆ.ವಿ. ಧನಂಜಯ ಹೇಳುತ್ತಾರೆ.
ಈ ತೀರ್ಪು ಸಾಂವಿಧಾನಿಕ ತತ್ವಗಳ ಸಮರ್ಥನೆಯಾಗಿದೆ. ಜನಪ್ರತಿನಿಧಿಗಳು ತಮ್ಮ ವೈಯುಕ್ತಿಕ ಅಧಿಕಾರದಾಸೆಗೆ ಜನಮತವನ್ನು ನಿರ್ಲಕ್ಷ್ಯ ಸಾಧ್ಯವಿಲ್ಲ. ಅನರ್ಹ ಶಾಸಕರನ್ನು ಸೋಲಿಸುವ ಮೂಲಕ ಮತದಾರರು ಮತ್ತು ಜನತೆ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ತತ್ವಗಳನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ವಿಶ್ವಾಸ ನನಗಿದೆ. ಇಂತಹ ಪ್ರಕರಣಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸಲು ಕಾನೂನು ತಿದ್ದುಪಡಿ ತರುವ ಬಗ್ಗೆಯೂ ಸಂಸತ್ತು ಆಲೋಚಿಸಬೇಕು. -ಎ.ಎಸ್. ಪೊನ್ನಣ್ಣ, ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ನಾನು ಅನರ್ಹತೆ ವ್ಯಾಪ್ತಿಗೆ ಬರುವುದಿಲ್ಲ: ಸುಧಾಕರ್
ಬೆಂಗಳೂರು: ಶಾಸಕರ ಅನರ್ಹತೆ ಪ್ರಕರಣದಲ್ಲಿ ಎಲ್ಲ ಶಾಸಕರಂತೆ ತಮ್ಮನ್ನೂ ಪರಿಗಣಿಸಿರುವುದು ಸರಿಯಿಲ್ಲ. ನಾನು ಅನರ್ಹತೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಚಿಕ್ಕಬಳ್ಳಾಪುರ ಅನರ್ಹ ಶಾಸಕ ಡಾ.ಸುಧಾಕರ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮಾತನಾಡಿ, ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ವಿಷಯಗಳಲ್ಲಿ ನಮ್ಮ ಪರವಾಗಿ ಬಂದಿದ್ದು, ಸ್ಪೀಕರ್ ಅವರ ತೀರ್ಮಾನವನ್ನು ಭಾಗಶಃ ಒಪ್ಪಿದೆ. ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಈ ರೀತಿಯ ತೀರ್ಪು ನೀಡಿದೆ. ನಾನು ಅನರ್ಹತೆ ಅಡಿಯಲ್ಲಿ ಬರುವುದಿಲ್ಲ. ಸುಪ್ರೀಂ ಕೋರ್ಟ್ ಬೇರೆಯವರ ಜತೆಗೆ ನನ್ನನ್ನೂ ಪರಿಗಣಿಸಿದೆ. ವಿಚಾರಣೆ ವೇಳೆ ನನ್ನ ಪ್ರಕರಣದ ಬಗ್ಗೆ ಹೆಚ್ಚಿನ ಚರ್ಚೆಯಾಗಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ನೋವು ತಂದಿದ್ದು, ಈ ಬಗ್ಗೆ ಕಾನೂನು ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದೇನೆ. ಈ ಬಗ್ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಕುರಿತು ವಕೀಲರ ತಂಡದ ಜತೆಗೆ ಚರ್ಚಿಸುವುದಾಗಿ ಹೇಳಿದರು. ಕಾಂಗ್ರೆಸ್‌ನಲ್ಲಿ ನನ್ನನ್ನು ಮುಗಿಸಲು ಹುನ್ನಾರ ನಡೆಸಲಾಗಿತ್ತು. 14 ತಿಂಗಳು ಸಾಕಷ್ಟು ಅಪಮಾನವಾಗಿತ್ತು. ನಮ್ಮ ಪಕ್ಷದ ಮಂತ್ರಿಗಳೇ ನನ್ನ ಕೆಲಸ ಮಾಡಿಕೊಡದಂತೆ ಮುಖ್ಯಮಂತ್ರಿಗೆ ಸಲಹೆ ನೀಡುತ್ತಿದ್ದರು. ಇದನ್ನು ಕುಮಾರಸ್ವಾಮಿಯವರೇ ಹೇಳಿದ್ದರು. ಚುನಾವಣೆಯಲ್ಲಿ ಅವರ ಬೆಂಬಲ ಕೋರಲು ಇನ್ನೂ ಸಮಯವಿದೆ. ನಮ್ಮನ್ನು ಮುಗಿಸುವುದು ಬೆಳೆಸುವುದು ಜನರ ಕೈಯಲ್ಲಿದೆ ಎಂದರು. ಫಲಿತಾಂಶದ ಮೇಲೆ ಅನರ್ಹರ ಭವಿಷ್ಯ ನಿರ್ಧಾರ
ಬೆಂಗಳೂರು: ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸದೇ ಯಾವುದೇ ಸಾಂವಿಧಾನಿಕ ಹುದ್ದೆ ಹೊಂದುವಂತಿಲ್ಲ ಎಂದು ಹೇಳುವ ಮೂಲಕ ಅನರ್ಹರಿಗೆ ಶಾಕ್ ನೀಡಿದೆ. ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ತೀರ್ಪಿನಲ್ಲಿ ಪ್ರಸಕ್ತ ವಿಧಾನಸಭೆಯ ಅವಧಿಗೆ ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸಿದ್ದರು. ಅಲ್ಲದೇ ಚುನಾವಣೆಯಲ್ಲಿ ಗೆಲ್ಲದ ಹೊರತು ಅವರಿಗೆ ಸಾಂವಿಧಾನಿಕ ಹುದ್ದೆ ನೀಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದರು. ಸುಪ್ರೀಂ ಕೋರ್ಟ್ ಕೂಡ ಅನರ್ಹತೆಯ ವಿಷಯದಲ್ಲಿ ಸ್ಪೀಕರ್ ನಿರ್ಧಾರವನ್ನು ಎತ್ತಿ ಹಿಡಿದಿದೆ. ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸದಿದ್ದರೆ, ಯಾವುದೇ ಸಾಂವಿಧಾನಿಕ ಹುದ್ದೆ ಪಡೆಯಲು ಅರ್ಹರಾಗುವುದಿಲ್ಲ ಎಂದು ಹೇಳಿರುವುದರಿಂದ ಅನರ್ಹ ಶಾಸಕರ ಭವಿಷ್ಯ ಚುನಾವಣೆಯ ಫಲಿತಾಂಶದ ಮೇಲೆ ನಿಂತಿದೆ. ಬಿಜೆಪಿ, ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ 7 ಜನ ಶಾಸಕರನ್ನು ಗೆಲ್ಲಿಸಿಕೊಂಡು ಬರುವ ಅನಿವಾರ್ಯತೆಗೆ ಸಿಲುಕಿದೆ. ಆದರೆ, ಅನರ್ಹರು ಗೆಲ್ಲುವು ಸಾಧಿಸದೇ ಹೋದರೆ, ಮಂತ್ರಿ ಹಾಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದಲೂ ವಂಚಿತರಾಗುವುದರಿಂದ ಈ ಚುನಾವಣೆಯಲ್ಲಿ ಅನರ್ಹರಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದ್ದು, ಒಂದು ವೇಳೆ ಚುನಾವಣೆಯಲ್ಲಿ ಸೋಲುಂಡರೆ, ಅವರ ಬಂಡಾಯದ ಉದ್ದೇಶವೇ ವಿಫಲವಾದಂತಾಗುತ್ತದೆ.