Advertisement
7 ವರ್ಷಗಳಿಗೆ ಹೋಲಿಕೆ ಮಾಡಿದರೆ ಇದೊಂದು ದಾಖಲೆ ಎಂದು ಮಂಡಳಿ ಪ್ರತಿಪಾದಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 11.5 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆ ಪೈಕಿ ನ. 15ರ ವರೆಗೆ 6.63 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದು ಮಂಡಳಿಯ ವರದಿಯಲ್ಲಿ ಉಲ್ಲೇಖೀಸಲಾಗಿದೆ. 2017-18ನೇ ವಿತ್ತೀಯ ವರ್ಷಕ್ಕೆ ಹೋಲಿಸಿದರೆ, ಸಂಗ್ರಹ ಪ್ರಮಾಣ ಶೇ.16.4ರಷ್ಟು ಹೆಚ್ಚಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2013-14ನೇ ಸಾಲಿನಲ್ಲಿ 3.79 ಕೋಟಿ ಮಂದಿ ರಿಟರ್ನ್ಸ್ ಫೈಲ್ ಮಾಡಿದ್ದರೆ, 2017-18ನೇ ಸಾಲಿನಲ್ಲಿ ಅದರ ಸಂಖ್ಯೆ 6.87 ಕೋಟಿಗೆ ಏರಿದೆ. ಅಂದರೆ, ಇದು ಶೇ.81ರಷ್ಟು ಏರಿಕೆ. ಅಲ್ಲದೆ, 1.07 ಕೋಟಿ ಮಂದಿ ಹೊಸತಾಗಿ ರಿಟರ್ನ್ಸ್ ಫೈಲ್ ಮಾಡಿದ್ದಾರೆ. Advertisement
ನೇರ ತೆರಿಗೆ ಸಂಗ್ರಹದಲ್ಲಿ ಏರಿಕೆ
10:05 AM Dec 04, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.