Advertisement

ವಿಪತ್ತು ನಿರ್ವಹಣೆಗೆ ಶೌರ್ಯ ತಂಡ ರಚನೆ

07:07 PM Jul 16, 2021 | Team Udayavani |

ನೆಲಮಂಗಲ: ಮಾನವ ನಿರ್ಮಿತ ಹಾಗೂನೈಸರ್ಗಿಕ ವಿಪತ್ತುಗಳಲ್ಲಿ ಜನರಿಗೆ ಸಹಾಯಮಾಡಲು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರತಿಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾಘಟಕ ಸ್ಥಾಪಿಸಿ ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ಅಖೀಲ ಕರ್ನಾಟಕಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ವಿ.ರಾಮಸ್ವಾಮಿ ತಿಳಿಸಿದರು.

Advertisement

ತಾಲೂಕಿನ ಬಿನ್ನಮಂಗಲದ ಸಿಎನ್‌ಆರ್‌ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಟ್ರಸ್ಟ್‌ ಹಾಗೂ ಅಖೀಲ ಕರ್ನಾಟಕಜನಜಾಗೃತಿ ವೇದಿಕೆ ವತಿಯಿಂದ ನಡೆದಜಿಲ್ಲಾ ವಿಪತ್ತು ನಿರ್ವಹಣಾ ಘಟಕಕ್ಕೆ ಚಾಲನೆನೀಡಿ ಮಾತನಾಡಿದರು.

ವಿವಿಧೆಡೆಕೆಲಸ: ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶೌರ್ಯತಂಡದ ಕೆಲಸ ಆರಂಭವಾಗುತ್ತಿರುವುದುಸಂತೋಷ ತಂದಿದೆ. ಜಿಲ್ಲೆಯಲ್ಲಿ ಸಂಭವಿಸುವಅತಿವೃಷ್ಟಿ, ಅನಾವೃಷ್ಟಿ, ಬರಗಾಲ, ಪ್ರವಾಹ,ಭೂಕುಸಿತ, ಸಿಡಿಲು, ಬಿರುಗಾಳಿ, ಬೆಂಕಿಯಿಂದ ಹಾನಿ, ಸಾಂಕ್ರಾಮಿಕ ರೋಗ, ಅಪಘಾತ, ಕಟ್ಟಡ ಕುಸಿತ ಸೇರಿದಂತೆ ವಿವಿಧ ವಿಪತ್ತುಗಳ ಸಮಯದಲ್ಲಿ ಘಟಕದಸ್ವಯಂಸೇವಕರು ಹೋಗಿ ಸೇವೆ ಮಾಡಲಿದ್ದಾರೆ. ಬಹಳಷ್ಟು ಸ್ವಯಂಸೇವಕರು ಘಟಕಸೇರಿದ್ದು ಅವರಿಗೆ ತರಬೇತಿ ನೀಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಶೌರ್ಯ ತಂಡದಸ್ವಯಂಸೇವಕರ ಸೇವೆ ಜಿಲ್ಲೆಯಜನರಿಗೆ ಸಿಗಲಿದೆ ಎಂದರು.

2ಲಕ್ಷ ಸ್ವಯಂಸೇವಕರು: ಅಖೀಲ ಕರ್ನಾಟಕಜನಜಾಗೃತಿ ವೇದಿಕೆ ರಾಜ್ಯ ಕಾರ್ಯದರ್ಶಿವಿವೇಕ್‌ ವಿ ಪ್ಯಾಸ್‌ ಮಾತನಾಡಿ, ಧರ್ಮಸ್ಥಳ ಶ್ರೀಗಳ ಮಾರ್ಗದರ್ಶನದಲ್ಲಿ ರಾಜ್ಯದ ಪ್ರತಿಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ವೇದಿಕೆ ರಚನೆಗೆ ಮುಂದಾಗಿದ್ದು ರಾಜ್ಯಾದ್ಯಂತ 2 ಲಕ್ಷಕ್ಕೂಹೆಚ್ಚು ಸ್ವಯಂ ಸೇವಕರನ್ನು ಸೃಷ್ಟಿಸುವ ಗುರಿಹೊಂದಲಾಗಿದೆ ಎಂದರು.

ಈ ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಟ್ರಸ್ಟ್‌ ಪ್ರಾದೇಶಿಕ ನಿರ್ದೇಶಕ ಶೀನಪ್ಪ.ಎಂ, ಬೆಂಗಳೂರು ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಯಲುವಳ್ಳಿ ರಮೇಶ್‌, ಕೋಲಾರ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ, ತುಮಕೂರು ಜಿಲ್ಲಾಧ್ಯಕ್ಷರಾದರಾಜಣ್ಣ, ರಾಮಚಂದ್ರಗುಪ್ತ, ಜಿಲ್ಲಾ ಕಾರ್ಯದರ್ಶಿ ದಯಾಶೀಲಾ, ದಿನೇಶ್‌, ಚಂದ್ರಶೇಖರ್‌, ಪ್ರಶಾಂತ್‌, ಮುಖಂಡಕೃÐಪ್ಪ ‌¡ , ಯೋಜನಾಧಿಕಾರಿ ಗಣೇಶ್‌ ಆಚಾರ್ಯ, ತಾಲೂಕುಯೋಜನಾಧಿಕಾರಿ ಪಾರ್ವತಿ ಇ¨ರು.

Advertisement
Advertisement

Udayavani is now on Telegram. Click here to join our channel and stay updated with the latest news.

Next