Advertisement
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪತಂಜಲಿ ಯೋಗ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಆಯೋಜಿಸಿದ್ದ ಯೋಗ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಒತ್ತಡದ ಜೀವನದಲ್ಲಿ ನೂರೆಂಟು ಕಾಯಿಲೆಗಳಿಗೆ ಗುರಿಯಾಗುತ್ತಿರುವ ಜನತೆ ಯೋಗದ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇಂದಿನ ಜೀವನ ಪದ್ಧತಿಯಿಂದ ಶಾಂತಿ, ನೆಮ್ಮದಿ ಇಲ್ಲದಂತಾಗಿದ್ದು, ಇದರಿಂದ ಮನುಷ್ಯನ ಬದುಕು ಅಧೋಗತಿಯತ್ತ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯೋಗ ನೆಮ್ಮದಿಯ ಬದುಕಿಗೆ ಸಂಜೀವಿನ ಇದ್ದ ಹಾಗೇ. ಇದನ್ನು ಎಲ್ಲರೂ ಅರಿತು ನಿತ್ಯ ಜೀವನದಲ್ಲಿ ಯೋಗಕ್ಕೆ ಅಲ್ಪ ಸಮಯ ಮೀಸಲಿಡುವುದರ ಮೂಲಕ ಆರೋಗ್ಯವಂತಾಗಬೇಕಿದೆ ಎಂದು ತಿಳಿಸಿದರು.
ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದಿಂದ ಮನುಷ್ಯ ತನ್ನ ವ್ಯಕ್ತಿತ್ವ, ನೆಮ್ಮದಿಯ ಬದುಕನ್ನೇ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಇಡೀ ಜಗತ್ತೇ ಇಂದು ಯೋಗಕ್ಕೆ ಮಹತ್ವ ನೀಡುತ್ತಿದೆ. ಹೀಗಾಗಿ ಯೋಗದ ಮೂಲಕ ರೋಗಗಳನ್ನು ದೂರವಿಟ್ಟು ಸ್ವತ್ಛಂದದ ಬದುಕನ್ನು ತಮ್ಮದಾಗಿಸಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ಪಿ.ಎಸ್.ಐ. ಹಾಲೇಶ್ ಧ್ವಜವನ್ನು ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪತಂಜಲಿ ಯೋಗಿ ಸಮಿತಿ ಅಧ್ಯಕ್ಷ ರಾಮಣ್ಣ, ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಪ್ರಕಾಶ್, ಸಂದೀಪ್ ರಾಯಸಂ, ಮೈದಾನ ಗೆಳೆಯರ ಬಳಗದ ಮಹಾಂತೇಶ್, ಕಲ್ಲಪ್ಪ, ಚನ್ನಬಸವನಗೌಡ, ವಿವೇಕ್, ಸಚಿನ್, ಉಪನ್ಯಾಸಕ ಕೆ.ನಾಗರಾಜ, ನಿವೃತ್ತ ಶಿಕ್ಷಕ ಎ.ಎಂ. ವೀರಯ್ಯ ಇದ್ದರು.