Advertisement

ಮಾಸ್ತಿಗುಡಿ ದುರಂತ: ದಿ.ನಟ ಅನಿಲ್-ಉದಯ್ ಕುಟುಂಬಕ್ಕೆ ನೆರವಾದ ನಿರ್ದೇಶಕ ರವಿ ವರ್ಮಾ

02:28 PM Jun 12, 2021 | Team Udayavani |

ಕನ್ನಡ ಚಿತ್ರರಂಗದಲ್ಲಿ ಮಾಸ್ತಿಗುಡಿ ದುರಂತ ಕರಾಳ ಅಧ್ಯಾಯ. 2016 ರಲ್ಲಿ ನಡೆದ ಈ ದುರಂತ ಚಂದನವನದ ಇಬ್ಬರು ಉದಯೋನ್ಮುಖ ನಟರನ್ನು ಬಲಿ ಪಡೆಯಿತು. ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ವೇಳೆ ಹೆಲಿಕಾಪ್ಟರ್’ನಿಂದ ನೀರಿಗೆ ಹಾರುವ ಸ್ಟಂಟ್ ಮಾಡುವ ವೇಳೆ ರಾಘವ ಉದಯ್ ಮತ್ತು ಅನಿಲ್ ಕುಮಾರ್ ಸಾವನ್ನಪ್ಪಿದ್ದರು.

Advertisement

ಈ ಘಟನೆ ನಂತರ ನಡೆದ ಬೆಳವಣೆಗೆಗಳ ಕುರಿತು ಎಲ್ಲರಿಗೂ ಗೊತ್ತು. ಈ ಚಿತ್ರದ ಸಾಹಸ ನಿರ್ದೇಶಕ ರವಿ ವರ್ಮಾ ಅವರ ಮೇಲೆ ದೂರು ಕೂಡ ದಾಖಲಾಯಿತು.  ಆದರೆ, ಘಟನೆಯಲ್ಲಿ ಮೃತಪಟ್ಟ ಇಬ್ಬರು ನಟರ ಕುಟುಂಬಗಳನ್ನು ಮಾತ್ರ ರವಿ ವರ್ಮಾ ಅವರು ಕೈ ಬಿಟ್ಟಿಲ್ಲ. ಸದ್ಯ ಅಂದು ನಡೆದ ಘಟನೆ ಬಗ್ಗೆ ರವಿ ವರ್ಮಾ ಅವರು ಮಾತನಾಡಿದ್ದಾರೆ. ಮುಂದಿನದನ್ನು ಅವರ ಮಾತಲ್ಲೇ ಕೇಳಿ…

‘ಆ ದುರಂತ ಘಟನೆ ನನ್ನನ್ನೂ ಕಾಡಿತು. ಜೈಲಿಂದ ಹೊರಬಂದ ಮೇಲೆ ಆತ್ಮಹತ್ಯೆ ಮಾಡಿಕೊಳ್ಳೋ ಯೋಚನೆಯನ್ನೂ ಮಾಡಿಬಿಟ್ಟಿದ್ದೆ. ಸಿಕ್ಸ್‍ಪ್ಯಾಕ್ ತೋರಿಸೋ ಸಲುವಾಗಿ ಅನಿಲ್, ಉದಯ್ ಹೇಳಿದರೂ ಲೈಫ್ ಜಾಕೆಟ್ ಹಾಕಿಕೊಳ್ಳಲಿಲ್ಲ. ಆದರೆ ದುರಂತ ನಡೆದುಹೋದ ಮೇಲೆ ನಾನೇ ಹೊಣೆಯಲ್ಲವೇ. ಆಗ ಚಿತ್ರರಂಗದ ಕೆಲವರು ನನಗೆ ಇನ್ನು ಮುಂದೆ ಕೆಲಸವನ್ನೇ ಕೊಡಬಾರದು ಎಂದು ನಿರ್ಧರಿಸಿದ್ದರು. ಆದರೆ ಅಂಬರೀಷಣ್ಣ ಸೇರಿದಂತೆ ಕೆಲವರು ನನಗೆ ಧೈರ್ಯ ತುಂಬಿದರು’.

ಮೃತಪಟ್ಟ ಅನಿಲ್ ಅವರಿಗೆ ಒಬ್ಬ ಮಗಳಿದ್ದಾಳೆ. ನನ್ನ ಮಗಳ ಹೆಸರಲ್ಲಿದ್ದ ಸೈಟ್‍ನ್ನು ಅನಿಲ್ ಮಗಳಿಗೆ ಟ್ರಾನ್ಸ್‍ಫರ್ ಮಾಡಿದೆ. ಜೊತೆಗೆ 5 ಲಕ್ಷ ಡೆಪಾಸಿಟ್ ಇಟ್ಟೆ. ಉದಯ್ ಅವರ ಪೋಷಕರ ಹೆಸರಲ್ಲೂ 5 ಲಕ್ಷ ಡೆಪಾಸಿಟ್ ಇಟ್ಟೆ. ನನ್ನಿಂದೇನಾದ್ರೂ ತಪ್ಪಾಗಿದ್ದರೆ ಕ್ಷಮಿಸಿಬಿಡಿ ಎಂದು ಹೇಳಿಬಂದೆ’.

Advertisement

Udayavani is now on Telegram. Click here to join our channel and stay updated with the latest news.

Next