ಇತ್ತೀಚಿನ ದಿನಗಳಲ್ಲಿ ಈ ಮಕ್ಕಳ ಕಳ್ಳ ಸಾಗಣಿಕೆ ಎಂಬುವುದು ಪ್ರಪಂಚದಾದ್ಯಂತ ಒಂದು ವ್ಯವಹಾರ ರೀತಿಯಾಗಿದೆ. ಈ ಮಕ್ಕಳ ಕಳ್ಳ ಸಾಗಣಿಕೆಯಿಂದ ಆ ಪುಟ್ಟ ಮಕ್ಕಳು ತನ್ನ ಆ ಪುಟ್ಟ- ಪುಟ್ಟ ಮನಸ್ಸಿನಲ್ಲಿ ಚಿಗುರಿದಂತಹ ಕನಸುಗಳನ್ನೂ,ತನ್ನ ಸುಂದರ ಪ್ರಪಂಚ ವನ್ನು ತೊರೆದು ಈ ರೀತಿಯ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಅದಲ್ಲದೆ ಈ ಕಳ್ಳ ಸಾಗಣಿಕೆ ಮಾಡಿದಂತಹ ವ್ಯಕ್ತಿಯ ಗುಲಾಮರಾಗಿ ಆ ಮಕ್ಕಳು ಬದುಕುತಿದ್ದಾರೆ. ಚಿಕ್ಕ ಮಕ್ಕಳ ಆಸೆ ಕನಸು ಅಲ್ಲಿಯೇ ಮುದುರಿಕೊಳ್ಳುತ್ತದೆ . ಅದಲ್ಲದೆ ಈ ರೀತಿಯ ಮಕ್ಕಳ ಕಳ್ಳ ಸಾಗಾಣಿಕೆಯಿಂದ ಮಕ್ಕಳ ಸುಂದರ ಜೀವನವೇ ನಾಶವಾಗುತ್ತದೆ.
ತಂದೆ ತಾಯಿಯ ಮನಸ್ಸಿಗೆ ಮಕ್ಕಳ ಕಳ್ಳ ಸಾಗಣಿಕೆಯಿಂದ ಮನಸ್ಸಿಗೆ ಸಿಡಿಲು ಬಡಿದಂತಾಗುತ್ತದೆ. ತಂದೆ ತಾಯಿಗೆ ಪುಟ್ಟ ಮಗುವಿನ ಪುಟ್ಟ ಮನಸ್ಸಿನ ಜತೆ ಕಳೆಯುವ ಕ್ಷಣವೆಲ್ಲವನ್ನು ಈ ಮಕ್ಕಳ ಕಳ್ಳ ಸಾಗಣಿಕೆ ಎಂಬುವುದು ತಂದೆ ತಾಯಿಯಿಂದ ಕಸಿದುಕೊಳ್ಳುತ್ತಿದೆ.
ಮಕ್ಕಳಿಗೆ ಸಿಹಿ-ತಿಂಡಿ ಎಂದರೆ ತುಂಬಾ ಅಚ್ಚು- ಮೆಚ್ಚು. ಆ ಸಿಹಿ- ತಿಂಡಿಗಳೇ ಮಕ್ಕಳ ಆಸೆಯನ್ನು ದೂರ ಮಾಡುತ್ತಿದೆ. ಕಾರಣ ಈ ಸಿಹಿ ತಿಂಡಿಗಳನ್ನೇ ನೀಡಿ ಮಕ್ಕಳನ್ನು ಅಪರಿಸಿಕೊಂಡು ಹೋಗುತ್ತಿದ್ದಾರೆ.
ಮಕ್ಕಳನ್ನು ನನ್ನ ಹತೋಟಿಗೆ ತೆಗೆದುಕೊಂಡ ಅನಂತರ ಈ ಮಕ್ಕಳನ್ನು ಇತರೆ ದೇಶಗಳಿಗೆ ಮಾರಾಟ ಮಾಡುತ್ತಾರೆ. ಅದಲ್ಲದೆ ಈ ರೀತಿಯ ಕೃತ್ಯಗಳು ನಮ್ಮ ದೇಶಗಳಲ್ಲೂ ಹೆಚ್ಚಾಗಿ ಕಾಣಾಸಿಗುತ್ತವೆ . ಈ ಮಕ್ಕಳ ಸಾಗಣಿಕೆ ಎಂಬುವುದು ಮಕ್ಕಳಿಗೆ ಇಷ್ಟವಿಲ್ಲದ ಕೆಲಸಗಳನ್ನು ತಮ್ಮ ಕೈಯಲ್ಲಿ ಮಾಡುವಂತೆ ಒತ್ತಾಯಿಸುತ್ತದೆ ಅದಲ್ಲದೆ ವೇಶ್ಯಾವಾಟಿಕೆ, ಥಕ್ಸ್ ಫೀಲ್ಡ್, ಭಿಕ್ಷಾಟನೆ ಮುಂತಾದ ಕಾನೂನಿನ ವಿರುದ್ಧ ನಡೆದುಕೊಳ್ಳುತ್ತಾರೆ.
ಈ ರೀತಿಯಾದ ಮಕ್ಕಳ ಸಾಗಣಿಕೆಯಿಂದ ಮಕ್ಕಳು ಮಾನಸಿಕ ಒತ್ತಡಕ್ಕೆ ಬಲಿಯಾಗುತ್ತಾರೆ. ಮಕ್ಕಳ ಮನಸ್ಥಿತಿಯನ್ನು ಹಾಳು ಮಾಡುತ್ತಿದೆ. ಮಕ್ಕಳ ಮನಸ್ಸಿನಲ್ಲಿ ಭಯ ತಳಮಳ ಮೂಡುವಂತೆ ಈ ವಿಚಾರಗಳು ಮಾಡುತ್ತಿವೆ.
ಮಕ್ಕಳನ್ನು ಕದ್ದ ಅನಂತರ ಆ ಮಕ್ಕಳ ಅಂಗಾಂಗಗಳನ್ನು ಮಾರಿ ಆ ವ್ಯಕ್ತಿಗಳು ತನ್ನ ವೈಯಕ್ತಿಕ ದುರಾಸೆಯ ಉದ್ದೇಶದಿಂದ ಈ ಕಳ್ಳ ಸಾಗಣಿಕೆಂಬುದರ ಮೇಲೆ ತನ್ನ ಆಸೆಯನ್ನು ಹೆಚ್ಚಾಗಿ ತೋರುತ್ತಿದ್ದಾರೆ.
ಈ ರೀತಿಯ ಕೃತ್ಯಗಳಿಗೆ ಸರಕಾರ ಸರಿಯಾದ ರೀತಿಯ ಕ್ರಮ ಕೈಗೊಳ್ಳಬೇಕು. ಅದಲ್ಲದೆ ಜನರಿಗೆ ಸರಿಯಾದ ರೀತಿಯ ಮಾಹಿತಿಯನ್ನು ನೀಡಿ ತಮ್ಮ ತಮ್ಮ ಮಕ್ಕಳನ್ನು ಜಾಗೃತರನಾಗಿ ನೋಡಿಕೊಳ್ಳುವಂತೆ ತಿಳಿಸಬೇಕಾಗುತ್ತದೆ. ಈ ಮಕ್ಕಳ ಕಳ್ಳ ಸಾಗಣಿಕೆ ಮಾಡುವವರ ಮೇಲೆ ಕಠಿನವಾದ ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಜೀವನಪೂರ್ತಿ ಶಿಕ್ಷೆಯನ್ನು ನೀಡುವಂತೆ ಈ ಸರ್ಕಾರ ಕ್ರಮ ಕೈಗೊಳ್ಳಬೇಕು.
ಮುಂದೆಂದೂ ಈ ರೀತಿಯ ಮಕ್ಕಳ ಕಳ್ಳ ಸಾಗಣಿಕೆಯು ನಡೆಯದಂತೆ ಸರಕಾರ ನೋಡಿಕೊಳ್ಳಬೇಕು.
ಮಕ್ಕಳೆಂದರೆ ದೇವರು. ಎನ್ನುವ ಈ ಪ್ರಪಂಚದಲ್ಲಿ ಆ ದೇವರೇ ಮಕ್ಕಳ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಣ್ಮರೆ ಯಾಗುತ್ತಿದರೆ.
-ಪ್ರತೀಕ್ಷಾ ರಾವ್, ಶಿರ್ಲಾಲ್
ಎಂಪಿಎಂ ಕಾಲೇಜು, ಕಾರ್ಕಳ