Advertisement

ನಗರದಲ್ಲಿ ಭೂಸಾರಿಗೆ ನಿರ್ದೇಶನಾಲಯ

05:49 AM Feb 09, 2019 | |

ಬೆಂಗಳೂರು: ನಗರದಲ್ಲಿ ಉಪನಗರ ರೈಲು ನೀತಿ -2018ರಂತೆ ಸಬ್‌ ಅರ್ಬನ್‌ ರೈಲು ಯೋಜನೆಗೆ ಚಾಲನೆ ನೀಡಲಾಗಿದ್ದು, ಯೋಜನೆಗೆ 23,093 ಕೋಟಿ ರೂ.ಗಳಲ್ಲಿ ವ್ಯಯವಾಗಲಿದೆ ಎಂದು ಅಂದಾಜಿಸಲಾಗಿದೆ.

Advertisement

ಅದರಂತೆ ಯೋಜನೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಅಳವಡಿಸಿಕೊಂಡು ಯೋಜನೆ ಜಾರಿಗೆ ವಿಶೇಷ ಉದ್ದೇಶಿತ ವಾಹಕ (ಎಸ್‌ಪಿವಿ), ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ನಿಗಮವನ್ನು (ಬಿ-ಆರ್‌ಐಡಿಇ) ಸ್ಥಾಪಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಆದರೆ, ಯೋಜನೆಗೆ ಕಗ್ಗಂಟಾದ 19 ಷರತ್ತುಗಳನ್ನು ಕೈಬಿಡಬೇಕೆಂಬ ರೈಲ್ವೆ ಇಲಾಖೆ ಮನವಿ ಬಗ್ಗೆ ಪ್ರಸ್ತಾಪವಿಲ್ಲ. 

* ನಗರದ ರಸ್ತೆಗಳಲ್ಲಿ ದಟ್ಟನೆ ತಗ್ಗಿಸಲು ಹೆಬ್ಟಾಳ, ಬೈಯಪ್ಪನಹಳ್ಳಿ, ಕೆ.ಆರ್‌.ಪುರ, ಕಾಡುಗೋಡಿ, ಚಲ್ಲಘಟ್ಟ ಮತ್ತು ಪೀಣ್ಯ ಪ್ರದೇಶಗಳಲ್ಲಿ ಬಹುಮಾದರಿ ಪ್ರಯಾಣ ಹಬ್‌ (ಮಲ್ಟಿ ಮಾಡಲ್‌ ಟ್ರಾನ್ಸಿಟ್‌ ಹಬ್‌) ಕಾರ್ಯಸಾಧ್ಯತೆ ಅಧ್ಯಯನ.

* ನಗರದ ಪ್ರಮುಖ ಸ್ಥಳಗಳಾದ ಯಶವಂತಪುರ, ಬನಶಂಕರಿ, ವಿಜಯನಗರ, ಪೀಣ್ಯ ಮತ್ತು ಇತರೆ ಪ್ರದೇಶಗಳಲ್ಲಿ ಮೆಟ್ರೊ ರೈಲು ಮತ್ತು ಟಿಟಿಎಂಸಿಗಳ ಅಂತರ್‌ ಕ್ರಮ ಸಂಯೋಜನೆ ವಿನ್ಯಾಸ ಹಾಗೂ ಮೂಲಸೌಕರ್ಯ ಅಭಿವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next