ಸಾಮಾನ್ಯ ಸಭೆಯಲ್ಲಿ ಅನುಮೋದಿಸಿದರು.
Advertisement
ಸಭೆ ಆರಂಭದಲ್ಲಿ ಹಿರಿಯ ಸದಸ್ಯ ವಿ. ಕದಿರೇಶ್ ಮಾತನಾಡಿ, ಪ್ರಾಮಾಣಿಕ ದಕ್ಷ ನಗರಸಭೆ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಮನೋಹರ್ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ಪ್ರಸ್ತುತ ನಗರದ ಅಭಿವೃದ್ಧಿಗೆ ಅವರ ಅವಶ್ಯಕತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನುಇಲ್ಲಿಯೇ ಉಳಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸದಸ್ಯರೆಲ್ಲರೂ ಒಂದಾಗಿ ಮುಖ್ಯಮಂತ್ರಿಗಳ ಬಳಿಗೆ ತೆರಳಿ ಮನವಿ ಸಲ್ಲಿಸೋಣ ಎಂದರು.
ಫಲಾನುಭವಿಗಳು ಇತರರಿಗೆ ಮಾರಿಕೊಂಡಿದ್ದಾರೆ. ಖರೀದಿಸಿರುವವರಿಗೆ ಖಾತೆ ಮಾಡಿಕೊಡುವ ಪ್ರಸ್ತಾವನೆಗೆ ಸಂಬಂ ಸಿದಂತೆ ಉತ್ತರಿಸಿದ ಪೌರಾಯುಕ್ತ ಮನೋಹರ್, ಖರೀದಿದಾರರಿಗೆ ಖಾತೆ ಮಾಡಿಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ. ಮೂಲ ಫಲಾನುಭವಿಗಳಿಗೆ ಮಾತ್ರ ಖಾತೆ ಮಾಡಿಕೊಡಲು ಸಾಧ್ಯ ಎಂದರು. ಸದಸ್ಯರಾದ ಅಜಿತ್, ಆಂಜನಪ್ಪ ಮಾತನಾಡಿ, ಈಗಾಗಲೇ ಬಹುತೇಕ ಮೂಲ ಫಲಾನುಭವಿಗಳು ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿ ಖಾತೆ ಮಾಡಿಕೊಡುವುದು ಕಷ್ಟ. ಹುಡುಕಿದರೆ ಶೇ.10ರಷ್ಟು ಮಾತ್ರ ಸಿಗುತ್ತಾರೆ. ಈ ಹಿನ್ನಲೆಯಲ್ಲಿ ಹಾಲಿ ವಾಸವಿರುವವರಿಗೆ ಖಾತೆ ಮಾಡಿ ಕೊಡಿ ಎಂದು ಒತ್ತಾಯಿಸಿದರು.
Related Articles
Advertisement
ಶಿವಮೊಗ್ಗ ಮಾಚೇನಹಳ್ಳಿಯಲ್ಲಿರುವ ಡೈರಿಗೆ ನೀರು ಸರಬರಾಜು ಮಾಡುವಂತೆ ಡೈರಿ ವ್ಯವಸ್ಥಾಪಕರ ಬೇಡಿಕೆಗೆ ಶಾಸಕರು ಸೇರಿದಂತೆ ಹಲವು ಸದಸ್ಯರು ಡೈರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ಮೂಲಕ ಪ್ರಸ್ತಾವನೆಯನ್ನು ತಳ್ಳಿಹಾಕಿದರು. ಮಳೆ ಬರದೆ ನೀರಿಗೆ ಬರವಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯಾಗುವುದರಿಂದ ನೀರು ಸರಬರಾಜು ಸಾಧ್ಯವಿಲ್ಲ ಎಂದರು. ಇದಕ್ಕೆ ಮತ್ತೆ ಕೆಲ ಸದಸ್ಯರು ಕಂದಾಯ ಬರುವುದಾದರೆ ನೀರು ಕೊಡುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು. ನಗರಸಭೆ ಸ್ವತ್ಛತೆಗಾಗಿ ನೇಮಿಸಿರುವ ಪೌರ ಕಾರ್ಮಿಕರು ತ್ಯಾಜ್ಯ ತೆಗೆದುಕೊಂಡು ಹೋಗುವವರಾಗಿದ್ದಾರೆ. ಸ್ವಚ್ಛತೆ ಮಾಡುವವರೇ ಇಲ್ಲವಾಗಿದೆ. ನಗರಸಭೆ ಅಧಿಕಾರಿಗಳು ಮಾತ್ರ ಸ್ವಚ್ಛತೆ ಮಾಡಲು ಪೌರ ಕಾರ್ಮಿಕರನ್ನು ನೇಮಿಸಲಾಗಿದೆ ಎನ್ನುತ್ತಾರೆ. ಹಾಗಾದರೆ ಆ ಕಾರ್ಮಿಕರು ಎಲ್ಲಿ ಹೋಗುತ್ತಾರೆ ಎಂದು ಸದಸ್ಯ ಶಿವರಾಜ್ ತರಾಟೆಗೆ ತೆಗೆದುಕೊಂಡರು.
ಬಯೋಮೆಟ್ರಿಕ್ ಅಳವಡಿಸಿರುವುದರಿಂದ ಪೌರಕಾರ್ಮಿಕರು ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕರ್ತವ್ಯಕ್ಕೆ ಹಾಜರಾಗದಿದ್ದರೆ ಅವರ ಸಂಬಳ ಕಡಿತಗೊಳ್ಳುತ್ತದೆ ಎಂದು ಪೌರಾಯುಕ್ತ ಉತ್ತರಿಸಿದರು. ಅಧಿಕಾರಿಗಳು ನೀಡಿದ ಉತ್ತರವನ್ನು ಆಲಿಸಿದ ಶಾಸಕ ಅಪ್ಪಾಜಿ, ಪೌರಕಾರ್ಮಿಕರ ಕೊರತೆ ಇದ್ದರೆ ಹೆಚ್ಚುವರಿಯಾಗಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪರಿಸರ ಅಭಿಯಂತರ ರುದ್ರೇಗೌಡ ಹೊಸ ಟೆಂಡರ್‌ನಲ್ಲಿ ಈ ರೀತಿ ಸಮಸ್ಯೆ ಬರದಂತೆ ನೋಡಿಕೊಳ್ಳುತ್ತೇನೆ ಎಂದರು.ಸೊಳ್ಳೆ ನಿವಾರಣೆಗಾಗಿ ಫಾಗಿಂಗ್ ಮಾಡಲು ಬಳಸುತ್ತಿರುವ ಔಷಧ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈಗಾಗಲೇ ವಾಡ್
ìನಲ್ಲಿ ಸುಮಾರು 30 ಜನರು ಡೆಂಘೀ ಜ್ವರಕ್ಕೆ ತುತ್ತಾಗಿದ್ದಾರೆ. ಸೊಳ್ಳೆಗಳು ಸಾಯುತ್ತಿಲ್ಲ. ಫಾಗಿಂಗ್ ಬದಲಾಗಿ ಔಷ ಧ ಸಿಂಪಡಿಸಿ ಎಂದು ಸದಸ್ಯ ಶಿವರಾಜ್ ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ಸುಧಾಮಣಿ, ಟಿಪ್ಪು ಸೊಳ್ಳೆ ಔಷಧ ಮಿಶ್ರಣ ಸರಿಯಾದ ಪ್ರಮಾಣದಲ್ಲಿ
ಮಾಡುತ್ತಿಲ್ಲ. ಗಮನ ಹರಿಸಿ ಎಂದು ಆಯುಕ್ತರ ಗಮನಕ್ಕೆ ತಂದರು. ಸದಸ್ಯೆ ರೇಣುಕ ಮಾತನಾಡಿ, ತಮ್ಮಣ್ಣ ಕಾಲೋನಿಯಲ್ಲಿ ಮನೆ ಇಲ್ಲದವರಿಗೆ
ಮನೆ ನೀಡಿ ಇರುವ ಮನೆಗಳು ಬೀಳುವ ಸ್ಥಿತಿಯಲ್ಲಿವೆ. ಹಕ್ಕು ಹೊಂದಿರುವ ನಿವಾಸಿಗಳಿಗೆ ಖಾತೆ ಮಾಡಿಸಿ ಕೊಡಿ ಎಂದರು. 87 ಪ್ರಸ್ತಾವನೆಗಳ ಪೈಕಿ ಬಹುತೇಕ ಪ್ರಸ್ತಾವನೆಗಳಿಗೆ ಸದಸ್ಯರು ತಮ್ಮ ಒಪ್ಪಿಗೆ ಸೂಚಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ರಾಜು, ಉಪಾಧ್ಯಕ್ಷೆ
ಮಹಾದೇವಿ ಇದ್ದರು.