Advertisement

ಕಣ್ಮರೆಯಾಗುತ್ತಿದೆ ಶನಿ ಗ್ರಹದ “ಉಂಗುರ”!- ಇನ್ನೆಷ್ಟು ವರ್ಷ ಉಳಿಯಲಿದೆ ಎಂಬ ಸಂಶೋಧನೆ

08:53 PM May 03, 2023 | Team Udayavani |

ವಾಷಿಂಗ್ಟನ್‌: ಭೂಮಿಯಿಂದ ಸುಮಾರು 1.5 ಶತಕೋಟಿ ಕಿಲೋಮೀಟರ್‌ ದೂರದಲ್ಲಿ ಸುಂದರವಾದ “ಉಂಗುರ”ದ ಜಗತ್ತೂಂದಿದೆ. ಅದು ನಮ್ಮ ಖಗೋಳ ವಿಜ್ಞಾನಿಗಳನ್ನು ಸಮ್ಮೊಹನಗೊಳಿಸಿರುವ ಅದಮ್ಯವಾದ ಲೋಕ! ಈ ಶನಿ ಗ್ರಹವು ಕೇವಲ ತನ್ನ ಬೃಹತ್‌ ಆಕಾರದಿಂದಷ್ಟೇ ಅಲ್ಲ, ಹಲವು ವೈಶಿಷ್ಟ್ಯಗಳಿಂದಲೂ ಹೆಸರು ಗಳಿಸಿದೆ. ವಿಶಿಷ್ಟವಾದ ಉಂಗುರಗಳಿಂದಲೇ ಹೆಸರಾಗಿರುವ ಶನಿ ಗ್ರಹದಲ್ಲಿ ಉಂಗುರಗಳೇ ಕಣ್ಮರೆಯಾದರೆ?!

Advertisement

ಹೌದು, ಶನಿ ಗ್ರಹದ ಉಂಗುರಗಳು ಅಪಾಯದಲ್ಲಿದ್ದು, ಅವುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಬೃಹದಾಕಾರದ ಮಂಜುಗಡ್ಡೆಯಿಂದ ರೂಪುಗೊಂಡಿರುವ ಶನಿ ಗ್ರಹದ ಉಂಗುರಗಳು ಕ್ರಮೇಣವಾಗಿ ಸವೆಯುತ್ತಿದ್ದು, ಅವು ಎಷ್ಟು ಕಾಲ ಉಳಿಯಲಿವೆ ಎಂದು ಹೇಳಲಾಗದು ಎಂದಿದ್ದಾರೆ ಸಂಶೋಧಕರು.

ಗ್ರಹವನ್ನು ಸುತ್ತುತ್ತಿರುವ ಮಂಜುಗಡ್ಡೆಯ ಬ್ಲಾಕ್‌ಗಳು ಪರಸ್ಪರ ಡಿಕ್ಕಿಯಾಗುತ್ತಾ, ನಿಗೂಢ ರಿಂಗ್‌ಗಳು ತೆಳ್ಳಗಾಗಲು ಕಾರಣವಾಗುತ್ತಿವೆ. ಅವುಗಳು ಎಷ್ಟು ವೇಗವಾಗಿ ಸವೆದು ಹೋಗುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಈ ಬೆಳವಣಿಗೆಯು ನಮ್ಮೆಲ್ಲರನ್ನೂ ಅಚ್ಚರಿಗೆ ನೂಕಿದೆ ಎಂದು ಶನಿಗ್ರಹದ ಕಣ್ಮರೆಯಾಗುತ್ತಿರುವ ಉಂಗುರಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಶೋಧಕರ ತಂಡದ ಮುಖ್ಯಸ್ಥ ಡಾ.ಜೇಮ್ಸ್‌ ಓ ಡೊನೊಗ್‌ ಹೇಳಿದ್ದಾರೆ.

ಶನಿ ಗ್ರಹವು ಭೂಮಿಗಿಂತ 9 ಪಟ್ಟು ದೊಡ್ಡ ಗೃಹ. ಉಂಗುರಗಳು ಆರಂಭದಿಂದಲೂ ಶನಿ ಗ್ರಹದೊಂದಿಗೇ ಇವೆ ಎಂದೇ ಅನೇಕರು ನಂಬಿದ್ದಾರೆ. ಆದರೆ, ಕೇವಲ 100 ದಶಲಕ್ಷ ವರ್ಷಗಳಷ್ಟು ಹಿಂದೆಯಷ್ಟೇ ಶನಿ ಗ್ರಹದ ಉಂಗುರಗಳು ರೂಪುಗೊಂಡಿವೆ ಎನ್ನುತ್ತಾರೆ ಡಾ.ಜೇಮ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next