ಉಡುಪಿ: ಪಂಚರಾಜ್ಯ ಚುನಾವಣೆಯಲ್ಲಿ ಪಂಜಾಬ್, ಮಣಿಪುರ ಹಾಗೂ ಗೋವಾದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿರುವುದು ಜನಮಾನಸದಲ್ಲಿ ಕಾಂಗ್ರೆಸ್ ಪಕ್ಷ ಇನ್ನೂ ಬಲವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿ. ಈ ಚುನಾವಣೆಯ ಫಲಿತಾಂಶವು ಕಾಂಗ್ರೆಸ್ ಮುಕ್ತ ಭಾರತವನ್ನು ಸ್ಥಾಪಿಸುವುದಾಗಿ ಮಾತನಾಡುವ ಬಿಜೆಪಿಗೆ ಸರಿಯಾಗಿ ಉತ್ತರ ನೀಡಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಕಾಂಗ್ರೆಸ್ ಭವನದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದರು.
ಜನರ ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದೊಂದಿಗೆ ನಡೆಸುವ ಜನಸಂಪರ್ಕ ಸಭೆಗೆ ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ಸಂತಸ ತಂದಿದೆ. ಕಂದಾಯ ಇಲಾಖೆಯಲ್ಲಿನ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ದೊರಕಿದೆ. ಆದರೆ ನ್ಯಾಯಾಲಯದ ತೀರ್ಪುಗಳಿಂದಾಗಿ ಕೆಲ ಸಮಸ್ಯೆಗಳು ಇನ್ನೂ ಪರಿಹಾರ ಕಂಡಿಲ್ಲ. ಪಕ್ಷವು ಪ್ರಣಾಳಿಕೆಯಲ್ಲಿ ನೀಡಿದ 160 ಭರವಸೆಗಳಲ್ಲಿ 130ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿವೆ. ರಾಜ್ಯ ಸರಕಾರವು ನಾನಾ ಯೋಜನೆಗಳ ಅನುಷ್ಠಾನದ ಕುರಿತು ಪ್ರಗತಿಯ ಬಗ್ಗೆ ಯೋಜನೆಗಳ ಸ್ಥಿತಿಗತಿಯ ಬಗ್ಗೆ ಕ್ಷಕಿರಣ ಬೀರುವ ಪ್ರತಿಬಿಂಬ ಅಂತರ್ಜಾಲ ತಾಣವನ್ನು ಪ್ರಾರಂಭಿಸಿದೆ. ಪ್ರತೀ ಇಲಾಖೆಯ ಕಾರ್ಯವೈಖರಿಯ ಮಾಹಿತಿ ಹಾಗೂ ಸಮಗ್ರ ಪ್ರಗತಿಯ ಗುರುತನ್ನು ಈ ತಾಣದಲ್ಲಿ ದಾಖಲಿಸಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ, ನಗರ ಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಪಕ್ಷದ ಮುಖಂಡರಾದ ಕೇಶವ ಎಂ. ಕೊಟ್ಯಾನ್, ಬಿ.ಪಿ. ರಮೇಶ್ ಪುಜಾರಿ, ಗಣೇಶ್ ನೆರ್ಗಿ, ಕೀರ್ತಿ ಶೆಟ್ಟಿ, ಯತೀಶ್ ಕರ್ಕೇರ, ಪ್ರಶಾಂತ್ ಪೂಜಾರಿ, ರಮೇಶ್ ಕಾಂಚನ್, ಮಹಿಳಾ ಬ್ಲಾಕ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ, ಸಲಿನ್ ಕರ್ಕಡ, ಅಬ್ದುಲ್ ರೆಹಮಾನ್, ದಿವಾಕರ್ ಕುಂದರ್, ಭಾಸ್ಕರ್ ರಾವ್ ಕಿದಿಯೂರು, ಸುರೇಶ್ ಶೆಟ್ಟಿ ಬನ್ನಂಜೆ, ಜಯಾನಂದ, ನೀರಜ್ ಪಾಟೀಲ್, ಗಣೇಶ್‌ರಾಜ್ ಸರಳೆಬೆಟ್ಟು, ಯಜ್ಞೆàಶ್ ಆಚಾರ್ಯ, ಗಣಪತಿ ಶೆಟ್ಟಿಗಾರ್, ಅಣ್ಣಯ್ಯ ಸೇರಿಗಾರ್, ನಾರಾಯಣ ಕುಂದರ್, ಸುಜಯ ಪೂಜಾರಿ, ಶಶಿರಾಜ್ ಕುಂದರ್, ಶಾಂತರಾಂ ಸಾಲ್ವಾಂಕರ್, ವಿಜಯ ಪೂಜಾರಿ ಉಪಸ್ಥಿತರಿದ್ದರು. ಪ್ರ. ಕಾರ್ಯದರ್ಶಿ ಜನಾರ್ದನ್ ಭಂಡಾರ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.