Advertisement

ಲವ್‌ ಮ್ಯಾರೇಜ್‌ ಆಗ್ತಾರಾ ಧ್ರುವ ?

11:30 AM Oct 08, 2018 | Team Udayavani |

ಧ್ರುವ ಸರ್ಜಾ ಈಗ 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಣ್ಣ  ಚಿರಂಜೀವಿ ಸರ್ಜಾ ಮದುವೆಯಾಗಿ ಸೆಟ್ಲ್ ಆಗಿದ್ದಾರೆ. ಇತ್ತ ಧ್ರುವಸರ್ಜಾ ಅವರ ಲೈನ್‌ ಕೂಡ ಕ್ಲಿಯರ್‌ ಆಗಿದೆ. ಹಾಗಿದ್ದರೆ, ಧ್ರುವಸರ್ಜಾ ಅವರ ಮದುವೆ ಯಾವಾಗ? ಈ ಪ್ರಶ್ನೆ ಮುಂದಿಟ್ಟರೆ, ಧ್ರುವ ಹೇಳ್ಳೋದು ಹೀಗೆ. “ನನಗೆ 31 ಮುಗಿಯುವ ಹೊತ್ತಿಗೆ ಹೇಳ್ತೀನಿ.

Advertisement

ಅದು ಅರೇಂಜ್‌ ಮ್ಯಾರೇಜ್‌ ಆಗಿರುತ್ತೋ, ಲವ್‌ ಮ್ಯಾರೇಜ್‌ ಆಗಿರುತ್ತೋ ಅಂತ ಹಂಡ್ರೆಡ್‌ ಪರ್ಸೆಂಟ್‌ ಹೇಳ್ತೀನಿ. ಲವ್‌ ಆಗಬಹುದೇನೋ? ಖಂಡಿತ ಹಾಗೆ ಆಗುವುದಾದರೆ, ಖಂಡಿತ ಹೇಳ್ತೀನಿ’ ಎನ್ನುವ ಮೂಲಕ ಧ್ರುವಸರ್ಜಾ “ಲವ್‌’ ಬಗ್ಗೆ ಸಣ್ಣ ಸುಳಿವು ಕೊಟ್ಟಂತಾಗಿದೆ. ಧ್ರುವ ಕೈಯಲ್ಲೀಗ ನಾಲ್ಕು ಚಿತ್ರಗಳಿವೆ.

ವಷರಕ್ಕೆ ಎರಡು ಚಿತ್ರ ಕೊಡುವುದಾಗಿ ಹೇಳಿದ್ದರು. ಆದರೆ, ಈ ವರ್ಷವೂ ಒಂದೇ ಸಿನಿಮಾ ಆಗಿದೆ. ಅದಕ್ಕೆ ಕಾರಣ, “ಪೊಗರು’ ಚಿತ್ರದಲ್ಲಿ ಮೂರು ಶೇಡ್‌ ಇರೋದು. ಸಣ್ಣಗಾಗಿ, ದಪ್ಪಗಾಗಿ, ಈಗ ಗಡ್ಡ,ಕೂದಲು ಇರುವ ಗೆಟಪ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಹಾಗಾಗಿ ತಡವಾಗಿದೆ ಎಂಬುದು ಅವರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next