Advertisement

Dinesh GunduRao:ಶಾಸಕ ರಾಯರೆಡ್ಡಿ ಸಿಎಂ ಪಕ್ಕ ಇರುವುದರಿಂದ ಹೆಚ್ಚು ಅಭಿವೃದ್ದಿ ನಡೆಯುತ್ತವೆ

04:22 PM Oct 23, 2024 | Team Udayavani |

ಯಲಬುರ್ಗಾ: ಕ್ಷೇತ್ರದ ಜನರ ಹಿತದೃಷ್ಠಿಯಿಂದ ಶಾಸಕ ಬಸವರಾಜ್ ರಾಯರೆಡ್ಡಿ ನೂತನ ಅರೋಗ್ಯ ಕೇಂದ್ರಗಳನ್ನು ತಾತ್ಕಲಿಕ ಕಟ್ಟಡಗಳಲ್ಲಿ ಪ್ರಾರಂಭ ಮಾಡಿಸಿದ್ದಾರೆ. ರಾಯರೆಡ್ಡಿಯವರು ಮುಖ್ಯಮಂತ್ರಿ ಪಕ್ಕ ಇರುತ್ತಾರೆ, ಸಚಿವರಾದ ನಮ್ಮ ಕೆಲಸಗಳೇ ಆಗುವುದಿಲ್ಲ , ಅವರ ಕೆಲಸಗಳು ತ್ವರಿತಗತಿಯಲ್ಲಿ ನಡೆಯುತ್ತವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗೂಂಡುರಾವ್ ಹೇಳಿದರು.

Advertisement

ತಾಲೂಕಿನ‌ ಬಂಡಿ ಗ್ರಾಮದಲ್ಲಿ ಬುಧವಾರ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಹಾಗೂ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭ ನೇರವೇರಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಅರೋಗ್ಯ ಕೇಂದ್ರಗಳ ಅವಶ್ಯಕತೆ ಇದೆ, ಹೊಸ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಸ್ಥಳ ಹುಡಿಕಿ, ಒಂದು ವರ್ಷದಲ್ಲಿ ಕಟ್ಟಡ ಪೂರ್ಣಗೊಂಡು ಅಲ್ಲಿ ಸೇವೆ ಆರಂಭವಾಗಲಿ, ಕುಕನೂರಿನ 100 ಬೆಡ್ ಆಸ್ಪತ್ರೆ ಕಟ್ಟಡವನ್ನು 2026ಕ್ಕೆ ಉದ್ಘಾಟಸಬೇಕು ನಮ್ಮ ಅವಧಿಯಲ್ಲಿ ಆಗಬೇಕು ಮುಂದೆ ಜನ ಏನು ಮಾಡುತ್ತಾರೋ ಗೊತ್ತಿಲ್ಲ ಎಂದರು

ಜನತೆ ಆರೋಗ್ಯದ ಬಗ್ಗೆ ಕಾಳಜಿ ಬೆಳಸಿಕೊಳ್ಳಿ, ಅರೋಗ್ಯ ಇಲಾಖೆ ಜನತೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅರೋಗ್ಯ ಸೇವೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ರಾಜ್ಯ ಸರಕಾರ ಮಾಡುತ್ತಿದೆ, ಕಟ್ಟಡ ಶಂಕುಸ್ಥಾಪನೆಗೆ ಮತ್ತೆ ಬರಬೇಕು, ರಾಯರೆಡ್ಡಿಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಇಲ್ಲದೇ ಹೋದರೇ ನಮ್ಮ‌ಕೆಲಸಗಳಿಗೆ ಅಡ್ಡಿ ಬರುತ್ತಾರೆ ಎಂದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ್ ರಾಯರೆಡ್ಡಿ ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಿಂಗಳಿಗೆ 20 ಲಕ್ಷ ರೂ ಔಷಧಿಯನ್ನು ಪೂರೈಕೆ ಮಾಡಲಾಗುತ್ತಿದೆ, ವಿಶೇಷ ಪ್ರಕರಣ ಎಂದು ಕ್ಷೇತ್ರದ ಮೂರು ಗ್ರಾಮಗಳಲ್ಲಿ ಪಿಎಚ್ ಸಿ ಆರಂಭ ಮಾಡಲಾಗಿದೆ. 4 ಕೋಟಿ ರೂ ಅನುಧಾನವನ್ನು ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದೆ. ಸ್ಥಳ ನಿವೇಶನವನ್ನು ಸ್ಥಳೀಯರು ಒದಗಿಸಿಕೊಡಿ, ಚೆಕ್ಕಡ್ಯಾಂ ಕಾಮಗಾರಿ ಗುಣಮಟ್ಟದಿಂದ ಮಾಡಿಕೊಡಿ, 19 ಕೋಟಿ ರೂ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ಮಾಡಲಾಗುತ್ತದೆ ಎಂದರು.

970 ಕೋಟಿ ರೂ ವೆಚ್ಚದಲ್ಲಿ ಕೆರೆಗಳ ನಿರ್ಮಾಣ ಹಾಗೂ ತುಂಬಿಸಲಾಗುತ್ತದೆ, ಯೋಜನೆಗೆ ಜಮೀನುಗಳು ಸಿಗುತ್ತಿಲ್ಲ, ಖರೀದಿಗೆ ಕಾನೂನು ಬಾಹಿರವಾಗಿ ಹೆಚ್ಚು ಹಣ ನೀಡಿದರೇ ಲೋಕಾಯುಕ್ತ ಸೇರಿದಂತೆ ಜೈಲಿಗೆ ಹೋಗಬೇಕಾಗುತ್ತದೆ ಎಂದರು.

Advertisement

ಬಂಡಿ ಗ್ರಾಮದ ಅಭಿವೃದ್ದಿಗೆ ನಿರಂತರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ, ಜನರ ಋಣ ತೀರಿಸುವ ಕೆಲಸ ಮಾಡುತ್ತಿರುವೆ ಎಂದರು. ವೈದ್ಯರ ಸಮಸ್ಯೆ ನೀಗಿಸಲು ಸಚಿವರ ಗಮನಕ್ಕೆ ತಂದಿದ್ದೇನೆ, ಕುಕನೂರು 100 ಬೆಡ್ ಆಸ್ಪತ್ರೆ ಮಂಜೂರು ಆಗಿದೆ, ಅಲ್ಲಿಯೂ ಸ್ಥಳ ಜಮೀನು ಸಮಸ್ಯೆ ಇದೆ ಎಂದರು. ರಾಜಕಾರಣ ಜನಸೇವೆ ಎಂದು ಭಾವಿಸಿ ಕೆಲಸ ಮಾಡುತ್ತಿರುವೆ ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಟಿ.ಲಿಂಗರಾಜ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಗ್ರಾಪಂ ಅಧ್ಯಕ್ಷೆ ರತ್ನಮ್ಮ ವಣಗೇರಿ, ತಹಸೀಲ್ದಾರ ಬಸವರಾಜ್ ತೆನ್ನಳ್ಳಿ, ತಾಪಂ‌ ಇಒ ಸಂತೋಷಪಾಟೀಲ ಬಿರಾದರ, ಮುಖಂಡರಾದ ಯಂಕಣ್ಣ ಯರಾಶಿ, ಬಸವರಾಜ್ ಉಳ್ಳಾಗಡ್ಡಿ, ಹನುಮಂತಗೌಡ ಪಾಟೀಲ, ವೀರನಗೌಡ ಪೋಲಿಸಪಾಟೀಲ, ಕೆರಿಬಸಪ್ಪ ನಿಡಗುಂದಿ, ಎ.ಜಿ.ಭಾವಿಮನಿ, ಬಿ.ಎಂ.ಶಿರೂರು, ಚಂದ್ರಶೇಖರಯ್ಯಾ ಹಿರೇಮಠ, ರಾಮಣ್ಣ ಸಾಲಭಾವಿ, ಈರಪ್ಪ ಕುಡಗುಂಟಿ, ಮಂಜುನಾಥ ಕಡೇಮನಿ, ಅಶೋಕ ತೋಟದ, ಹುಲಗಪ್ಪ ಬಂಡಿವಡ್ಡರ, ಲೋಕಪಯೋಗಿ ಇಲಾಖೆ, ಸಣ್ಣನೀರಾವರಿ ಇಲಾಖೆಗಳ ಅಧಿಕಾರಿಗಳು ಇತರರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next