Advertisement

ಕೈ-ಕಮಲದ ನಡುವೆ ನೇರ ಸ್ಪರ್ಧೆ

09:36 PM Mar 23, 2019 | |

ಕ್ಷೇತ್ರದ ವಸ್ತುಸ್ಥಿತಿ: ಒಂದೇ ಒಂದು ವಾರ್ಡ್‌ ತನ್ನ ಬಳಿ ಇಲ್ಲದಿದ್ದರೂ, ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವುದು ಕಾಂಗ್ರೆಸ್‌ ಮತ್ತು ಮಾಜಿ ಸಚಿವ ರಾಮಲಿಂಗಾರೆಡ್ಡಿ. ಈ ಮೊದಲು ರಾಮಲಿಂಗಾರೆಡ್ಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆದರೆ, ಅವರು ಬಿಟಿಎಂನಲ್ಲಿ ನೆಲೆ ಕಂಡುಕೊಂಡರು. ಬೆನ್ನಲ್ಲೇ ಕ್ಷೇತ್ರದ ಮೇಲಿನ ಹಿಡಿತವೂ ಕೊಂಚ ಕಡಿಮೆ ಆಯಿತು.

Advertisement

ಇದರ ಲಾಭವಾಗಿದ್ದು ಬಿಜೆಪಿಗೆ. ಬಿ.ಎನ್‌. ವಿಜಯಕುಮಾರ್‌ ಸತತ ಎರಡು ಬಾರಿ ಇಲ್ಲಿಂದ ಆಯ್ಕೆಯಾದರು. ಅವರ ನಿಧನದ ನಂತರ ವಿಧಾನಸಭೆ ಉಪ ಚುನಾವಣೆಯಲ್ಲಿ ಮತ್ತೆ ಜಯನಗರ ಕಾಂಗ್ರೆಸ್‌ ತೆಕ್ಕೆಗೆ ಬಂದಿತು. ದಕ್ಷಿಣದ ಉಳಿದೆಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅಲೆಯ ನಡುವೆಯೂ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜಯನಗರದಲ್ಲಿ ಶೇ.50.7 ಮತಗಳು ಬಂದಿದ್ದವು.

ಪ್ರತಿಸ್ಪರ್ಧಿ ಕಾಂಗ್ರೆಸ್‌ ಶೇ.44.7 ಮತಗಳನ್ನು ಪಡೆದಿತ್ತು. ಪ್ರಸ್ತುತ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಇಲ್ಲಿನ ಶಾಸಕಿ. ಇದೆಲ್ಲದರ ನಡುವೆಯೂ ಹಿಂದಿನ ಸರ್ಕಾರದಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದ ರಾಮಲಿಂಗಾರೆಡ್ಡಿ ಅವರರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಖಾತೆಗಳನ್ನು ನೀಡಿಲ್ಲ. ಇದು ಅವರಿಗೆ ಸ್ವಲ್ಪ ಮುನಿಸು ತಂದಿದೆ.

ಆ ಸಿಟ್ಟನ್ನು ಲೋಕಸಭಾ ಚುನಾವಣೆಯಲ್ಲಿ ತೋರಿಸಿದರೂ ಅಚ್ಚರಿ ಇಲ್ಲ. ಇದನ್ನು ಬಿಜೆಪಿ ಲಾಭವಾಗಿ ಪರಿವರ್ತಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಜತೆಗೆ ವಿಧಾನಸಭೆ ಉಪಚುನಾವಣೆಯಲ್ಲಿ ಮತದಾರರು ಬಿಜೆಪಿಗೆ “ಅನುಕಂಪ’ ತೋರಿಸಲಿಲ್ಲ. ಆ ಪ್ರಯೋಗ ಲೋಕಸಭಾ ಚುನಾವಣೆಯಲ್ಲಾದರೂ ಕೆಲಸ ಮಾಡಬಹುದು ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ.

ಪ್ರಮುಖ ಕೊಡುಗೆಗಳು
-ಜನ ಔಷಧ ಕೇಂದ್ರಗಳ ಸ್ಥಾಪನೆ 
-ಶುದ್ಧ ಕುಡಿಯುವ ನೀರಿನ ಘಟಕಗಳು 
-ರಸ್ತೆಗಳ ಅಭಿವೃದ್ಧಿಗೆ ಅನುದಾನ, ಮೆಟ್ರೋ ಯೋಜನೆಗೆ ಒತ್ತು  

Advertisement

ನಿರೀಕ್ಷೆಗಳು 
-ಕ್ರಮಬದ್ಧ ಅಭಿವೃದ್ಧಿ ಆಗುತ್ತಿಲ್ಲ. ಇದರಿಂದ ಮೂಲಸ್ವರೂಪ ಹಾಳಾಗುತ್ತಿದೆ

-ವಾರ್ಡ್‌ಗಳು- 7 
-ಬಿಜೆಪಿ- 6 ಕಾಂಗ್ರೆಸ್‌- 0 
-ಜೆಡಿಎಸ್‌- 1  

-ಜನಸಂಖ್ಯೆ- 3,27,033 
-ಮತದಾರರ ಸಂಖ್ಯೆ- 2,00,333 
-ಪುರುಷರು- 1,01,079 
-ಮಹಿಳೆಯರು- 99,254 

2014ರ ಚುನಾವಣೆಯಲ್ಲಿ  ಚಲಾವಣೆಯಾದ ಮತಗಳು- 1,10,341 (ಶೇ. 59.32)
-ಬಿಜೆಪಿ ಪಡೆದ ಮತಗಳು- 55,998 (ಶೇ. 50.7) 
-ಕಾಂಗ್ರೆಸ್‌ ಪಡೆದ ಮತಗಳು- 49,302 (ಶೇ. 44.7) 
-ಜೆಡಿಎಸ್‌ ಪಡೆದ ಮತಗಳು- 2,341 (ಶೇ. 2.1)  

2014ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದ ಚಿತ್ರಣ
-ಬಿ.ಎನ್‌. ವಿಜಯಕುಮಾರ್‌ ಬಿಜೆಪಿ ಶಾಸಕ 
-ಪಾಲಿಕೆಯಲ್ಲಿ ಬಿಜೆಪಿ ಸದಸ್ಯರು- 5 
-ಕಾಂಗ್ರೆಸ್‌ ಸದಸ್ಯರು- 2 
-ಜೆಡಿಎಸ್‌ ಸದಸ್ಯರು- 0 

ಮಾಹಿತಿ: ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next