Advertisement

ಬಾಕಿ ಬೆಳೆ ಸಾಲ: ಸರಕಾರಿ ಖಾತೆಗೆ ವರ್ಗಾಯಿಸಲು ಬ್ಯಾಂಕ್‌ಗಳಿಗೆ ನಿರ್ದೇಶ

05:30 PM May 26, 2020 | Suhan S |

ಮುಂಬಯಿ, ಮೇ 25: ಮಹಾರಾಷ್ಟ್ರ ಸರಕಾರವು ರೈತರನ್ನು ಹೊಸ ಸಾಲಕ್ಕೆ ಅರ್ಹರನ್ನಾಗಿ ಮಾಡಲು ಅವರ ಬಾಕಿ ಇರುವ ಬೆಳೆ ಸಾಲಗಳನ್ನು ರಾಜ್ಯದ ಖಾತೆಗೆ ವರ್ಗಾಯಿಸಲು ಬ್ಯಾಂಕ್‌ಗಳಿಗೆ ನಿರ್ದೇಶಿಸಿದೆ.

Advertisement

ಈ ಕುರಿತು ಹೊರಡಿಸಲಾಗಿರುವ ಸರಕಾರಿ ಅಧಿಸೂಚನೆಯಲ್ಲಿ ರೈತರ ಪ್ರಸ್ತುತ ಬಾಕಿ ಸಾಲವನ್ನು ರಾಜ್ಯ ಸರಕಾರದ ಬಾಕಿ ಎಂದು ತೋರಿಸುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಈ ನಿರ್ಧಾರವು ರೈತರ ಖಾತೆಗಳಲ್ಲಿರುವ ಬಾಕಿ ಸಾಲವನ್ನು ತೆರವುಗೊಳಿಸಲಿದೆ ಮತ್ತು ಅವರು ಹೊಸ ಬೆಳೆ ಸಾಲಕ್ಕೆ ಅರ್ಹರಾಗಲಿದ್ದಾರೆ. ಈ ವರ್ಷದ ಎ. 1ರ ವರೆಗೆ ಬಾಕಿ ಇರುವ ಬೆಳೆ ಸಾಲಕ್ಕೆ ಈ ನಿರ್ಧಾರವು ಅನ್ವಯವಾಗಲಿದೆ. ಇದರ ಮೇಲಿನ ಬಂಡವಾಳ ಮತ್ತು ಬಡ್ಡಿಯನ್ನು ರಾಜ್ಯ ಸರಕಾರ ಪಾವತಿಸಲಿದೆ ಎಂದು ಅಧಿಸೂಚನೆ ಹೇಳಿದೆ.

ಇದು ರಾಜ್ಯ ಸರಕಾರವು ಕೈಗೊಂಡ ಅತ್ಯಂತ ಅಪರೂಪದ ನಿರ್ಧಾರವಾಗಿದೆ. ಸರಕಾರವು ಕೆಲವು ಸಹಕಾರಿ ಉದ್ಯಮಗಳಿಗೆ ತನ್ನ ಗ್ಯಾರಂಟಿ ನೀಡಿದೆ ಆದರೆ ಅದು ರೈತರ ಸಾಲಗಳ ಹೊಣೆಯನ್ನು ತೆಗೆದುಕೊಂಡಿರುವುದು ಬಹಳ ವಿರಳವಾಗಿದೆ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ. ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಗಟ್ಟಲು ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಸರಕಾರದ ಸಾಲ ಮನ್ನಾ ಯೋಜನೆಯನ್ನು ಭಾಗಶಃ ಜಾರಿಗೆ ತರಲಾಗುತ್ತಿದೆ ಎಂದು ಜಿಆರ್‌ ಹೇಳಿದೆ. ಈವರೆಗೆ ಸುಮಾರು 60 ಶೇಕಡಾ ರೈತರು ಈ ಯೋಜನೆಯ ವ್ಯಾಪ್ತಿಗೆ ಬಂದಿದ್ದಾರೆ. ರಾಜ್ಯದೊಂದಿಗೆ ಯಾವುದೇ ಹಣವಿಲ್ಲದ ಕಾರಣ 11.12 ಲಕ್ಷ ಖಾತೆದಾರರ 8,100 ಕೋ.ರೂ.ಪಾವತಿ ಬಾಕಿ ಉಳಿದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಜಿಆರ್‌ ಹೊರಡಿಸುವ ಉದ್ದೇಶ ವಿವರಿಸಿದ ಅವರು, ಸಾಲ ಮನ್ನಾ ಹಿಂದಿನ ಪರಿಕಲ್ಪನೆಯೆಂದರೆ ರೈತರ ಸಾಲಗಳನ್ನು ತೆರವುಗೊಳಿಸುವುದು ಆಗಿದೆ. ಸರಕಾರದ ಈ ನಿರ್ಣಯದಿಂದ ನಾಬಾರ್ಡ್‌ ಸಾಲವನ್ನು ವಿತರಿಸುವಾಗ ರಾಜ್ಯದ ಹೆಚ್ಚಿನ ರೈತರು ಅದಕ್ಕೆ ಅರ್ಹರಾಗಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next