Advertisement

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

04:00 PM Jun 29, 2024 | Team Udayavani |

ಇಂದಿನ ಮನೋರಂಜನೆಯ ಜಗತ್ತಿನಲ್ಲಿ ಕಿರುತೆರೆ ಅದುವೇ ಧಾರಾವಾಹಿಗಳದ್ದೆ ಬಹುಪಾಲು ಇವೆ. ಟಿವಿಯಲ್ಲಿ 24×7 ಬೇಕಾದರೂ ಧಾರಾವಾಹಿಗಳನ್ನು ವೀಕ್ಷಿಸಬಹುದು. ಆದರೆ ಇಲ್ಲಿ ಒಂದು ಪ್ರಶ್ನೆ ಮೂಡುತ್ತದೆ ಈಗಿನ ಧಾರಾವಾಹಿಗಳು ವೀಕ್ಷಕರಲ್ಲಿ ಎಷ್ಟರಮಟ್ಟಿಗೆ ಸಕಾರಾತ್ಮಕತೆಯನ್ನು ಮೂಡಿಸುತ್ತಿದೆ? ಒಬ್ಬ ನಾಯಕಿ ಅವಳಿಗೊಬ್ಬಳು ಖಳನಾಯಕಿ, ನಾಯಕಿಯನ್ನು ಕೊಲ್ಲಲು ಪ್ರಯತ್ನಿಸುವುದು ಕೊನೆಯವರೆಗೂ ವಿಫ‌ಲವಾಗಿ ಉಳಿಯುವುದು.. ನಾಯಕನಿಗೆ ಇಬ್ಬರು ಹೆಂಡತಿಯರು ಇಂತಹ ಕಥೆಗಳು ವೀಕ್ಷಕರಿಗೆ ತಪ್ಪು ಸಂದೇಶವನ್ನು ತಲುಪಿಸುತ್ತಿದೆ.ಇಂದಿನ ಧಾರಾ ವಾಹಿಗಳು ಕೇವಲ ವೀಕ್ಷಕಗಾಗಿ ವೀಕ್ಷಕರಲ್ಲಿ ದ್ವೇಷ, ಅಸೂಯೆ ಇಂತಹ ಭಾವನೆಗಳನ್ನು ಹೆಚ್ಚಿಸುತ್ತಿದೆ.

Advertisement

ಧಾರಾವಾಹಿಗಳ ನಿರ್ದೇಶನದಲ್ಲಿ ವಿಭಿನ್ನರಾಗಿ ನಿಲ್ಲುವವರು ಟಿ.ಎನ್‌.ಸೀತಾರಾಮ…. ಅವರ ಧಾರಾವಾಹಿಗಳು ಹೆಚ್ಚಾಗಿ ಹೆಣ್ಣಿನ ಅಂತರ್ಯ, ಮಾಧ್ಯಮ ವರ್ಗದ ಜನರ ಸಂಕಷ್ಟ, ರಾಜಕೀಯ ಮೇಲಾಟ, ಕಾನೂನು ಹೋರಾಟ ಇಂತಹ ಕಥಾಹಂದರವನ್ನು ಹೊಂದಿರುತ್ತದೆ.ಅಲ್ಲದೇ ಅವರ ಧಾರಾವಾಹಿಗಳು ರಾಜಕೀಯ ಸನ್ನಿವೇಶ, ಕಾನೂನಿನ ಸ್ಪಷ್ಟ ಅರಿವು ಮೂಡಿಸುವುರಿಂದ ವೀಕ್ಷಕರಿಗೆ ಹತ್ತಿರವಾಗುತ್ತದೆ.

ಇವರ ಧಾರಾವಾಹಿಗಳ ಪಾತ್ರಗಳು ಒಂದಕ್ಕಿಂತ ಒಂದು ಅದ್ಭುತವಾಗಿರುತ್ತದೆ ಎಲ್ಲ ಪಾತ್ರಗಳಿಗೂ ಮಹತ್ವವಿದೆ. ಇವರ ಧಾರಾವಾಹಿಗಳ ಸಂಭಾಷಣೆಯಿರಲಿ, ಶಿರ್ಷಿಕೆ ಗೀತೆ, ಹಿನ್ನೆಲೆ ಸಂಗೀತವಿರಲಿ ವೀಕ್ಷಕರ ಮನಸ್ಸನ್ನು ನಾಟುತ್ತದೆ. ಉದಾ: ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ… ತಾನು ಕರಗದೆ ಮಳೆ ಕರೆಯುವುದೆ ಶ್ರಾವಣದ ಸಿರಿ ಮುಗಿಲು ಹೀಗೆ ತುಂಬಾ ಮಾರ್ಮಿಕವಾಗಿ ಇರುತ್ತದೆ.ಇವರ ಧಾರಾವಾಹಿಗಳನ್ನು ಎಲ್ಲ ವಯೋಮಾನದವರು ವೀಕ್ಷಿಸಬಹುದಾಗಿದೆ.

ಇವರು ಮಾಯಾಮೃಗ, ಮನ್ವಂತರ, ಮುಕ್ತ -ಮುಕ್ತ, ಮಹಾಪರ್ವ, ಮಗಳು ಜಾನಕಿ, ಮತ್ತೆ ಮಾಯಾಮೃಗ ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ನನ್ನ ಮೆಚ್ಚಿನದ್ದು ಮಗಳು ಜಾನಕಿ ಇದರಲ್ಲಿ ಜೀವನದಲ್ಲಿ ಭರವಸೆಯನ್ನು ಕಳೆದು ಕೊಂಡ ಹೆಣ್ಣು ಮಗಳೊಬ್ಬಳ ಕಥೆ ಅವಳನ್ನು ಕಾಡುವ ರಾಜಕೀಯ ಸನ್ನಿವೇಶ, ಮಲತಂದೆಯಿಂದ ಪ್ರೀತಿವಂಚಿತಳಾಗಿ, ನಿಜವಾದ ತಂದೆಗೆ ಅವಳ ಹುಡುಕಾಟ, ಇದರ ನಡುವೆ ಅವಳಿಗೆ ಎದುರಾಗುವ ತಿರುವುಗಳನ್ನು ಈ ಧಾರಾವಾಹಿ ನಮ್ಮ ಮುಂದೆ ಪ್ರಸ್ತುತಪಡಿಸುತ್ತದೆ.ಪ್ರತಿ ಧಾರಾವಾಹಿಗಳಲ್ಲಿ ತಾವೇ ವಕೀಲರಾಗಿ (ಇಖಕ) ಪಾತ್ರ ನಿರ್ವಹಿಸುವುದು ವಿಶೇಷ.

ಇಂದಿಗೂ ಇವರ ಧಾರಾವಾಹಿಗಳಿಗೆ ಇವರದೇ ಆದ ಅಭಿಮಾನಿ ಬಳಗವೇ ಇದೆ.ಆದರೆ ಇವರ ಧಾರಾವಾಹಿಗಳನ್ನು ಪ್ರಸಾರ ಮಾಡಲು ಈಗಿನ ಹೆಸರಾಂತ ಟಿವಿ ವಾಹಿನಿಗಳು ಹಿಂದೆಟ್ಟಾಕುತ್ತಿರುವುದು ವಿಪರ್ಯಾಸವೇ ಸರಿ.. ಇನ್ನಾದರೂ ಇಂತಹ ಒಳ್ಳೆಯ ಧಾರಾವಾಹಿಗಳು ಜನರಿಗೆ ತಲುಪುವಂತಾಗಲಿ.

Advertisement

ಸಮೃದ್ಧಿ ಕಿಣಿ

ಡಾ| ಬಿ.ಬಿ.ಹೆಗ್ಡೆ ಕಾಲೇಜು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next