Advertisement

ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಅಂಗವಿಕಲರಿಗೆ ತಪ್ಪದ ಪರದಾಟ

12:39 PM Oct 21, 2021 | Team Udayavani |

ರಾಯಚೂರು: ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ಹೆಸರಾಗಿದ್ದ ರಾಯಚೂರು ರೈಲ್ವೆ ನಿಲ್ದಾಣದಲ್ಲಿ ವಿಕಲಚೇತನರು ಇಂದಿಗೂ ಪರದಾಡುವಂತಾಗಿದೆ.

Advertisement

ವಿಕಲಚೇತನರು, ವೃದ್ಧರಿಗಾಗಿ ಎಕ್ಸಲೇಟ್‌, ಲಿಫ್ಟ್‌ ಮಂಜೂರಾಗಿ ವರ್ಷಗಳೇ ಕಳೆದರೂ ನಿರ್ಮಿಸದಿರುವುದು ಪರದಾಡುವಂತಾಗಿದೆ. ಮಂಗಳವಾರ ನಗರದ ಶಾಂತಿ ಕಾಲೋನಿ ನಿವಾಸಿ ತನ್ಮಯ ಒಂದನೇ ಪ್ಲಾಟ್‌ಫಾರ್ಮ್ನಿಂದ ಎರಡನೇ ಪ್ಲಾಟ್‌ ಫಾರ್ಮ್ಗೆ ಹೊಗಲು ಪರದಾಡಿದ್ದಾರೆ. ಈ ಕುರಿತು ಅವರ ಸಂಬಂಧಿಯೊಬ್ಬರು ಫೋಟೋಗಳ ಸಹಿತ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ವಿಕಲಚೇತನರು ಇಲ್ಲಿನ ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಒಂದು ಗಂಟೆ ಮೊದಲೇ ರೈಲ್ವೆ ನಿಲ್ದಾಣಕ್ಕೆ ಬರುವಂತಾಗಿದ್ದು, ಇನ್ನೊಂದು ಪ್ಲಾಟ್‌ ಫಾರಂ ಸೇರಿಕೊಳ್ಳುವಷ್ಟರಲ್ಲೇ ಸಾಕಾಗಿ ಹೋಗುತ್ತಿದೆ. ಅಲ್ಲದೇ, ರೈಲು ಹಳಿ ದಾಟಲು ಕನಿಷ್ಟ ಇಬ್ಬರಾದರೂ ನೆರವಿಗೆ ಬರಬೇಕಿದೆ. ರ್‍ಯಾಂಪ್‌ ವ್ಯವಸ್ಥೆ ಕೂಡ ಇಲ್ಲದಿರುವುದು ಸಮಸ್ಯೆಯಾಗಿದೆ. ನಿಲ್ದಾಣಕ್ಕೆ ಭೇಟಿ ನೀಡುವ ಅಧಿಕಾರಿಗಳು ಪ್ರತಿ ಬಾರಿ ಭರವಸೆ ನೀಡಿ ಹೋಗುತ್ತಾರಷ್ಟೇ.

ಇಲ್ಲಿನ ಅವ್ಯವಸ್ಥೆ ಕುರಿತು ತನ್ಮಯ ಸಂಬಂಧಿ ವಿನಯಕುಮಾರ್‌ ಮೂತಾ ಎನ್ನುವವರು ರೈಲ್ವೆ ನಿಲ್ದಾಣದ ಅಧಿಕಾರಿಗಳಿಗೆ ಲಿಖೀತ ದೂರು ಸಲ್ಲಿಸಿದ್ದಾರೆ. ಅಲ್ಲದೇ ಕಮಲಕುಮಾರ್‌ ಎನ್ನುವವರು ಇಲ್ಲಿನ ಚಿತ್ರಗಳನ್ನು ಸೆರೆ ಹಿಡಿದು ಟ್ವಿಟರ್‌ನಲ್ಲಿ ಪ್ರಧಾನಿ ಕಚೇರಿ, ರೈಲ್ವೆ ಸಚಿವರಿಗೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ಟ್ಯಾಗ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಕಂದರಾಬಾದ್‌ ರೈಲ್ವೆ ಅಧಿಕಾರಿಗಳು, ಈ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next