Advertisement

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಹದ್ದೂರ್’ ಚೇತನ್ ಕುಮಾರ್

01:16 PM Jun 13, 2021 | Team Udayavani |

ಬೆಂಗಳೂರು : ಚಿತ್ರರಂಗದ ಬಹದ್ದೂರು ಸಿನಿಮಾ ಖ್ಯಾತಿಯ ನಿರ್ದೇಶಕ ಚೇತನ್​ ಕುಮಾರ್​ ಅವರು ಇಂದು (ಜೂ.13) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisement

ಮೈಸೂರಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿ ಮಠದಲ್ಲಿ ಸರಳವಾಗಿ ನಡೆದ ಕಲ್ಯಾಣದಲ್ಲಿ ಮಾನಸಾ ಹಾಗೂ ಚೇತನ್ ಕುಮಾರ್ ಸತಿ ಪತಿಯಾಗಿದ್ದಾರೆ.

ಮಾನಸಾ ಅವರು ಚೇತನ್​ಗೆ ಸ್ವಂತ ಅತ್ತೆಯ ಮಗಳು ಎಂಬುದು ವಿಶೇಷ. ಬಹಳ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ಇಂದು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

ಇನ್ನು ಈ ಈ ಶುಭ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಪುನೀತ್​ ರಾಜ್​ಕುಮಾರ್​, ಧ್ರುವ ಸರ್ಜಾ, ಶ್ರೀಮುರಳಿ, ಉಮಾಪತಿ ಶ್ರೀನಿವಾಸ್​ ಗೌಡ, ನಿರ್ದೇಶಕ ಮಹೇಶ್​ ಕುಮಾರ್​ ಮುಂತಾದವರು ಮದುವೆಗೆ ಆಗಮಿಸಿ ನವ ಜೋಡಿಗೆ ಆಶೀರ್ವಾದ ಮಾಡಿದರು. ಲಾಕ್​ಡೌನ್​ ಕಾರಣದಿಂದ ಅಭಿಮಾನಿಗಳಿಗೆ ಆಹ್ವಾನ ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next