Advertisement

ಚಿನ್ನ ತಪ್ಪಿಸಿಕೊಂಡರೇ ಸಾಕ್ಷಿ ಮಲಿಕ್‌?

06:35 AM Mar 05, 2018 | |

ಹೊಸದಿಲ್ಲಿ: ಕಿರ್ಗಿಸ್ತಾನದಲ್ಲಿ ನಡೆದ ಏಶ್ಯ ಕುಸ್ತಿಯಲ್ಲಿ ಸಾಕ್ಷಿ ಮಲಿಕ್‌ ಚಿನ್ನ ತಪ್ಪಿಸಿಕೊಂಡರೆ? ಕೆಲ ವರದಿಗಳು ಹೌದು ಎನ್ನುತ್ತವೆ.

Advertisement

ಸಾಕ್ಷಿ ಮೊದಲ ಪಂದ್ಯದಲ್ಲಿ ಚೀನಾ ಸ್ಪರ್ಧಿ ಕ್ಷಿಯಾಜುವಾನ್‌ ವಿರುದ್ಧ ಸೋತಿದ್ದರು. ಕ್ಷಿಯಾಜುವಾನ್‌ ಅಂತಿಮ ಹಂತಕ್ಕೇರಿದ್ದರಿಂದ ಸಾಕ್ಷಿ ರೆಪೆಶಾಜ್‌ ಸುತ್ತಿನಲ್ಲಿ ಆಡುವ ಅವಕಾಶ ಪಡೆದು ಕಂಚಿಗೆ ಕೊರಳೊಡ್ಡಿದರು. ವಾಸ್ತವವಾಗಿ ಸಾಕ್ಷಿ ಮೊದಲ ಪಂದ್ಯದಲ್ಲೇ ಗೆಲ್ಲಬೇಕಿತ್ತು. ಪಂದ್ಯದ ಮೊದಲ 3 ನಿಮಿಷದ ಅಂತ್ಯದ ವೇಳೆ ಅವರು 6-0 ಅಂತರದಿಂದ ಮುಂದಿದ್ದರು. ಆಗ ಇದ್ದಕ್ಕಿದ್ದಂತೆ ಚೀನ ಸ್ಪರ್ಧಿ ಸಾಕ್ಷಿಯ ಹೊಟ್ಟೆಯನ್ನು ಅದುಮಿ ಹಿಡಿದಿದ್ದರಿಂದ 2 ಅಂಕ ಗಳಿಸಿದರು. 

ಅಷ್ಟರಲ್ಲಿ ಸಮಯ ಮುಕ್ತಾಯವಾಯಿತು. ಅಷ್ಟಾದರೂ ಮತ್ತೆ ಸಾಕ್ಷಿಯನ್ನು ಕ್ಷಿಯಾಜುವಾನ್‌ ಹಿಡಿದರು. ರೆಫ್ರಿ ಅದಕ್ಕೂ 2 ಅಂಕ ನೀಡಿದರು. ಸಮಯ ಮುಗಿದ ಮೇಲೆ ನೀಡಿದ ಅಂಕವನ್ನು ಪರಿಗಣಿಸಬಾರದೆಂದು ಭಾರತದ ಕೋಚ್‌ಗಳು ಮೇಲ್ಮನವಿ ಮಾಡಲಿಲ್ಲ. ಇದು ಸಾಕ್ಷಿಯ ಕೈಯಿಂದ ಪಂದ್ಯವನ್ನೇ ಕಸಿಯಿತು. ಪರಿಣಾಮ ಮೊದಲ ಸುತ್ತಿನಲ್ಲಿ 6-2ರಿಂದ ಮುನ್ನಡೆ ಪಡೆದು ಸಾಕ್ಷಿ ಗೆಲ್ಲುವುದು ತಪ್ಪಿತು. ಇದರಿಂದ ಆಕೆಯ ಚಿನ್ನವೂ ತಪ್ಪಿತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next