Advertisement

ಮಕ್ಕಳನ್ನು ಬಾಧಿಸುವ ಕಾಯಿಲೆಗಳು ಮತ್ತು ಪರಿಹಾರ

12:15 PM Apr 14, 2022 | Team Udayavani |

ಬೇಸಗೆ ಕಾಲದಲ್ಲಿ ಜನರನ್ನು ಹತ್ತು ಹಲವು ಕಾಯಿಲೆಗಳು ಕಾಡುತ್ತವೆ. ಅದರಲ್ಲೂ ಈ ಅವಧಿಯಲ್ಲಿ ಮಕ್ಕಳು ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಕ್ಕಳ ಆರೋಗ್ಯ ರಕ್ಷಣೆ, ಆಹಾರ ಸೇವನೆ ಕ್ರಮ, ಪಾಲನೆ-ಪೋಷಣೆ ಮತ್ತು ಅವರ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗೆಗೆ ಮಕ್ಕಳ ಹೆತ್ತವರಿಗೆ ಆಯುಷ್‌ ತಜ್ಞರು ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

Advertisement

ಬೇಸಗೆ ರಜೆಯಲ್ಲಿ ಮಕ್ಕಳು ಸಾಕಷ್ಟು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸಹಜ. ಈ ವೇಳೆ ಹೆತ್ತವರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ಗಮನಹರಿಸುವ ಜತೆಯಲ್ಲಿ ಮೇಲ್ವಿಚಾರಣೆ ನಡೆಸುವ ಅಗತ್ಯವಿರುತ್ತದೆ. ಬೇಸಗೆಯಲ್ಲಿ ಮಕ್ಕಳನ್ನು ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿದುಕೊಂಡು, ಮಕ್ಕಳನ್ನು ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಿಸಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದು ಕೊಳ್ಳು ವುದು ಅತೀಮುಖ್ಯ.

ಬೇಸಗೆಯಲ್ಲಿ ಮಕ್ಕಳನ್ನು ಕಾಡುವ ಕಾಯಿಲೆ ಗಳು ಮತ್ತವುಗಳಿಗೆ ಪರಿಹಾರೋಪಾಯ ಇಲ್ಲಿವೆ.
ಹೀಟ್‌ ರಾಶ್‌: ತಲೆ, ಕುತ್ತಿಗೆ ಮತ್ತು ಭುಜಗಳ ಮೇಲೆ ಕಾಣಿಸಿಕೊಳ್ಳುವ ಇದು ಕೆಂಪು ಅಥವಾ ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಬೆವರ ನಾಳಗಳು ಊದಿಕೊಂಡಾಗ ಮತ್ತು ನಿರ್ಬಂಧಿಸಿ ದಾಗ ಇದು ಕಾಣಿಸಿಕೊಳ್ಳುತ್ತದೆ. ಇದು ತುರಿಕೆ ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ತಾಪ ಮಾನ ಹೆಚ್ಚಿದ್ದಾಗ ದಪ್ಪನೆಯ ಬಟ್ಟೆಗಳನ್ನು ಧರಿಸುವುದು ಹೀಟ್‌ರಾಶ್‌ಗೆ ಸಾಮಾನ್ಯ ಕಾರಣವಾಗಿದೆ. ತೆಳ್ಳನೆಯ ಬಟ್ಟೆಗಳನ್ನು ಮಕ್ಕಳಿಗೆ ತೊಡಿಸುವ ಮೂಲಕ ಇದನ್ನು ತಪ್ಪಿಸಬಹುದು. ಹೀಟ್‌ ರಾಶ್‌ ಸಾಮಾನ್ಯವಾಗಿ ಒಂದು ಅಥವಾ ಎರಡು ದಿನಗಳಲ್ಲಿ ಹೋಗುತ್ತದೆ ಮತ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವುದಿಲ್ಲ.

ಸನ್‌ಬರ್ನ್ಸ್: ಸೂರ್ಯನಿಗೆ ಅತಿಯಾಗಿ ಮೈ ಒಡ್ಡಿಕೊ ಳ್ಳುವು  ದರಿಂದ ಮಗುವಿನ ಚರ್ಮಕ್ಕೆ ಹಾನಿಯಾಗುತ್ತದೆ. ಇದು ಕೆಂಪು, ಉರಿಯೂತ ಮತ್ತು ತೀವ್ರತರವಾದ ಪ್ರಕರಣ ಗಳಲ್ಲಿ ಚರ್ಮದ ಗುಳ್ಳೆಗಳು ಮತ್ತು ಸಿಪ್ಪೆ ಸುಲಿಯುವಿಕೆಯನ್ನು ಉಂಟುಮಾಡುತ್ತದೆ. ಇದನ್ನು ತಪ್ಪಿಸಲು ಸನ್‌ಸ್ಕಿನ್‌ ಮೇಲೆ ಮಾತ್ರ ಅವಲಂಬಿತವಾಗಿರದೆ, ಬಿಸಿಲು ಕಠೊರವಾಗಿದ್ದಾಗ ಅಂದರೆ ಬೆಳಗ್ಗೆ ಗಂಟೆ 11ರಿಂದ ಅಪರಾಹ್ನ 3ರ ನಡುವೆ ಮಕ್ಕಳನ್ನು ಹೊರಗೆ ಕಳುಹಿಸುವುದನ್ನು ತಪ್ಪಿಸಿ.

ಮನೆ ಮದ್ದು

Advertisement

-ಲೋಳೆ ರಸ (ಅಲೋವೆರಾ) ಮತ್ತು ಸೌತೆಕಾಯಿ: ಇವೆರಡರ ತಂಪಾಗಿಸುವ ಗುಣಲಕ್ಷಣಗಳು ಶಾಖಕ್ಕೆ ಪರಿಹಾರವನ್ನು ನೀಡುತ್ತದೆ. ಉರಿಯೂತವನ್ನು ನಿವಾರಿಸಲು ಮತ್ತು ಕೆಂಪು ಬಣ್ಣವನ್ನು ನಿವಾರಿಸಲು ಅಲೋವೆರಾ ಮತ್ತು ಸೌತೆಕಾಯಿಯಿಂದ ಮಾಡಿದ ಪೇಸ್ಟ್‌ ಅನ್ನು ಹಚ್ಚಿ.

-ಶ್ರೀಗಂಧದ ಪೇಸ್ಟ್‌ ಅನ್ನು ದೇಹಕ್ಕೆ ಹಚ್ಚಿ.

-ಬೇವಿನ ಎಲೆಗಳು ನಮ್ಮ ಸುತ್ತಮುತ್ತ ಸುಲಭವಾಗಿ ಸಿಗುತ್ತವೆ. ಬೇವು ಪ್ರಕೃತಿಯಲ್ಲಿ ನಂಜು ನಿರೋಧಕವಾಗಿದೆ. ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಮುಖ ಮತ್ತು ದೇಹದ ಇತರ ಭಾಗಗಳನ್ನು ತೊಳೆಯಿರಿ. ಇದು ವಿವಿಧ ರೀತಿಯ ಅಪಾಯಕಾರಿ ಸೂಕ್ಷ್ಮಜೀವಿಗಳಿಂದ ನಿಮ್ಮನ್ನು ದೂರವಿಡುತ್ತದೆ. ಸ್ನಾನಕ್ಕೆ ಬಳಸುವ ನೀರಿನಲ್ಲಿ ಬೇವಿನ ಎಲೆಗಳನ್ನು ಬಳಸುವುದರಿಂದ ಚರ್ಮದ ಮೇಲಿನ ಕಂದುಬಣ್ಣವನ್ನು(ಟ್ಯಾನ್‌)ಕಡಿಮೆ ಮಾಡುತ್ತದೆ.

ನಿರ್ಜಲೀಕರಣ: ಸಾಮಾನ್ಯವಾಗಿ ಮಕ್ಕಳು ಆಟದ ಮೈದಾನದಲ್ಲಿದ್ದಾಗ ಅವರು ಆಟಗಳಲ್ಲಿಯೇ ಮಗ್ನರಾಗಿ ನೀರನ್ನು ಕುಡಿಯಲು ಮರೆಯುತ್ತಾರೆ. ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಇದನ್ನು ತಡೆಗಟ್ಟಲು, ಸಾಧ್ಯವಿ ರುವಲ್ಲೆಲ್ಲ ನೀರು ಮತ್ತು ಜ್ಯೂಸ್‌ ಒಯ್ಯಿರಿ ಮತ್ತು ಮಕ್ಕಳು ನಿಯಮಿತ ಅಂತರದಲ್ಲಿ ಸಾಕಷ್ಟು ನೀರು ಮತ್ತು ಹಣ್ಣಿನ ರಸವನ್ನು ಕುಡಿಯುವುದನ್ನು ಖಚಿತ ಪಡಿಸಿಕೊಳ್ಳಿ. ದೇಹದಿಂದ ಬೆವರಿನ ರೂಪ  ದಲ್ಲಿ ಹೊರ ಹೋದ ದ್ರವ ವನ್ನು ತುಂಬಿ ಕೊಳ್ಳಲು ಸಹಾಯ ಮಾಡುತ್ತದೆ.

ಸನ್‌ ಸ್ಟ್ರೋಕ್‌: ದೀರ್ಘ‌ಕಾಲದವರೆಗೆ ಬಿಸಿಲಿನಲ್ಲಿದ್ದರೆ ಮತ್ತು ದೌರ್ಬಲ್ಯ, ತಲೆತಿರುಗುವಿಕೆ, ತಲೆನೋವು, ಚರ್ಮದ ಶುಷ್ಕತೆ, ಸೆಳೆತ, ಆಳವಿಲ್ಲದ ಉಸಿರಾಟ, ಹೆಚ್ಚಿದ ಹೃದಯ ಬಡಿತ ಅಥವಾ ಇತರ ರೋಗಲಕ್ಷಣಗಳನ್ನು ಅನುಭವಿಸಿದರೆ ಮಕ್ಕಳು ಬಿಸಿಲಿನ ಹೊಡೆತದಿಂದ ಬಳಲುತ್ತಿರುವ ಲಕ್ಷಣಗಳಾಗಿವೆ.

ನೀರಿನಿಂದ ಹರಡುವ ರೋಗಗಳು: ಮಕ್ಕಳು ಕಲುಷಿತ ನೀರನ್ನು ಕುಡಿಯದಂತೆ ಎಚ್ಚರವಹಿಸುವುದು ಅತ್ಯಗತ್ಯ. ಕಲುಷಿತ ನೀರಿನ ಸೇವನೆಯಿಂದ ಟೈಫಾಯಿಡ್‌, ಅತಿಸಾರ, ಕಾಲರಾ, ಕಾಮಾಲೆ, ಭೇದಿ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಅಧಿಕ.

ಕಣ್ಣುಗಳಿಗೆ ಹಾನಿ: ಮಗುವಿನ ಕಣ್ಣಿನ ಮಸೂರವು ವಯಸ್ಕರಿಗಿಂತ ಹೆಚ್ಚು ಅರೆಪಾರದರ್ಶಕವಾಗಿರುವುದರಿಂದ ಅವು ಸೂರ್ಯನ ಹಾನಿಕಾರಕ ಯುವಿಎ ಮತ್ತು ಯುವಿಬಿ ಕಿರಣಗಳಿಗೆ ಹೆಚ್ಚು ಗುರಿಯಾಗುತ್ತವೆ. ಮಗು ಬಿಸಿಲಿನಲ್ಲಿ ಹೊರಗಿದ್ದರೆ ಸನ್‌ಗ್ಲಾಸ್ ಧರಿಸಿರುವುದನ್ನು ಖಚಿತಪಡಿಸಿ ಕೊಳ್ಳಿ. ದೊಡ್ಡ ಅಂಚು ಹೊಂದಿರುವ ಟೋಪಿ ನಿಮ್ಮ ಮಗು ವಿನ ಕಣ್ಣಿಗೆ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತದೆ. ಯುವಿ ಕಿರಣಗಳು ಮರಳು ಮತ್ತು ನೀರಿನಿಂದ ಪುಟಿದೇಳುತ್ತವೆ. ಕಡಲತೀರದಲ್ಲಿ ಅವು ಹೆಚ್ಚು ಹಾನಿಕಾರಕವಾಗಿರುತ್ತವೆ.

ಮನೆ ಮದ್ದು
ತ್ರಿಫಲಾ ಕಷಾಯದಿಂದ ಕಣ್ಣನ್ನು ಸ್ವಚ್ಛಗೊಳಿಸುವುದು
ಕಣ್ಣುಗಳ ಉರಿಗಾಗಿ: ಹತ್ತಿ ಸ್ವ್ಯಾಬ್‌ ಅನ್ನು ಗುಲಾಬಿ ನೀರಿನಲ್ಲಿ ಅದ್ದಿ ಮತ್ತು ಮುಚ್ಚಿದ ಕಣ್ಣುಗಳ ಮೇಲೆ ಐದು ನಿಮಿಷಗಳ ಕಾಲ ಇರಿಸಿ.
ಅಲರ್ಜಿ: ಸೂರ್ಯನ ಅಲರ್ಜಿ ಮತ್ತು ಶಾಖದ ಅಲರ್ಜಿಯ ಜತೆಗೆ ಇನ್ನೂ ಅನೇಕ ರೀತಿಯ ಅಲರ್ಜಿಗಳು ಚಿಕ್ಕ ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಕಂಡುಬರುತ್ತವೆ.
ಆಹಾರದಿಂದ ಹರಡುವ ರೋಗಗಳು: ಬೆಚ್ಚಗಿನ ಮತ್ತು  ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ ಮತ್ತು ಆದರಿಂದ ಆಹಾರ ವಿಷಯುಕ್ತವಾಗುವುದಲ್ಲದೆ ಆಹಾ ರದ ಸೋಂಕಿನಿಂದ ರೋಗಗಳು ಬೇಸಗೆಯ ದಿನಗಳಲ್ಲಿ ಹೆಚ್ಚು.

ಆಹಾರ ವಿಷ: ಆಹಾರ ವಿಷವು ಬೇಸಗೆಯಲ್ಲಿ ಹರಡುವ ಮತ್ತೊಂದುಕಾಯಿಲೆಯಾಗಿದೆ ಮತ್ತು ಕಲುಷಿತ ಆಹಾರ ಅಥವಾ ನೀರನ್ನು ಸೇವಿಸುವ ಮೂಲಕ ಸಂಭವಿಸಬಹುದು. ನೀವು ವಿವಿಧ ರೀತಿಯ ವೈರಸ್‌ಗಳು, ಬ್ಯಾಕ್ಟೀರಿಯಾಗಳು ಅಥವಾ ಟಾಕ್ಸಿನ್‌ಗಳ ಸಂಪರ್ಕದಲ್ಲಿರುವ ಆಹಾರವನ್ನು ಸೇವಿಸಿದಾಗ ಈ ಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ. ವಾಂತಿ, ಅತಿಸಾರ, ವಾಕರಿಕೆ, ಹೊಟ್ಟೆ ನೋವು ಇತ್ಯಾದಿ ರೋಗದ ಲಕ್ಷಣಗಳಾಗಿವೆ.
-ಮನೆಯಲ್ಲಿ ತಯಾರಿಸಿದ ತಾಜಾ ಊಟವನ್ನು ಸೇವಿಸುವುದನ್ನು ಖಚಿತಪಡಿಸಿಕೊಳ್ಳಿ. ಕಚ್ಚಾ ವಸ್ತುಗಳ ಮೂಲದ ಬಗ್ಗೆ ನಿಮಗೆ ಖಚಿತತೆ ಇಲ್ಲದಿರುವಲ್ಲಿ ಮತ್ತು ಬೀದಿಬದಿ ಆಹಾರ ಸೇವನೆಯಿಂದ ಮಕ್ಕಳನ್ನು ದೂರವಿರಿಸಿ.
-ಒಂದು ಟೀ ಚಮಚ ಕೊತ್ತಂಬರಿ ಬೀಜದ ಪುಡಿಯನ್ನು ತೆಗೆದುಕೊಂಡು ಅದನ್ನು ಒಂದು ಲೋಟ ನೀರಿಗೆ ಸೇರಿಸಿ, ರಾತ್ರಿ ಹಾಗೆಯೇ ಬಿಡಿ. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಸೊಳ್ಳೆಯಿಂದ ಹರಡುವ ರೋಗಗಳು: ಕೆಲವೆಡೆ ನೀರು ಸಂಗ್ರಹವಾಗುವುದರಿಂದ ಸೊಳ್ಳೆಯಿಂದ ಹರಡುವ ರೋಗ ಗಳಾದ ಡೆಂಗ್ಯೂ, ಮಲೇರಿಯಾ ಮತ್ತಿತರ ರೋಗಗಳು ಬರಬಹುದು. ಮಕ್ಕಳನ್ನು ಹೊರಗೆ ಕಳುಹಿಸುವಾಗ ಕೀಟ ನಿವಾರಕವನ್ನು ಹಚ್ಚಿ. ಅವರು ಮನೆಗೆ ಹಿಂದಿರುಗಿದಾಗ ಅವರು ಕೈ ಮತ್ತು ಕಾಲುಗಳನ್ನು ಸಾಬೂನಿನಿಂದ ತೊಳೆಯು ತ್ತಾ ರೆಯೇ?ಎಂಬುದನ್ನು ಖಾತರಿಪಡಿಸಿಕೊಳ್ಳಿ.

ಚಿಕನ್‌ ಪಾಕ್ಸ್‌: ಚಿಕನ್‌ ಪಾಕ್ಸ್‌, ಭಾರತದಲ್ಲಿ ಬೇಸಗೆಯ ಅತ್ಯಂತ ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾಗಿದೆ. ಈ ವೈರಲ್‌ ಸ್ಥಿತಿಯು ದೇಹಾದ್ಯಂತ ಸಣ್ಣ ದ್ರವದಿಂದ ತುಂಬಿದ ಗುಳ್ಳೆಗಳಾಗಿ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಚಿಕ್ಕ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಮನೆ ಮದ್ದು
ಬೇವಿನ ಎಲೆಯ ಪೇಸ್ಟ್‌: ಬೇವಿನ ಗುಣಪಡಿಸುವ ಗುಣಲಕ್ಷಣಗಳು ಚರ್ಮದ ಉರಿಯೂತ ಮತ್ತು ತುರಿಕೆ ವಿರುದ್ಧ ಪರಿಣಾಮಕಾರಿಯಾಗಿದೆ. ದೇಹದಲ್ಲಿನ ಪೀಡಿತ ಭಾಗದ ಮೇಲೆ ಬೇವಿನ ಎಲೆಯ ಪೇಸ್ಟ್‌ ಅನ್ನು ಹಚ್ಚಿ ಮತ್ತು ಶಾಖವನ್ನು ನಿರ್ವಹಿಸಲು ಒಣಗಿದ ಅನಂತರ ಅದನ್ನು ತೊಳೆಯಿರಿ.
ಕರ್ಪೂರ ಮತ್ತು ಬೇವಿನ ಎಣ್ಣೆ : ಪುಡಿ ಮಾಡಿದ ಕರ್ಪೂರದಿಂದ ಮಾಡಿದ ಪೇಸ್ಟ್‌ ಅನ್ನು ಲೇಪಿಸಿ ಮತ್ತು ಬೇವಿನ ಎಣ್ಣೆ ತುರಿಕೆ ಮತ್ತು ಸುಡುವ ಸಂವೇದನೆಯ ವಿರುದ್ಧ ಪರಿಣಾ ಮಕಾರಿಯಾಗಿದೆ. ಬೇವಿನ ಆ್ಯಂಟಿ ಮೈಕ್ರೊಬಿಯಲ್‌ ಗುಣಲಕ್ಷಣಗಳು ಸೋಂಕನ್ನು ತಡೆಯುತ್ತದೆ.

– ಡಾ| ಮಣಿಕರ್ಣಿಕಾ
ಬಂಟ್ವಾಳ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next