Advertisement
ಪುರಸಭೆ ಅಧ್ಯಕ್ಷ ನವೀನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅಲ್ಪ ಸಂಖ್ಯಾತ ಬಡಾವಣೆ ಅಭಿವೃದ್ಧಿ ಯೋಜನೆ ಮೂಲಕ22 ಹಾಗೂ 23 ವಾರ್ಡ್‌ಗೆ60 ಲಕ್ಷ ರೂ. ಅನುದಾನ ನಿಗದಿಯಾಗಿತ್ತು. ನಿಗದಿತ ವಾರ್ಡ್‌ನಲ್ಲಿ ಕಾಮಗಾರಿ ಮಾಡದೆ ಅನುದಾನ ಸಂಪೂರ್ಣ ಮುಗಿದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಯಾವ ವಾರ್ಡ್‌ನಲ್ಲಿ ಕಾಮಗಾರಿ ಆಗಿದೆ ಎನ್ನುವುದು ತಿಳಿಸುತ್ತಿಲ್ಲ ಎಂದು ಸಭೆ ಗಮನಕ್ಕೆ ತಂದರು.
Related Articles
Advertisement
ತಾನು ಅಧ್ಯಕ್ಷನಾದ ಮೇಲೆ 20 ಲಕ್ಷ ರೂ. ಅಂಗಡಿ ಬಾಡಿಗೆ ಹಣವಸೂಲಿಮಾಡಲಾಗಿದೆ,ಯಾರುಬಾಡಿಗೆ ನೀಡುವುದಿಲ್ಲ, ಆ ಮಳಿಗೆಗೆ ಬೀಗ ಜಡಿಯಲಾಗುತ್ತಿದೆ. ಎಂದು ಅಧ್ಯಕ್ಷ ನವೀನ್ ಸಭೆಗೆ ತಿಳಿಸಿದರು.
ಸದಸ್ಯ ಪ್ರಕಾಶ್ ಮಾತನಾಡಿ,15ನೇ ವಾರ್ಡ್‌ನಲ್ಲಿ ಸರ್ಕಾರಿ ನಿವೇಶನಕ್ಕೆ ಅಕ್ರಮವಾಗಿ ಪ್ರವೇಶ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದಾಗ 15ನೇ ವಾರ್ಡ್‌ನ ಸದಸ್ಯೆ ರಾಣಿ ಮಾತನಾಡಿ, ನನ್ನ ವಾರ್ಡ್‌ನ ಬಗ್ಗೆ ಮಾತನಾಡು ವುದು ಬೇಡ, ನಾವು ಅದನ್ನು ಕೇಳುತ್ತೇವೆ ಎಂದರು.
ಇದಕ್ಕೆ ಸುಮ್ಮನಾಗದ ಪ್ರಕಾಶ್, ಸರ್ಕಾರಿ ಆಸ್ತಿ ಅನ್ಯರ ಪಾಲಾಗುತ್ತಿರುವುದನ್ನು ಪ್ರಶ್ನೆ ಮಾಡಿದ್ದೇನೆ ಹೊರತು, ನಿಮ್ಮ ವಾರ್ಡ್‌ನ ಕಾಮಗಾರಿ, ಅನುದಾನದ ಬಗ್ಗೆ ನಾನು ಪ್ರಶ್ನಿಸುತ್ತಿಲ್ಲ, ದಯಮಾಡಿ ಅಧ್ಯಕ್ಷರು ಹಾಗೂ ಶಾಸಕರು ತಮ್ಮ ಸದಸ್ಯರಿಗೆ ತಿಳಿಹೇಳುವುದು ಒಳಿತು ಎಂದರು.
ಸದಸ್ಯರ ಹೆದರಿಸುವುದು ಬೇಡ: ಪುರಸಭೆಯಲ್ಲಿನ ಸಮಸ್ಯೆ ಹಾಗೂ ಅಕ್ರಮದ ಬಗ್ಗೆ ಪ್ರಶ್ನೆ ಮಾಡುತ್ತೇನೆ ಹೊರತು, ನನ್ನ ವೈಯಕ್ತಿಕ ಉಪಯೋಗಕ್ಕಾಗಿ ಮಾತನಾಡುವುದಿಲ್ಲ, ನನ್ನ ಬಾಯಿ ಮುಚ್ಚಿಸಲು ನೀವು ಹೆದರಿಸುತ್ತೀರಾ? ಚರ್ಚೆ ಮಾಡ ಬೇಡಿ ಎಂದು ಹೇಳಿದರೆ ನಾನು ಸಭೆಯಿಂದ ಹೊರಗೆ ಹೋಗುತ್ತೇನೆ, ಸುಮ್ಮನೆ ಹೆದರಿಸುವುದು ತರವಲ್ಲ, ಕಳೆದ ಸಾಲಿನಲ್ಲಿಯೂ ಇದೇ ರೀತಿ ಹೆದರಿಸುತ್ತಿದ್ರಿ ಎಂದು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಶಾಸಕ ಬಾಲಕೃಷ್ಣ, ನಾನು ಏಕವಚನದಲ್ಲಿ ಮಾತನಾಡುವ ವ್ಯಕ್ತಿಯಲ್ಲ, ನೀವು ಎಲ್ಲಾ ವಾರ್ಡ್‌ನ ಬಗ್ಗೆ ಕೇಳಿದಕ್ಕೆ ನಾನು ಏರುಧ್ವನಿಯಲ್ಲಿ ಮಾತನಾಡಿದೆ ಅಷ್ಟೆ ಹೊರತು, ಹೆದರಿಸಿಲ್ಲ ಎಂದು ಹೇಳಿದರು. ಪುರಸಭಾ ಉಪಾಧ್ಯಕ್ಷ ಯೋಗೀಶ್ ಇತರರಿದ್ದರು.