Advertisement

ಬಿಡಿ ಬಿಡಿ ಬಜೆಟ್‌

10:05 PM Jul 05, 2019 | Lakshmi GovindaRaj |

ಆರೋಗ್ಯ ವಲಯಕ್ಕೆ 62,000 ಕೋಟಿ ರೂ.: ಆರೋಗ್ಯ ಇಲಾಖೆಗೆ 62,659.12 ಕೋಟಿ ರೂ. ನೀಡಲಾಗಿದೆ. ಕಳೆದೆರಡು ವರ್ಷಗಳಲ್ಲಿ ಈ ವಲಯಕ್ಕೆ ನೀಡಿರುವ ಅತಿ ಹೆಚ್ಚು ಅನುದಾನವಿದು. ಕಳೆದ ಬಾರಿ 52,800 ಕೋಟಿ ರೂ. ನೀಡಲಾಗಿತ್ತು. ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಆಯುಷ್ಮಾನ್‌ ಭಾರ ತಕ್ಕೆ (ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ; ಎಬಿ-ಪಿಎಂಜೆಎವೈ) 6,400 ಕೋಟಿ ರೂ. ನಿಗ ದಿಗೊಳಿಸಲಾಗಿದೆ. 249.96 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಒಟ್ಟು 62,659.12 ಕೋಟಿ ರೂ.ಗಳಲ್ಲಿ 60,908.22 ಕೋಟಿ ರೂ.ಗ ಳನ್ನು ಆರೋಗ್ಯ ಇಲಾಖೆಯ ನಿರ್ವಹಣೆಗೆ, 249.96 ಕೋಟಿ ರೂ.ಗಳನ್ನು ಆಯುಷ್ಮಾನ್‌ ಭಾರತ್‌ ಆರೋಗ್ಯ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿ ಸಲು ಹಾಗೂ 1,349.97 ಕೋಟಿ ರೂ.ಗಳನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ನಡಿ ಆರೋಗ್ಯ ಕೇಂದ್ರಗಳನ್ನು ತೆರೆಯಲು ಬಳಸಲಾಗುತ್ತದೆ.

Advertisement

ಲೋಕಪಾಲಕ್ಕೆ 100 ಕೋಟಿ ರೂ.: ಜನಸಾಮಾನ್ಯರ ತೀವ್ರ ಒತ್ತಾಸೆಯ ಮೇರೆಗೆ ಮಾರ್ಚ್‌ನಲ್ಲಿ ರೂಪು ಗೊಂಡ ಭ್ರಷ್ಟಾಚಾರ ನಿಗ್ರಹ ಸಂಸ್ಥೆ “ಲೋಕಪಾಲ’ಕ್ಕೆ ಈ ಸಾಲಿನ ಬಜೆಟ್‌ನಲ್ಲಿ 101.29 ಕೋಟಿ ರೂ. ಅನುದಾನ ನೀಡಲಾಗಿದೆ. ಜೊತೆಗೆ, ಕೇಂದ್ರೀಯ ವಿಚಕ್ಷಣ ಸಂಸ್ಥೆ (ಸಿವಿಸಿ)ಗೆ 35.55 ಕೋಟಿ ರೂ. ಎತ್ತಿಡಲಾಗಿದೆ. ಜೊತೆಗೆ, 2018-19ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ಲೋಕಪಾಲಕ್ಕೆ ನೀಡಲಾಗಿದ್ದ 4.29 ಕೋಟಿ ರೂ. ಅನುದಾನವನ್ನು ಮುಂದುವರೆಸುವುದಾಗಿ ನಿರ್ಮಲಾ ತಿಳಿಸಿದ್ದಾರೆ. ಸದ್ಯ ಪಂಚತಾರಾ ಹೋಟೆಲ್‌ ಒಂದರಲ್ಲಿ ಲೋಕಪಾಲ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಅದರದ್ದೇ ಕಚೇರಿ ಹೊಂದುವುದಕ್ಕಾಗಿಯೂ ಬಜೆಟ್‌ನಲ್ಲಿ ನೀಡಲಾಗಿರುವ ಸೌಲಭ್ಯ ಬಳಸಿಕೊಳ್ಳುವಂತೆ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next