Advertisement

ಡಿಜಿಟಲ್‌ ಆರೋಗ್ಯ ಇಂದು ಲೋಕಾರ್ಪಣೆ

01:33 AM Sep 27, 2021 | Team Udayavani |

ಹೊಸದಿಲ್ಲಿ: ದೇಶದ ಪ್ರತಿಯೊಬ್ಬರ ಸಂಪೂರ್ಣ ಆರೋಗ್ಯ ದಾಖಲೆಗಳನ್ನು ಒಳಗೊಂಡ “ವಿಶಿಷ್ಟ ಆರೋಗ್ಯ ಗುರುತಿನ ಸಂಖ್ಯೆ’ ಒದಗಿಸುವ “ಪ್ರಧಾನಮಂತ್ರಿ ಡಿಜಿಟಲ್‌ ಆರೋಗ್ಯ ಯೋಜನೆ’ (ಪಿಎಂ-ಡಿಎಚ್‌ಎಂ) ಸೋಮವಾರ ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ಮೋದಿ ಅವರು ಬೆಳಗ್ಗೆ 11ಕ್ಕೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಈ ಯೋಜನೆಗೆ ದೇಶವ್ಯಾಪಿ ಚಾಲನೆ ನೀಡಲಿದ್ದಾರೆ. ಆಧಾರ್‌ ಮಾದರಿಯ ಗುರುತಿನ ಸಂಖ್ಯೆ ಇದಾಗಿದ್ದು, ನಾಗರಿಕರು ಇಚ್ಛಿಸಿದರೆ ಮಾತ್ರ ಈ ಸೌಲಭ್ಯ ಪಡೆಯಬಹುದಾಗಿದೆ.

Advertisement

ಏನಿದು ರಾಷ್ಟ್ರೀಯ ಆರೋಗ್ಯ ಗುರುತು?
-ವ್ಯಕ್ತಿಯ ಆರೋಗ್ಯದ ಬಗೆಗಿನ ಎಲ್ಲ ಮಾಹಿತಿ,
ದಾಖಲೆ ಸಂಗ್ರಹಿಸಿ ಇರಿಸುವ ವ್ಯವಸ್ಥೆ
-ಡಿಜಿಟಲ್‌ ರೂಪದಲ್ಲಿ ಆರೋಗ್ಯ ದಾಖಲೆ ಸಂಗ್ರಹಿಸಿಡಲು ಬಯಸುವವರಿಗೆ ಅನುಕೂಲ

ಈ ಸಂಖ್ಯೆ ನೀಡುವವರು ಯಾರು?

ಸದ್ಯದ ಮಾಹಿತಿ ಪ್ರಕಾರ ಆರೋಗ್ಯ ಸೇವೆಗಳನ್ನು ನೀಡುವ ಸಂಸ್ಥೆಗಳು (ಆಸ್ಪತ್ರೆಗಳು) ಈ ವಿಶೇಷ ಗುರುತಿನ ಸಂಖ್ಯೆಯನ್ನು ನೀಡಲಿವೆ. ಈ ಸೌಲಭ್ಯ ಉಚಿತವಾಗಿದ್ದು, ಅದನ್ನು ಪಡೆಯುವುದು ನಾಗರಿಕರ ಆಯ್ಕೆಗೆ ಬಿಟ್ಟದ್ದು.

ಇದನ್ನೂ ಓದಿ:ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

ಅನುಕೂಲಗಳೇನು?
01 ಆಸ್ಪತ್ರೆಗೆ ದಾಖಲಾಗುವುದರಿಂದ ಹಿಡಿದು ಡಿಸಾcರ್ಜ್‌ ಆಗುವ ಮಾಹಿತಿಯ ವರೆಗೆ ವ್ಯಕ್ತಿಯ ಆರೋಗ್ಯದ ಎಲ್ಲ ವಿವರಗಳನ್ನು ಕ್ಲೌಡ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.
02 ಪ್ರತೀ ಕಾಯಿಲೆ, ಅದಕ್ಕೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗಳು, ಡಾಕ್ಟರ್‌ ಭೇಟಿ, ಅವರು ಸೂಚಿಸಿದ ಔಷಧಗಳ ಮಾಹಿತಿ ಇದರಲ್ಲಿರುತ್ತದೆ.
03 ನೀವು ಮತ್ತೂಂದು ಸ್ಥಳದಲ್ಲಿ ಇನ್ನೊಬ್ಬರುವೈದ್ಯರನ್ನು ಸಂದರ್ಶಿಸಿದಾಗ ನಿಮ್ಮ ಡಿಜಿಟಲ್‌ಹೆಲ್ತ್‌ ಐಡಿ ಮೂಲಕ ನಿಮ್ಮ ಆರೋಗ್ಯದ ಎಲ್ಲ
ವಿವರಗಳು ವೈದ್ಯರಿಗೆ ಸಿಗುತ್ತವೆ.
04 ಆರೋಗ್ಯ ವಿಮೆ ನೀಡುವ ಕಂಪೆನಿಗಳಿಗೆ ಕ್ಲೇಮು ಪ್ರಕ್ರಿಯೆಗಳನ್ನು ತ್ವರಿತವಾಗಿ ನಡೆಸಲು ಅನುಕೂಲ.

ಹೇಗೆ ಪಡೆಯುವುದು?
-ಮೊಬೈಲ್‌ ಸಂಖ್ಯೆ ಮತ್ತು ಆಧಾರ್‌ ಮೂಲಕ ವಿಶೇಷ ಗುರುತಿನ ಸಂಖ್ಯೆ ಪಡೆಯ ಬಹುದು. ಆಧಾರ್‌ ಮಾಹಿತಿಯನ್ನೇ ನೀಡಬೇಕು.
-ಪ್ರತೀ ವ್ಯಕ್ತಿಯ ವಿಶಿಷ್ಟ ಗುರುತು ಸಂಖ್ಯೆಯನ್ನು ರಾ. ಡಿಜಿಟಲ್‌ ಆರೋಗ್ಯ ಯೋಜನೆಗೆ ಲಿಂಕ್‌ ಮಾಡಬೇಕು.

Advertisement

6 ಪ್ರಧಾನ ಅಂಶಗಳು
1. ಆರೋಗ್ಯ ಐ.ಡಿ.
2. ಡಿಜಿ ಡಾಕ್ಟರ್‌
3. ಆರೋಗ್ಯ ವ್ಯವಸ್ಥೆಗಳ ಮತ್ತು ವೈದ್ಯರ ಮಾಹಿತಿ ಕೋಶ
4. ವೈಯಕ್ತಿಕ ಆರೋಗ್ಯ ದಾಖಲೆ
5. ಇ-ಫಾರ್ಮಸಿ,
6. ಟೆಲಿಮೆಡಿಸಿನ್‌.

ಎಲ್ಲಿ ಜಾರಿ ಇದೆ?
ಚಂಡೀಗಢ ,ಲಡಾಖ್‌,ದಾದ್ರಾ ಮತ್ತು ನಗರ್‌ ಹವೇಲಿ ,ದಾಮನ್‌ ಮತ್ತು ದಿಯು ,ಪುದುಚೇರಿ,ಅಂಡಮಾನ್‌ ಮತ್ತು ನಿಕೋಬಾರ್‌ ,ಲಕ್ಷದ್ವೀಪ

 

Advertisement

Udayavani is now on Telegram. Click here to join our channel and stay updated with the latest news.

Next