ವಾಷಿಂಗ್ಟನ್: ಹದಿನೆಂಟು ವರ್ಷಗಳ ಹಿಂದೆ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದಿದ್ದ ಅಲ್‌ಖೈದಾ ದಾಳಿಯ ಹಿಂದೆ ಸೌದಿ ಅರೇಬಿಯಾದ ಪಾತ್ರ ಇದೆಯೇ?
ಹೌದು ಎನ್ನುತ್ತದೆ “ದ ನ್ಯೂಯಾರ್ಕ್ ಟೈಮ್ಸ್’ ನಿಯತಕಾಲಿಕೆ ಮತ್ತು ‘ಪ್ರೊ ಪಬ್ಲಿಕಾ’ ಜಂಟಿಯಾಗಿ ನಡೆಸಿರುವ ತನಿಖಾ ವರದಿ. ಈ ಭೀಕರ ದಾಳಿಯಲ್ಲಿ ಸೌದಿ ಅರೇಬಿಯಾ ಸಾಂದ ರ್ಭಿಕವಾಗಿ ಪಾಲ್ಗೊಂಡ ಬಗ್ಗೆ ಸಾಕ್ಷ್ಯಗಳಿವೆ ಎಂಬುದು ತನಿಖೆಯಿಂದ ಗೊತ್ತಾಗಿದೆ.
Advertisement
ಎರಡೂ ಮಾಧ್ಯಮ ಸಂಸ್ಥೆಗಳು ನಡೆಸಿರುವ ತನಿಖೆಯಲ್ಲಿ ಎಫ್ಬಿಐ ಸಿಗದ ಕೆಲವು ಲಿಂಕ್‌ಗಳ ಅಂಶ ಪತ್ತೆಯಾಗಿದೆ. ಸೌದಿ ಅರೇಬಿಯಾ ಪಾತ್ರದ ಬಗ್ಗೆ ತನಿಖೆ ಬೇಡವೆಂದು ಸೂಚಿಸಲಾಗಿದ್ದರೂ ತನಿಖಾ ಸಂಸ್ಥೆಯ ಅಧಿಕಾರಿಗಳ ಒಂದು ತಂಡ 10 ವರ್ಷ ಕಾಲ 9/11 ಘಟನೆಯ ಬಗ್ಗೆ ನಿಗಾ ಇರಿಸಿತ್ತು. ಸುಮಾರು 50 ಹಾಲಿ ಮತ್ತು ಮಾಜಿ ಎಫ್ಬಿಐ ಅಧಿಕಾರಿಗಳನ್ನು ಸಂದರ್ಶಿಸಿ ಈ ವರದಿ ಸಿದ್ಧಪಡಿಸಲಾಗಿದೆ.
Related Articles
Advertisement
2010ರಲ್ಲಿ ಎಫ್ಬಿಐ ಸೌದಿಯ ಇಸ್ಲಾಮಿಕ್ ವ್ಯವಹಾರ ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳ ಮೇಲೆ ನಿಗಾ ಇರಿಸಲು ನಿರ್ಧರಿಸಿತ್ತು. ಆದರೆ ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ) ಮಧ್ಯ ಪ್ರವೇಶಿಸಿದ್ದರಿಂದ ಅದಕ್ಕೆ ತಡೆ ಬಿತ್ತು.