Advertisement
ಶುಕ್ರವಾರ ಸಂಜೆ ಶಿವಯೋಗಿ ಮಂದಿರದಲ್ಲಿ ಶರಣ ಸಂಗಮ ಮತ್ತು ಸ್ವಾತಂತ್ರ್ಯ ಸಮತೆ-ರಾಷ್ಟ್ರದ ಏಕತೆ… ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅಭಿವೃದ್ಧಿ ಎಂಬುದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಹಾಗಾಗಿಯೇ ಉತ್ತರ ಕರ್ನಾಟದ ಪ್ರತ್ಯೇಕ ರಾಜ್ಯದ ಬೇಡಿಕೆಯ ಕೂಗು ಕೇಳಿ ಬರುತ್ತಿದೆ. ನಾಡಿನ ಸಮಗ್ರ ಅಭಿವೃದ್ಧಿಯಾದಾಗ ಮಾತ್ರ ಸ್ವಾತಂತ್ರ್ಯದ ಕನಸು ನನಸಾಗುವುದು ಎಂದರು.
ಸ್ವಾತಂತ್ರ್ಯ ಪ್ರತಿಯೊಬ್ಬರ ಆಜನ್ಮ ಸಿದ್ಧ ಹಕ್ಕು. ಹಾಗಾಗಿ ಪ್ರತಿಯೊಬ್ಬರಿಗೆ ಸಮಾನವಾಗಿ ದೊರೆಯಬೇಕು. ಸಾಮಾಜಿಕ, ಆರ್ಥಿಕ, ಧಾರ್ಮಿಕ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಎಲ್ಲ ಹಕ್ಕುಗಳು ಎಲ್ಲರಿಗೂ ದೊರೆತಾಗ ರಾಷ್ಟ್ರದ ಘನತೆ ಹೆಚ್ಚುತ್ತದೆ ಎಂದ ಅವರು, ಬಸವಣ್ಣ, ಬುದ್ಧ, ಅಂಬೇಡ್ಕರ್ ಮುಂತಾದವರು ಪ್ರತಿಪಾದಿಸಿರುವ ಸಮಾನತೆ, ಸ್ವಾತಂತ್ರ್ಯವನ್ನು ಇಂದು ನಾವೆಲ್ಲರೂ ಅನುಷ್ಠಾನಕ್ಕೆ ತಂದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದರು. ಸ್ವಾತಂತ್ರ್ಯ ಸಮತೆ-ರಾಷ್ಟ್ರದ ಏಕತೆ… ವಿಷಯ ಕುರಿತ ಉಪನ್ಯಾಸ ನೀಡಿದ ಸಾಹಿತಿ ಡಾ| ಬಸವರಾಜ್ ನೆಲ್ಲಿಸರ, ಸ್ವಾತಂತ್ರ್ಯ ಸಿಕ್ಕಿದೆ ಎಂಬುದು ಯಾರಿಗೆ, ಎಲ್ಲಿ ಸಿಕ್ಕಿದೆ ಎಂದು ಪ್ರಶ್ನಿಸುವ ವಾತಾವರಣ ಇದೆ. ಸ್ವಾತಂತ್ರ್ಯ ಸಮತೆ-ರಾಷ್ಟ್ರದ ಏಕತೆ ಅನುಭವಿಸಲಾಗುತ್ತಿಲ್ಲ. ಇಂತಹ ಕಾಲಘಟ್ಟದಲ್ಲಿ ರಾಷ್ಟ್ರಭಕ್ತಿಯ ಮನಸುಳ್ಳವರು ರಾಜಕಾರಣಿಗಳಾಗಿ ಹೊರ ಹೊಮ್ಮಬೇಕು. ಆಗ ಆತ್ಮ ಮತ್ತು ಸಮಾಜ ಕಲ್ಯಾಣ ಸಾಧ್ಯ ಆಗುತ್ತದೆ ಎಂದರು.
Related Articles
ಮತ್ತು ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ಎಲ್ಲರಿಗೂ ಸಮಾನವಾಗಿ ಆಹಾರ, ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
Advertisement
ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕ ಪ್ರೊ| ವೈ. ವೃಷಭೇಂದ್ರಪ್ಪ ಮಾತನಾಡಿ, ಮೊದಲು ದೇಶ ಆಮೇಲೆ ನಾವು ಎಂಬ ಭಾವನೆ ಬಂದಾಗ ಮಾತ್ರ ರಾಷ್ಟ್ರದ ಘನತೆ ಎತ್ತಿ ಹಿಡಿಯಲಿಕ್ಕೆ ಸಾಧ್ಯ ಆಗುತ್ತದೆ ಎಂದರು.ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಬಸವಕಿರಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರೊ| ಸೋಮಶೇಖರ್ ನಿರೂಪಿಸಿದರು. ಎಸ್.ಜೆ.ಎಂ. ಪಬ್ಲಿಕ್ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.