Advertisement

ಮುಂದೆ ಡಿಜಿಟಲ್‌ ಉದ್ಯೋಗಾವಕಾಶಗಳೇ ಹೆಚ್ಚಳ

06:34 PM Aug 21, 2021 | Team Udayavani |

ಮೈಸೂರು: ಮುಂದಿನ ದಿನಗಳಲ್ಲಿ ಡಿಜಿಟಲ್‌ ಉದ್ಯೋಗಾವಕಾಶಗಳೇ ಹೆಚ್ಚಾಗಲಿದ್ದು, 2030ರ ಹೊತ್ತಿಗೆ ರಾಜ್ಯದ ಡಿಜಿಟಲ್‌ ಆರ್ಥಿಕತೆಗೆ ಮೈಸೂರು, ಹುಬ್ಬಳ್ಳಿ, ಮಂಗಳೂರು ಕ್ಲಸ್ಟರ್‌ಗಳಿಂದ ಶೇ. 5ರಷ್ಟು ಕೊಡುಗೆ ದೊರೆಯುವ ಸಾಧ್ಯತೆ ಇದೆ ಎಂದು ಐಟಿ-ಬಿಟಿ ಸಚಿವ
ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.

Advertisement

ಮೈಸೂರಿನ ಹೆಬ್ಟಾಳ ಕೈಗಾರಿಕೆ ಪ್ರದೇಶದ ಸಿಲ್ವರ್‌ ಸ್ಪಿರಿಟ್‌ ಟೆಕ್ನಾಲಜಿ ಪಾರ್ಕ್‌ ನಲ್ಲಿ ಸ್ಥಾಪಿಸಿರುವ ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಡಿಜಿಟಲ್‌ ಉದ್ಯಮದ ವಹಿವಾಟು 2025ರ ವೇಳೆಗೆ 1 ಟ್ರಿಲಿಯನ್‌ ಆಗಬೇಕೆಂಬುದು ಪ್ರಧಾನಮಂತ್ರಿ ಅವರ ಗುರಿಯಾಗಿದ್ದು, ಆ ವೇಳೆಗೆ ರಾಜ್ಯದ ಡಿಜಿಟಲ್‌ ಉದ್ಯಮದ ಪಾಲು 300-350 ಶತಕೋಟಿಡಾಲರ್‌ ತಲುಪಬೇಕೆಂಬಗುರಿಹಾಕಿಕೊಳ್ಳಲಾಗಿದೆ. ಅವರು, ಆರ್ಥಿಕತೆಗೆ ಯಾವುದೇ ಸವಾಲಿದ್ದರೂ ನಿಗದಿತ ಗುರಿಯನ್ನು ತಲುಪಲು ಸರ್ಕಾರ ಎಲ್ಲ ಕ್ರಮಗಳನ್ನೂಕೈಗೊಂಡಿದೆ ಎಂದರು.

ಐಟಿ ರಫ್ತಿನಲ್ಲಿ ನಂಬರ್‌ 1: ಸದ್ಯಕ್ಕೆ ರಾಜ್ಯವು ವಾರ್ಷಿಕ 54 ಶತಕೋಟಿ ಡಾಲರ್‌ ಮೌಲ್ಯದ ಐಟಿ ರಫ್ತು ವಹಿವಾಟು ನಡೆಸುತ್ತಿದೆ. ಇದು ದೇಶದಲ್ಲೇ  ಅತಿ ಹೆಚ್ಚು. ಇದರ ಪ್ರಮಾಣವನ್ನೂ ಇನ್ನು ಕೆಲವೇ ವರ್ಷಗಳಲ್ಲಿ 150 ಶತ ಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿ
ಹಾಕಿಕೊಳ್ಳಲಾಗಿದೆ. ಅದಲ್ಲದೆ, ಒಟ್ಟಾರೆ ಜಿಎಸ್‌ಡಿಪಿಗೆ ಐಟಿ ವಲಯದ ಪಾಲನ್ನು ಶೇ.30ರಷ್ಟು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ವರ್ಚುವಲ್ ಆನ್ ಲೈನ್ ಮೂಲಕ ಚಿಕ್ಕೋಡಿ ಕೋವಿಡ್ ಟೆಸ್ಟ್ ಸೆಂಟರ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

Advertisement

ಇದಲ್ಲದೆ, ಬಿಯಾಂಡ್‌ ಬೆಂಗಳೂರು ಉಪಕ್ರಮದಡಿ 10 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ ಹಾಗೂ ರಾಜ್ಯದ ಎಲ್ಲ ಪ್ರದೇಶಗಳಲ್ಲೂ ನವೋದ್ಯಮಗಳ ಸ್ಥಾಪನೆಗೆಒತ್ತು ನೀಡುವಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು. ಈ ಎಲ್ಲ ಗುರಿಗಳನ್ನು ಸಾಧಿಸಿಲು ಕರ್ನಾಟಕ ಡಿಜಿಟಲ್‌ ಎಕಾನಮಿಮಿಷನ್‌,ಬಿಯಾಂಡ್‌ ಬೆಂಗಳೂರು, ದೇಶದಲ್ಲೇ ಅತ್ಯುತ್ತಮವಾದ ನವೋದ್ಯಮ ನೀತಿ, ಎಂಜಿಯರಿಂಗ್‌ ಸಂಶೋಧನಾ ಮತ್ತು ಅಭಿವೃದ್ಧಿ ನೀತಿ ಯಿಂದ ಸಾಧ್ಯವಾಗುತ್ತಿದೆ. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೂಡ ದೇಶದಲ್ಲೇ  ಮೊತ್ತ ಮೊದಲಿಗೆ ರಾಜ್ಯದಲ್ಲೇ ಜಾರಿ ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಕೈಗಾರಿಕೆಗಳಿಗೆ ಅಗತ್ಯವಾದ ಅತ್ಯುತ್ತಮ ಕುಶಲ ಮಾನವ ಸಂಪನ್ಮೂಲವನ್ನು ಒದಗಿಸುವದಕ್ಕೆಕ್ರಮ ವಹಿಸಲಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದ 150 ಸರ್ಕಾರಿ ಐಟಿಐಗಳನ್ನು ಅತ್ಯಾಧುನಿಕವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮ ದಲ್ಲಿ ರಾಜವಶಂಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಸಂಸದ ಪ್ರತಾಪ್‌ ಸಿಂಹ, ಸ್ಟಾರ್ಟಪ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಪ್ರಶಾಂತ್‌
ಪ್ರಕಾಶ್‌, ರಾಜ್ಯ ಸರಕಾರದ ಎಲೆಕ್ಟ್ರಾನಿಕ್ಸ್‌ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇಎಸ್‌ ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್‌, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಕೆಡಿ ಇಎಂ ಅಧ್ಯಕ್ಷಬಿ.ವಿ. ನಾಯ್ಡು, ಎನ್‌ಆರ್‌ ಸಮೂಹದ ಪಾಲುದಾರ ಮತ್ತು ಸಿಐಐ ಚೇರ್ಮನ್ ಪವನ್‌ ರಂಗ, ಎಸ್‌ಎಸ್‌ಟಿಪಿ ನಿರ್ದೇಶಕ ಸಂಜಯ್‌ ಎಸ್‌., ಗ್ಲೋಟಚ್‌ ಟೆಕ್ನಾಲಜೀಸ್‌ನ ಅಧ್ಯಕ್ಷೆ ವಿದ್ಯಾ ರವಿ ಚಂದ್ರನ್‌, ಲಹರಿಯ ವ್ಯವಸ್ಥಾಪಕ ನಿರ್ದೇಶಕ ಸಂಜೀವ್‌ಕುಮಾರ್‌ ಗುಪ್ತಾ ಇದ್ದರು.

ಸೈಬರ್‌ ಸೆಕ್ಯೂರಿಟಿ
ಸರ್ಟಿಫಿಕೆಟ್‌ ಕೋರ್ಸ್‌
ಕೆಎಸ್‌ಒಯು ಹಾಗೂ ಬೇರಂಡು ಸಂಸ್ಥೆ ಸಹಯೋಗದಲ್ಲಿ ಸೈಬರ್‌ ಸೆಕ್ಯೂರಿಟಿ ಸರ್ಟಿಫಿಕೆಟ್‌ ಕೋರ್ಸ್‌ನ್ನು ಸೆಪ್ಟಂಬರ್‌ನಿಂದ ಆರಂಭಿಸಲಾಗು
ತ್ತದೆ. ಮೈಸೂರು ಲ್ಯಾನ್ಸರ್‌ ಐಫಾ ಯುದ್ಧ ಗೆಲ್ಲಲು ಪ್ರಮುಖಪಾತ್ರವಹಿಸಿದೆ. ಅದೇ ರೀತಿಯಲ್ಲಿ ದೇಶದ ಸೈಬರ್‌ ಭದ್ರತೆಗಾಗಿ ಈ ಕೋರ್ಸ್‌ ಸಹಾಯಕವಾಗಿದೆ. ಮುಂದಿನ ದಿನದಂದು ಮೈಸೂರು ನಗರ ಸೆಬರ್‌ ಸೆಕ್ಯೂರಿಟಿ ವಾರಿಯರ್‌ಗಳನ್ನು ರೂಪಿಸುವ ಕೇಂದ್ರವಾಗಲಿದೆ ಎಂದು ರಾಜವಂಶಸ್ಥ  ಯದುವೀರ್‌ಕೃಷ್ಣದತ್ತ ಒಡೆಯರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next