ಶಿರಸಿ: ನವೆಂಬರ್ 8 ರಂದು ಗ್ರಹಣ ಇರುವ ಕಾರಣದಿಂದ ಕರ್ನಾಟಕ ತಿರುಪತಿ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನ.7ರಂದೇ ವನ ಭೋಜನ, ಲಕ್ಷ ದೀಪೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಶ್ರೀನಿವಾಸ ಭಟ್ಟ ತಿಳಿಸಿದ್ದಾರೆ.
ವಾರ್ಷಿಕ ಪದ್ಧತಿಯಂತೆ ವನಭೋಜನ, ಲಕ್ಷ ದೀಪೋತ್ಸವ ನಡೆಯಲಿದೆ. ಈ ಬಾರಿ ತ್ರಿಪುರಾಖ್ಯ ದೀಪೋತ್ಸವ ಸೋಮವಾರ ಇರುವ ಕಾರಣ ಬೆಳಿಗ್ಗೆ ವನಕ್ಕೆ ದೇವರು ಹೊರಡುವುದು, ಮಧ್ಯಾನ ವನಭೋಜನ, ಸಂಜೆ ಲಕ್ಷದೀಪೋತ್ಸವ, ಪಕ್ಸೋತ್ಸವ ಇತ್ಯಾದಿ ನಡೆಯಲಿದೆ. 8ರಂದು ಚಂದ್ರಗ್ರಹಣ ಇರುವ ಕಾರಣ ಅಂದು ಶ್ರೀ ದೇವಸ್ಥಾನದಲ್ಲಿ ಯಾವುದೇ ಉತ್ಸವ ಹಾಗೂ ಪ್ರಸಾದ ಭೋಜನ ಇರುವುದಿಲ್ಲ ಎಂದು ಶ್ರೀ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.
ತ್ರಿಪುರಾಖ್ಯ ದೀಪೋತ್ಸವ 7ಕ್ಕೆ
ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ತ್ರಿಪುರಾಖ್ಯ ದೀಪೋತ್ಸವ ನ.7 ರಂದು ಸಂಜೆ 6 ಗಂಟೆಯಿಂದ ನಡೆಯಲಿದ್ದು, ಶಿಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ತಿಳಿಸಿದ್ದಾರೆ.
ಶ್ರೀ ಲಕ್ಷ್ಮೀ ನರಸಿಂಹ ದೇವರ ಸನ್ನಿಧಾನದಲ್ಲಿ ಶ್ರೀಗಳ ಸಾನ್ನಿಧ್ಯದಲ್ಲಿ ದೀಪೋತ್ಸವ ನಡೆಯಲಿದೆ. ಅಯುತ 10 ಸಹಸ್ರ ಸಂಖ್ಯೆಯಲ್ಲಿ ತ್ರಿಪುರಾಖ್ಯ ದೀಪೋತ್ಸವ ಜರುಗಲಿದೆ. ಸಂಜೆ
6 ರಿಂದ ಶ್ರೀದೇವರ ಮಹಾಮಂಗಳಾರತಿ, ದೀಪೋತ್ಸವ, ಪ್ರಸಾದ ವಿತರಣೆ ನಡೆಯಲಿದೆ. ಮರುದಿನ ನ.8 ರಂದು ಗ್ರಹಣ ಇರುವದರಿಂದ ದೀಪೋತ್ಸವ ಒಂದು ದಿನ ಮೊದಲೇ ನಡೆಸಲಾಗುತ್ತಿದೆ ಎಂದು ಪ್ರಕಟನೆಯಲ್ಲಿ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ತಿಳಿಸಿದ್ದಾರೆ.