Advertisement

ದಿಗ್ವಿಜಯ ಸಿಂಗ್‌ ಪ್ರತಿಕೃತಿ ದಹನ

03:44 PM Mar 01, 2017 | Team Udayavani |

ಕಲಬುರ್ಗಿ: ಟ್ವಿಟರ್‌ನಲ್ಲಿ ಇಸ್ಲಾಂ ಧರ್ಮದ ಕುರಿತು ಹಗುರವಾಗಿ ಹೇಳಿಕೆ ಪ್ರಕಟಿಸಿರುವ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಬೇಷರತ್‌ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಮುಸ್ಲಿಂ ಚೌಕ್‌  ಬಳಿಯಲ್ಲಿ ಜಾತ್ಯತೀತ ಜನತಾದಳ ದಿಗ್ವಿ ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಿತು. 

Advertisement

ಈ ವೇಳೆ ಪ್ರತಿಭಟನಾಕಾರರನ್ನು  ಉದ್ದೇಶಿಸಿ ಮಾತನಾಡಿದ ಜೆಡಿಎಸ್‌ ಮುಖಂಡ ನಾಸೀರ್‌ ಹುಸೇನ್‌ ಉಸ್ತಾದ್‌, ಇಸ್ಲಾಂ ಧರ್ಮವು ಶಾಂತಿ ಸೌಹಾರ್ಧತೆ ಧರ್ಮವಾಗಿದೆ. ಎಲ್ಲರೂ ಒಂದೇ ಎನ್ನುವ ಮನೋಭಾವ ಇಸ್ಲಾಂ ಧರ್ಮದಲ್ಲಿ ಇದೆ. ಆದರೆ ಇಸ್ಲಾಂ ಧರ್ಮ ಕುರಿತು ಟ್ವೀಟರ್‌ ನಲ್ಲಿ ಹೇಳಿಕೆ ನೀಡಿರುವ ದಿಗ್ವಿಜಯ ಸಿಂಗ್‌ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಪಕ್ಷವು ಓಟ್‌ ಬ್ಯಾಂಕ್‌ ರಾಜಕೀಯ ನಿಲ್ಲಿಸಿ ದೇಶದ ಅಖಂಡತೆ ಕುರಿತು ಚಿಂತಿಸಲಿ. ಮುಸ್ಲಿಂ ಜನರ ಮನಸ್ಸಿನಲ್ಲಿ ಇಲ್ಲದ ಸಂಶಯ ಹುಟ್ಟಿಸುವುದು ಸರಿಯಾದ ಧೋರಣೆ ಅಲ್ಲ. ಕೂಡಲೇ ಈ ನಿಟ್ಟಿನಲ್ಲಿ ದಿಗ್ವಿಜಯ ಕ್ಷಮೆ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಉತ್ತರ ಅಲ್ಪಸಂಖ್ಯಾತರ ಘಟಕದ  ಅಧ್ಯಕ್ಷ ಪ್ರಕಾಶ ಖಡಕೆ, ರಾಜ್ಯ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷ ಜಾವೀದ್‌ ಬಾಗವಾನ, ಹಬಿದ್‌ ಸರಮಸ್ತ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಖಲೀಂ ಅಹ್ಮದ ವಕೀಲರು ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next