ಲಂಡನ್: ವಿಕೆಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್ ಅವರು ಇದೀಗ ಕಾಮೆಂಟರಿಯಲ್ಲಿ ಸದ್ದು ಮಾಡುತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಕಾಮೆಂಟರಿ ಮಾಡಿದ್ದ ದಿನೇಶ್ ಕಾರ್ತಿಕ್ ಇದೀಗ ಇಂಗ್ಲೆಂಡ್ – ಶ್ರೀಲಂಕಾ ಸರಣಿಗೂ ವೀಕ್ಷಕ ವಿವರಣೆ ನೀಡುತ್ತಿದ್ದಾರೆ. ಆದರೆ ಈ ವೇಳೆ ಮಾಡಿದ ಒಂದು ಕಾಮೆಂಟ್ ಇದೀಗ ವೈರಲ್ ಆಗಿದೆ.
ಇಂಗ್ಲೆಂಡ್- ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ದಿನೇಶ್ ಕಾರ್ತಿಕ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಮೂರನೇ ಏಕದಿನ ಪಂದ್ಯದ ವೇಳೆ ಕಾರ್ತಿಕ್ ಕ್ಷಮೆ ಕೇಳಿದ್ದಾರೆ.
“ ಬ್ಯಾಟ್ ಗಳು ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಹೋಗುತ್ತದೆ. ಕೆಲ ಬ್ಯಾಟ್ಸಮನ್ ಗಳು ತಮ್ಮ ಬ್ಯಾಟನ್ನು ಇಷ್ಟಪಡುವುದಿಲ್ಲ. ಅವರು ಯಾವಾಗಲೂ ಮತ್ತೊಬ್ಬರ ಬ್ಯಾಟನ್ನು ಇಷ್ಟ ಪಡುತ್ತಾರೆ. ಬ್ಯಾಟ್ ಗಳು ಪಕ್ಕದ ಮನೆಯವನ ಪತ್ನಿಯ ಹಾಗೆ, ಯಾವಾಗಲೂ ಸುಂದರವಾಗಿ ಕಾಣುತ್ತದೆ’ ಎಂದು ದಿನೇಶ್ ಕಾರ್ತಿಕ್ ಕಾಮೆಂಟರಿ ವೇಳೆ ಹೇಳಿದ್ದರು.
ಇದನ್ನೂಓದಿ:ಒಂದೇ ರ್‍ಯಾಂಕಿಂಗ್‌ನಿಂದ ಪಾರುಲ್‌ಗೆ ಒಲಿಂಪಿಕ್ಸ್ ಮಿಸ್!
ಮೂರನೇ ಪಂದ್ಯದ ವೇಳೆ ಕ್ಷಮೆ ಕೇಳಿದ ದಿನೇಶ್ ಕಾರ್ತಿಕ್, ಕಳೆದ ಪಂದ್ಯ ಏನಾಯಿತು ಎಂಬುದಕ್ಕೆ ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ಇದು ನಿಜವಾಗಿಯೂ ನಾನು ಉದ್ದೇಶಿಸಿದ್ದಲ್ಲ. ನಾನು ಎಲ್ಲವನ್ನೂ ತಪ್ಪಾಗಿ ಗ್ರಹಿಸಿದೆ. ನಾನು ಎಲ್ಲರಿಗೂ ಕ್ಷಮೆಯಾಚಿಸುತ್ತೇನೆ. ನಾನು ಹೇಳಿರುವುದು ಖಂಡಿತವಾಗಿಯೂ ಸರಿಯಾದ ವಿಷಯವಲ್ಲ” ಎಂದು ಹೇಳಿದರು.
“ನಿಜವಾಗಿಯೂ ವಿಷಾದವಿದೆ. ಇದು ಪುನಾರಾವರ್ತನೆಯಾಗದು. ನನ್ನ ಆ ಹೇಳಿಕೆಯ ಬಳಿಕ ನನ್ನ ಹೆಂಡತಿ ಮತ್ತು ನನ್ನ ಅಮ್ಮನಿಂದ ಸಾಕಷ್ಟು ಬಯ್ಗುಳ ಸಿಕ್ಕಿತು” ಎಂದು ದಿನೇಶ್ ಹೇಳಿದರು.